ಕೂಡಿಗೆ, ಏ. ೨೧: ಕುಶಾಲನಗರ ದೇವಾಂಗ ಸಂಘದ ವತಿಯಿಂದ ಆದ್ಯ ವಚನಕಾರ ದೇವರ ದಾಸಿ ಮಯ್ಯ ಅವರ ೧,೦೪೫ನೇ ಜಯಂತಿ ಯನ್ನು ಕುಶಾಲನಗರ ಚೌಡೇಶ್ವರಿ ಅಮ್ಮನವರ ದೇವಾಲಯದ ಸಭಾಂಗಣದಲ್ಲಿ ಆಚರಿಸಲಾಯಿತು.

ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಚೌಡೇಶ್ವರಿ ದೇವಾಲಯ ಸಮಿತಿಯ ಅಧ್ಯಕ್ಷ ಡಿ.ವಿ. ರಾಜೇಶ್ ಮಾತನಾಡಿ, ದೇವರ ದಾಸಿಮಯ್ಯ ಅವರ ವಚನಗಳು ಬಸವಣ್ಣ ನವರಿಗಿಂತಲೂ ಹಿಂದಿನ ಕಾಲದಿಂದಲೂ ರಚನೆ ಗೊಂಡು ಇಂದಿನವರೆಗೂ ಸಾಹಿತ್ಯ ಬೆಳವಣಿಗೆಗೆ ಪೂರಕವಾಗಿವೆ.

ಇಂತಹ ವಚನಕಾರರ ವಚನ ಗಳನ್ನು ಅಧ್ಯಯನ ಮಾಡು ವುದರ ಮೂಲಕ ಸಾಹಿತ್ಯ ಮತ್ತು ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವುದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಈ ಸಂದರ್ಭ ದೇವಾಲಯ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಸೋಮಶೇಖರ್, ಡಿ.ವಿ. ಚಂದ್ರು, ರಾಕಿ, ಪ್ರಧಾನ ಕಾರ್ಯ ದರ್ಶಿ ಡಿ.ಆರ್. ಕೃಷ್ಣಕುಮಾರ್, ಖಜಾಂಚಿ ಡಿ.ಜಿ. ಪ್ರದೀಪ್, ಸಂಚಾಲಕ ಡಿ.ಎನ್. ಶಶಿ, ಮಹಿಳಾ ಮಂಡಳಿ ಅಧ್ಯಕ್ಷೆ ಪದ್ಮಾ ಮಹೇಶ್, ಶುಭ ರವಿಕುಮಾರ್, ಶೋಭಾ ಅನಿಲ್, ರೂಪ ಕುಮಾರ್, ಗೀತಾ ಸೋಮಶೇಖರ್, ಶುಭ ಸೋಮಶೆಟ್ಟಿ, ಗೌರವಾಧ್ಯಕ್ಷ ಡಿ.ಟಿ. ವಿಜೇಂದ್ರ ಹಾಗೂ ಸಂಘದ ನಿರ್ದೇಶಕರು, ಪ್ರಮುಖರು ಹಾಜರಿದ್ದರು.