ಗೋಣಿಕೊಪ್ಪ ವರದಿ, ಏ. ೨೧: ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಗೆ ಭಾನುವಾರ ಚಾಲನೆ ನೀಡಲಾಯಿತು.

ಸ್ಥಳೀಯ ಗಣಪತಿ ದೇವಸ್ಥಾನದಲ್ಲಿ ನಮ್ಮೆಯ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿ ಮೈದಾನಕ್ಕೆ ಅರಮಣಮಾಡ ಕುಟುಂಬಸ್ಥರು ಸಾಂಪ್ರದಾಯಿಕ ಉಡುಪಿನೊಂದಿಗೆ ಮೆರವಣಿಗೆ ಮೂಲಕ ಆಗಮಿಸಿದರು. ಎಜ್ಡಿ ಕ್ಲಬ್ ಸದಸ್ಯರು ಬೈಕ್ ಜಾಥಾ ನಡೆಸಿದರು.

ವೀರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿಗಳು ಕೊಡವ ನೃತ್ಯದ ಮೂಲಕ ಸಾಂಸ್ಕೃತಿಕ ಮೆರಗು ನೀಡಿದರು. ಉಮ್ಮತ್ತಾಟ್, ಬೊಳಕಾಟ್, ಕೊಡವ ಆಟ್ ಗಮನ ಸೆಳೆಯಿತು. ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಅರಮಣಮಾಡ ಕುಟುಂಬ ಅಧ್ಯಕ್ಷ ಮುತ್ತು ಮುತ್ತಪ್ಪ ಅಕಾಡೆಮಿ ಧ್ವಜ ಮತ್ತು ಕುಟುಂಬ ಧ್ವಜಾರೋಹಣ ನೆರವೇರಿಸಿದರು.

ಸಭಾ ಕಾರ್ಯಕ್ರಮ: ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಮಾತನಾಡಿ, ಕೊಡವತಿಯರ ಸಂಖ್ಯೆ ಕಡಿಮೆ ಇರುವ ಕಾಲದಲ್ಲಿ ಮಹಿಳಾ ತಂಡಗಳು ಕ್ರೀಡೆಯಲ್ಲಿ ಹೆಚ್ಚು ತೊಡಗಿಕೊಂಡಿರುವುದು ಶ್ಲಾಘನೀಯ ಎಂದರು. ಗ್ರಾಮೀಣ ಮಟ್ಟದಲ್ಲಿ ಕ್ರೀಡೆಯಲ್ಲಿ ಮುಂದಿರುವ ಮಕ್ಕಳಿಗೆ ಪ್ರೋತ್ಸಾಹ ನೀಡಿ ಅವರನ್ನು ರಾಷ್ಟಿçÃಯ ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿವುದು ಮುಖ್ಯವಾಗಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಲಿದೆ ಎಂದರು.

ಮೇಜರ್ ಜನರಲ್ (ನಿ) ಪಾರುವಂಗಡ ಎಂ. ಕಾರ್ಯಪ್ಪ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರಿಕೆಟ್ ನಮ್ಮೆಯಲ್ಲಿ ಮಹಿಳೆಯರು ಭಾಗವಹಿಸುತಿರುವುದು ವಿಶೇಷವಾಗಿದೆ. ಇದು ಹೆಣ್ಣುಮಕ್ಕಳ ಹಾಗೂ ಮಹಿಳೆಯರ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು. ಕೊಡವ ಮಹಿಳಾ ಕ್ರಿಕೆಟ್ ರೂವಾರಿ ಐಚೆಟ್ಟಿರ ಸುನಿತಾ ಮಾತನಾಡಿ, ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಿರದೆ ಹೊರ ಬಂದು ಈ ಕ್ರಿಕೆಟ್ ಹಬ್ಬದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.

ಹಾಕಿ ಕರ್ನಾಟಕ ಕಾರ್ಯದರ್ಶಿ ಡಾ. ಅಂಜಪರವAಡ ಬಿ. ಸುಬ್ಬಯ್ಯ, ಕೆ. ಎ. ಎಸ್. ಅಧಿಕಾರಿ ಚೊಟ್ಟೆಯಂಡಮಾಡ ಕೆ. ರಾಜೇಂದ್ರ, ಕೊಡವ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಕುಂಡ್ರAಡ ಬೋಪಣ್ಣ, ವಿಜಯಲಕ್ಷಿö್ಮ ಜೂನಿಯರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುಕ್ಕಾಟಿರ ಜಾನಕ್ಕಿ ಕಾವೇರಪ್ಪ, ಅರಮಣಮಾಡ ಕ್ರಿಕೆಟ್ ನಮ್ಮೆ ಅಧ್ಯಕ್ಷ ಎ. ಕೆ. ಸುರೇಶ್, ಉಪಾಧ್ಯಕ್ಷ ಸುಗುಣ ಗಣಪತಿ, ಕಾರ್ಯದರ್ಶಿ ಎ. ಎ. ಅಜಯ್, ಖಜಾಂಚಿ ದಿನು ಬೆಳ್ಯಪ್ಪ, ಟೂರ್ನಿ ನಿರ್ದೇಶಕ ಕೊಕ್ಕೇಂಗಡ ರಂಜನ್ ಇದ್ದರು. ಅರಮಣಮಾಡ ಪ್ರಮೀಳ ಗಿರೀಶ್ ನಿರೂಪಿಸಿದರು.

ಫಲಿತಾಂಶ: ಅಜ್ಜಿಕುಟ್ಟಿರ ಮಹಿಳಾ ತಂಡ ಕಾಂಡೆರವನ್ನು ೨೫ ರನ್‌ಗಳಿಂದ ಮಣಿಸಿತು. ಅಜ್ಜಿಕುಟ್ಟಿರ ೨ ವಿಕೆಟ್‌ಗೆ ೫೮ ರನ್ ದಾಖಲಿಸಿತು. ಕಾಂಡೇರ ೧ ವಿಕೆಟ್ ನಷ್ಟಕ್ಕೆ ಕೇವಲ ೩೨ ರನ್ ಗಳಿಸಿತು. ಅಜ್ಜಿಕುಟ್ಟಿರ ಪವಿತ್ರ ೨೪ ರನ್, ಪವಿತ್ರ ಪೂವಯ್ಯ ೧೬, ಮಮತ ೧ ವಿಕೆಟ್, ಕಾಂಡೆರ ಶೃತಿ ಚಂಗಪ್ಪ ೧೩ ರನ್, ಕುಸುಮ ಶೇಖರ್ ೧ ವಿಕೆಟ್ ಪಡೆದರು.

ಅಳಮೇಂಗಡ ತಂಡ ಚಿರಿಯಪಂಡ ವಿರುದ್ದ ೪೭ ರನ್‌ಗಳಿಂದ ಗೆದ್ದು ಬೀಗಿತು. ಅಳಮೇಂಗಡ ವಿಕೆಟ್ ನಷ್ಟವಿಲ್ಲದೆ ೮೦ ರನ್ ದಾಖಲಿಸಿತು. ಚಿರಿಯಪಂಡ ೩ ವಿಕೆಟ್ ನಷ್ಟಕ್ಕೆ ೩೩ ರನ್ ದಾಖಲಿಸಿತು. ಅಳಮೇಂಗಡ ಭವ್ಯ ದರ್ಶನ್ ೨೪ ರನ್, ರಿನಿತಾ ದಿಲಿಪ್ ೧೭ ರನ್ ಸೇರಿಸಿ ತಲಾ ಒಂದೊAದು ವಿಕೆಟ್ ಪಡೆದರು. ಚಿರಿಯಪಂಡ ಶ್ರೇಯಾ ದೇಚಮ್ಮ ೧೫ ರನ್ ಗಳಿಸಿದರು.

ಪ್ರದರ್ಶನ ಪಂದ್ಯದಲ್ಲಿ ಸೌತ್ ಕೂರ್ಗ್ ತಂಡವು ನಾರ್ತ್ ಕೂರ್ಗ್ ವಿರುದ್ದ ಸೂಪರ್ ಓವರ್‌ನಲ್ಲಿ ಜಯಿಸಿತು. ಸೌತ್ ತಂಡವು ೫ ವಿಕೆಟ್‌ಗೆ ೮೯ ರನ್ ಗಳಿಸಿತು. ನಾರ್ತ್ ತಂಡವು ೬ ವಿಕೆಟ್ ಕಳೆದುಕೊಂಡು ಡ್ರಾ ಮಾಡಿಕೊಂಡಿತು. ಸೂಪರ್ ಓವರ್‌ನಲ್ಲಿ ಸೌತ್ ತಂಡವು ೮ ರನ್‌ಗಳನ್ನು ಬೆನ್ನತ್ತಿ ಗೆಲುವಿನ ನಗೆ ಬೀರಿತು. ಸೌತ್ ಪರ ಅಚ್ಚಪಂಡ ಅಯ್ಯಪ್ಪ ೨೭ ರನ್, ಮಾಚಂಗಡ ದರ್ಶನ್ ೨೬, ಚೆಕ್ಕೆರ ಕಾರ್ಯಪ್ಪ ೨೦ ರನ್ ಪೇರಿಸಿದರು. ಹಂಚೆಟ್ಟಿರ ಸೋಮಣ್ಣ ೨, ನಿಕಿತ್ ೧, ತಂಬುಕುತ್ತಿರ ಸುರೇಶ್ ೧ ವಿಕೆಟ್ ಪಡೆದರು. ನಾರ್ತ್ ಪರ ಅಜ್ಜೇಟಿರ ಸೋಮಯ್ಯ ೩೪, ಕೈಬಿಲಿರ ರೋಹಿತ್ ೩೦, ಕುಟ್ಟಂಡ ಕುಟ್ಟಪ್ಪ ೨೦ ರನ್, ಶರತ್ ೩ ವಿಕೆಟ್, ಮಚ್ಚಮಾಡ ರೋಶನ್ ೩ ವಿಕೆಟ್ ಪಡೆದರು.