ನಾಪೋಕ್ಲು, ಏ. ೨೨: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಂಡ್ಯೋಳAಡ ಕಪ್ನ ೨೪ ನೇ ದಿನದ ಪಂದ್ಯಾಟದಲ್ಲಿ ಹಾಲಿ ಚಾಂಪಿಯನ್ ಕುಪ್ಪಂಡ (ಕೈಕೇರಿ), ಮಾಜಿ ಚಾಂಪಿಯನ್ಗಳಾದ ನೆಲ್ಲಮಕ್ಕಡ, ಅಂಜಪರವAಡ, ಕೂತಂಡ, ಕಲಿಯಂಡ ಸೇರಿದಂತೆ ಮುಕ್ಕಾಟಿರ (ಬೋಂದ), ನೆರವಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಮೈದಾನ ೧ರಲ್ಲಿ ಅರೆಯಡ ಮತ್ತು ಮಾಜಿ ಚಾಂಪಿಯನ್ ನೆಲ್ಲಮಕ್ಕಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡವು ಅರೆಯಡ ತಂಡವನ್ನು ೪-೧ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ನೆಲ್ಲಮಕ್ಕಡ ತಂಡದ ಪರ ಸೋಮಯ್ಯ, ಅಯ್ಯಪ್ಪ, ಪ್ರತೀಕ್, ತಲಾ ಒಂದೊAದು ಗೋಲು ಗಳಿಸಿದರೆ, ಅರೆಯಡ ತಂಡದ ಪರ ಅಪನ್ ತಿಮ್ಮಯ್ಯ ಒಂದು ಗೋಲು ಗಳಿಸಿದರು. ಮಾಜಿ ಚಾಂಪಿಯನ್ ಅಂಜಪರವAಡ ಮತ್ತು ಪೆಮ್ಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಂಜಪರವAಡ ತಂಡವು ೪-೧ ಗೋಲುಗಳ ಅಂತರದಿAದ ಪೆಮ್ಮಂಡ ತಂಡವನ್ನು ಸೋಲಿಸಿತು. ಅಂಜಪರವAಡ ತಂಡದ ಪರ ಹೇಮಂತ್, ರೋಶನ್, ಅಭಿನ್ ಚಿಟ್ಟಿಯಪ್ಪ, ವಿನಯ್ ಪೂವಣ್ಣ ತಲಾ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಪೆಮ್ಮಂಡ ತಂಡದ ಪರ ಕರಣ್ ಒಂದು ಗೋಲು ಗಳಿಸಿ ತಂಡಕ್ಕೆ ನೆರವಾದರು. ಮಾಜಿ ಚಾಂಪಿಯನ್ ಕೂತಂಡ ಮತ್ತು ಬೊಳ್ಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೂತಂಡ ತಂಡವು ಬೊಳ್ಳಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಕೂತಂಡ ತಂಡದ ಪರ ರಿಕ್ಕಿ ಎರಡು, ಬೋಪಣ್ಣ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಹಾಲಿ ಚಾಂಪಿಯನ್ ಕುಪ್ಪಂಡ (ಕ್ಕೆಕೇರಿ) ಮತ್ತು ನಾಪಂಡ ತಂಡಗಳ ನಡುವಿನ ಸೆಣಸಾಟದಲ್ಲಿ ಕುಪ್ಪಂಡ ತಂಡವು ೧-೦ ಗೋಲುಗಳಿಂದ ನಾಪಂಡ ತಂಡವನ್ನು ಸೋಲಿಸಿತು. ಕುಪ್ಪಂಡ ತಂಡದ ಪರ ಸೋಮಯ್ಯ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
ಮೈದಾನ ೨ರಲ್ಲಿ ನಡೆದ ಅಮ್ಮಣಿಚಂಡ ಮತ್ತು ಮುಕ್ಕಾಟಿರ (ಬೋಂದ) ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಅಮ್ಮಣಿಚಂಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿತು. ಮುಕ್ಕಾಟಿರ ತಂಡದ ಪರ ನಿಶಾಂತ್, ಅಯ್ಯಪ್ಪ ತಲಾ ಒಂದು ಗೋಲು ದಾಖಲಿಸಿದರೆ, ಅಮ್ಮಣಿಚಂಡ ತಂಡದ ಪರ ಬೆನ್ನಿ ಬೆಳ್ಯಪ್ಪ ಒಂದು ಗೋಲು ಗಳಿಸಿದರು. ಮೇಚಿಯಂಡ ಮತ್ತು ನೆರವಂಡ ತಂಡಗಳ ನಡುವಿನ ಪಂದ್ಯದಲ್ಲಿ ನೆರವಂಡ ತಂಡವು ೧-೦ ಗೋಲುಗಳ ಅಂತರದಿAದ ಮೇಚಿಯಂಡ ತಂಡವನ್ನು ಪರಾಭವಗೊಳಿಸಿತು. ನೆರವಂಡ ತಂಡದ ಪರ ನಾಚಪ್ಪ ಗೋಲು ದಾಖಲಿಸಿ ತಂಡದ ನೆರವಿಗೆ ಕಾರಣರಾದರು. ಮಾಜಿ ಚಾಂಪಿಯನ್ ಕಲಿಯಂಡ ಮತ್ತು ಮತ್ರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಲಿಯಂಡ ತಂಡವು ಮಂತ್ರAಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕಲಿಯಂಡ ತಂಡದ ಪರ ಭರತ್, ಕಾರ್ಯಪ್ಪ ತಲಾ ಒಂದು ಗೋಲು ದಾಖಲಿಸಿದರು. -ಪಿ.ವಿ.ಪ್ರಭಾಕರ್
ಕುಂಡ್ಯೋಳAಡ ಹಾಕಿ ಕಾರ್ನಿವಾಲ್ನ ಸಂಭ್ರಮದ ನಡುವೆ ತಾ. ೨೧ ರಂದು ಮೈದಾನದ ಆವರಣದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿತ್ತು. ವೀರಾಜಪೇಟೆಯ ದಂತ ವೈದ್ಯಕೀಯ ಕಾಲೇಜಿನ ತಂಡ, ಮೈಸೂರು ಕಾಮಾಕ್ಷಿ ಆಸ್ಪತ್ರೆಯ ಡಾ|| ದಿನೇಶ್ ಹಾಗೂ ಡಾ|| ರಮ್ಯ, ಕರುಣಾ ಟ್ರಸ್ಟ್ನ ಡಾ|| ಮುಕ್ಕಾಟಿರ ಅಪೂರ್ವ, ಜನರಲ್ ಫಿಜಿಸಿಯನ್ ಡಾ|| ಶುಶ್ರುತ್ಗೌಡ ಹಾಗೂ ತಂಡ, ಡಾ|| ಮಾಪಂಗಡ ಬೆಳ್ಯಪ್ಪ, ಡಾ|| ಮುಕ್ಕಾಟಿರ ಗ್ರೀಷ್ಮ ಭೋಜಮ್ಮ, ಡಾ|| ಚೆಪ್ಪುಡೀರ ಕುನಾಲ್, ಡಾ|| ಮೊಣ್ಣಂಡ ದೇವಯ್ಯ ಅವರುಗಳು ಈ ಉಚಿತ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ - ಸಲಹೆ ನೀಡಿದರು.