ನಾಪೋಕ್ಲು, ಏ. ೨೧: ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೩ನೇ ವರ್ಷದ ಕೊಡವ ಕೌಟುಂಬಿಕ ಬೊಟ್ಟೋಳಂಡ ಕಪ್ ಹಗ್ಗಜಗ್ಗಾಟದ ಫೈನಲ್ ಪಂದ್ಯಾಟದಲ್ಲಿ ಕಾಂಡAಡ ಮಹಿಳಾ ತಂಡ ಹಾಗೂ ಮಾಳೇಟಿರ (ಕುಕ್ಲೂರು) ಪುರುಷ ತಂಡಗಳು ಪ್ರಥಮ ಸ್ಥಾನ ಗಳಿಸಿದವು. ಅಜ್ಜಮಾಡ (ಮಹಿಳಾ), ಮಾಚಿಮಂಡ (ಪುರುಷ) ತಂಡಗಳು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.

ಮಹಿಳಾ ತಂಡಗಳಾದ ಅಜ್ಜಮಾಡ ಮತ್ತು ಕಾಂಡAಡ ತಂಡಗಳ ನಡುವೆ ನಡೆದ ಅಂತಿಮ ಪಂದ್ಯಾಟದಲ್ಲಿ ಕಾಂಡAಡ ತಂಡವು ಅಜ್ಜಮಾಡ ತಂಡವನ್ನು ಪರಾಭವಗೊಳಿಸಿ ಪ್ರಥಮ ಸ್ಥಾನದ ಟ್ರೋಫಿ ಮತ್ತು ನಗದು ಬಹುಮಾನ ಪಡೆಯಿತು. ಮೂರನೇ ಸ್ಥಾನವನ್ನು ಪುದಿಯೊಕ್ಕಡ, ನಾಲ್ಕನೇ ಸ್ಥಾನವನ್ನು ನಾಪಂಡ, ಐದನೇ ಸ್ಥಾನವನ್ನು ಚಟ್ಟಂಡ ತಂಡಗಳು ಪಡೆದುಕೊಂಡವು.

ಪುರುಷರ ನಡುವಿನ ಫೈನಲ್ ಪಂದ್ಯ ಮಾಳೇಟಿರ (ಕುಕ್ಲೂರು) ಮತ್ತು ಮಾಚಿಮಂಡ ತಂಡಗಳ ನಡುವೆ ನಡೆದು ಮಾಳೇಟಿರ ತಂಡವು ಮಾಚಿಮಂಡ ತಂಡವನ್ನು ಪರಾಭವಗೊಳಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಮೂರನೇ ಸ್ಥಾನವನ್ನು ಚೀಯಕಪೂವಂಡ, ನಾಲ್ಕನೇ ಸ್ಥಾನವನ್ನು ಪಟ್ರಪಂಡ, ಐದನೇ ಸ್ಥಾನವನ್ನು ಬಾದುಮಂಡ ಪಡೆದುಕೊಂಡಿತು.

ಈ ಸಂದರ್ಭ ನಡೆದ ಸಭಾ ಕಾರ್ಯಕ್ರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಕೊಡವ ಕ್ರೀಡಾ ನಮ್ಮೆಗಳು ಜಿಲ್ಲೆಯಾದ್ಯಂತ ಸಂಭ್ರಮದಿAದ ನಡೆಯುತ್ತಿದ್ದು, ಕೊಡವ ಹಾಕಿ ಅಕಾಡೆಮಿಯ ಮನವಿ ಮೇರೆಗೆ ಹಾಕಿ ಮೈದಾನ ನಿರ್ಮಿಸಲು ತೋರದಲ್ಲಿ ಐದು ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಎಕರೆ ಜಾಗವನ್ನು ಗುರುತಿಸಲಾಗಿದೆ. ಇದರೊಂದಿಗೆ ಬೇರೆ, ಬೇರೆ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವೀರಾಜಪೇಟೆ ಕ್ಷೇತ್ರದ ಎಲ್ಲಾ ಹೋಬಳಿಗೆ ಒಂದು ಮೈದಾನವನ್ನು ಗುರುತಿಸಿ ಸಕಲ ಸೌಲಭ್ಯಗಳೊಂದಿಗೆ ನಿರ್ಮಿಸಿ ಗ್ರಾಮೀಣ ಪ್ರತಿಭೆಗಳಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ ಎಂದರು.

ಸರ್ಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರಾದ ತೀತಿರ ರೋಷನ್ ಅಪ್ಪಚ್ಚು ಮಾತನಾಡಿ, ಹಿಂದೆ ಕುಟುಂಬದ ನಡುವಿನ ಅಣ್ಣ ತಮ್ಮಂದಿರ, ಅಕ್ಕ ತಂಗಿಯರ ಮುಖ ನೋಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಜಿಲ್ಲೆಯಾದ್ಯಂತ ಹಾಕಿ, ಕ್ರಿಕೆಟ್, ಟಗ್ ಅಫ್‌ವಾರ್ ನಮ್ಮೆಗಳನ್ನು ನಡೆಸುವುದರ ಮೂಲಕ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೊಡಗು ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಟ್ಟೋಳಂಡ ಕುಟುಂಬದ ಪಟ್ಟೆದಾರ ಅಚ್ಚಿ ಪೂಣಚ್ಚ ವಹಿಸಿದ್ದರು.

ವೇದಿಕೆಯಲ್ಲಿ ನಾಪೋಕ್ಲು ಕೊಡವ ಸಮಾಜ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಬೊಟ್ಟೋಳಂಡ ಕುಟುಂಬದ ಹಗ್ಗ ಜಗ್ಗಾಟ ಸಮಿತಿ ಅಧ್ಯಕ್ಷ ಗಣೇಶ್ ಗಣಪತಿ, ಬೊಟ್ಟೋಳಂಡ ಮಿಟ್ಟು ಪೂಣಚ್ಚ, ಬಾಳೆಯಡ ದಿವ್ಯ ಮಂದಪ್ಪ ಮತ್ತಿತರಿದ್ದರು. -ಪಿ.ವಿ.ಪ್ರಭಾಕರ್