ಪ್ರಜಾಪ್ರಭುತ್ವದ ಜೀವಾಳ ಜನಾಧಿಕಾರ

ಜನಾಧಿಕಾರದ ಆತ್ಮ ಮತದಾನ. ಮತದಾನ ಎಂಬುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರು ನಿರ್ವಹಿಸಬೇಕಾದ ಕರ್ತವ್ಯವಾಗಿದೆ. ದೇಶದ ಉತ್ತಮ ಭವಿಷ್ಯಕ್ಕಾಗಿ ಪ್ರತಿಯೊಬ್ಬ ನಾಗರಿಕರು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗೆ ಬೆಂಬಲಿಸುವ ಸಲುವಾಗಿ ಯಾವುದೇ ಪ್ರಭಾವಗಳಿಗೆ ಒಳಗಾಗದೇ ನೈತಿಕ ಮತದಾನ ಮಾಡುವುದು ಅಗತ್ಯವಾಗಿ ರುತ್ತದೆ. ಭವಿಷ್ಯದ ಭವ್ಯ ಭಾರತ ನಿರ್ಮಾಣ ಸಲುವಾಗಿ ಇದೇ ಏಪ್ರಿಲ್ ೨೬ ರಂದು ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ಜಿಲ್ಲೆಯ ಎಲ್ಲಾ ಅರ್ಹ ಮತದಾರರು ತಪ್ಪದೇ ಮತ ಚಲಾಯಿಸೋಣ.

ವರ್ಣೀತ್ ನೇಗಿ, ಭಾ.ಆ.ಸೇ

ಅಧ್ಯಕ್ಷರು ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿ

ಮತದಾನ ಆದ್ಯ ಕರ್ತವ್ಯವಾಗಬೇಕು

ದೇಶದ ಸುಭದ್ರತೆ, ಅಭಿವೃದ್ಧಿ, ಶಾಂತಿ, ದೇಶದ ಗೌರವ, ಸರ್ವರನ್ನು ಸಮಾನರಾಗಿ ಕಾಣುವ ನಾಯಕರನ್ನು ಆಯ್ಕೆ ಮಾಡುವ ಅವಕಾಶವೇ ಈ ಮತದಾನ ಪ್ರಕ್ರಿಯೆ. ಚುನಾವಣೆ ನಮ್ಮೆಲ್ಲರ ಕರ್ತವ್ಯ ಮತ್ತು ದೇಶದ ಭವಿಷ್ಯದ ದೃಷ್ಟಿಯಿಂದ ನಮ್ಮ ಹಕ್ಕು ಕೂಡ ಹೌದು. ದೇಶದ ನಾಗರಿಕರಿಂದ ಆಯ್ಕೆಯಾದ ನಾಯಕರಿಂದ ನಮ್ಮನ್ನು ನಾವು ಉತ್ತಮ ಆಳ್ವಿಕೆಗೆ ಒಳಪಡಿಸಿಕೊಳ್ಳುವ ಸದವಕಾಶ.

ಉತ್ತಮ ನಾಯಕನ ಆಯ್ಕೆ ತಪ್ಪಿದಲ್ಲಿ, ದೇಶದ ಭವಿಷ್ಯ, ಸುಭದ್ರತೆ ತಪ್ಪೀತು. ಅಭಿವೃದ್ಧಿ ಹೊಂದಿದ ದೇಶದ ಸ್ಥಾನಮಾನಕ್ಕಾಗಿ ಉತ್ತಮ ನಾಯಕನ ಆಯ್ಕೆ ಮುಖ್ಯ. ಆದುದರಿಂದ ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.

ಟಿ.ಕೆ. ಸುಧೀರ್,

ಲೆಕ್ಕ ಪರಿಶೋಧಕರು, ಮಡಿಕೇರಿ