ಮಡಿಕೇರಿ, ಏ. ೨೨: ಪ್ರಸಕ್ತ ವರ್ಷ ಇಡೀ ಜಿಲ್ಲೆಯಾದ್ಯಂತ ಮಳೆಯ ಕೊರತೆ ಎದುರಾಗಿತ್ತು. ಸುಡುಬಿಸಿಲ ಧಗೆಯಿಂದಾಗಿ ಬಹುತೇಕ ನದಿ, ಕೆರೆ, ಬಾವಿ ಇತ್ಯಾದಿ ಜಲಮೂಲಗಳು ಬತ್ತಿ ಹೋಗಿದ್ದು ಸಮಸ್ಯೆ ಹೆಚ್ಚುತ್ತಲೇ ಇತ್ತು. ಇಂತಹ ಸನ್ನಿವೇಶದ ನಡುವೆ ಬ್ರಹ್ಮಗಿರಿ ಪತ್ರಿಕೆಯ ಉಪ ಸಂಪಾದಕಿ ಉಳ್ಳಿಯಡ ಡಾಟಿ ಪೂವಯ್ಯ ಅವರು ತಾವು ‘ಅಡ್ಮಿನ್’ ಅಗಿರುವ ಬ್ರಹ್ಮಗಿರಿ ವಾಟ್ಸಾö್ಯಪ್ ಗ್ರೂಪ್ನಲ್ಲಿ ಏ.೧೮ರಂದು ಸಂದೇಶವೊAದನ್ನು ನೀಡಿದ್ದರು. ತಾ. ೨೨ರ ಸೋಮವಾರದಂದು ಕೊಡವ ಪೊಮ್ಮಕ್ಕ (ಇಷ್ಟವಿರುವವರು ಮಾತ್ರ) ಎಲ್ಲರೂ ಸೇರಿ ಮಳೆಗಾಗಿ ಪ್ರಾರ್ಥಿಸುವ... ಈ ದಿನದಂದು ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಮಹಾದ್ವಾರದಿಂದ ದೇವಸ್ಥಾನದ ತನಕ ಬರಿಗಾಲಿನಲ್ಲಿ ಅಕ್ಕಿ, ಬೆಲ್ಲ, ತುಪ್ಪ, ತೆಂಗಿನಕಾಯಿ ಸಹಿತವಾಗಿ ಶುದ್ಧ ಮುದ್ರಿಕೆಯಲ್ಲಿ ಈ ಕಟ್ಟನ್ನು ತಲೆಮೇಲೆ ಹೊತ್ತು ದೇವರ ಸ್ತುತಿಯೊಂದಿಗೆ ಇಗ್ಗುತಪ್ಪ ಸನ್ನಿಧಿಗೆ ತೆರಳಿ ಮಳೆಗಾಗಿ ಪ್ರಾರ್ಥಿಸುವ ಎಂಬುದಾಗಿ ಸಂದೇಶದ ಮೂಲಕ ಕೋರಿದ್ದರು. ಇದಕ್ಕೆ ಹಲವರು ಬೆಂಬಲ ವ್ಯಕ್ತಪಡಿಸಿದ್ದರು. ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕಾಂತಿ ಸತೀಶ್ ಅವರು ಈ ಸಂದೇಶವನ್ನು ತಮ್ಮ ಗುಂಪಿನಲ್ಲೂ ರವಾನಿಸುವ ಮೂಲಕ ಇಂದು ಒಂದಷ್ಟು ಮಹಿಳೆಯರು ಈ ಕಾರ್ಯಕ್ಕೆ ಮುಂದಾಗಿದ್ದರು. ಇದರಂತೆ ಸುಮಾರು ೨ ಕಿ.ಮೀ. ದೂರ ಪಾದಯಾತ್ರೆಯಲ್ಲಿ ಕಟ್ಟುಹೊತ್ತು ತೆರಳಿ ವಿಶೇಷ ಪೂಜೆಯನ್ನು ನೆರವೇರಿಸಿದರು. ಪೂಜೆ ಮುಗಿದು ಅಪರಾಹ್ನ ಊಟಕ್ಕೆ ಮುಂದಾಗುತ್ತಿದ್ದAತೆಯೇ ಇಗ್ಗುತಪ್ಪ ಕ್ಷೇತ್ರ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆ ಸುರಿದಿದೆ. ತಮ್ಮ ಪ್ರಾರ್ಥನೆ- ಪೂಜೆಗೆ ಮಳೆದೇವ ಶ್ರೀ ಇಗ್ಗುತಪ್ಪ ಆಶೀರ್ವದಿಸಿದ್ದು ಅಪಾರ ಸಂತಸ ತಂದಿದೆ; ಈತನಕ ಕೆಲವೆಡೆಗಳಲ್ಲಿ ಮಾತ್ರ ಮಳೆ ಸುರಿದಿತ್ತು. ಇಂದು ಜಿಲ್ಲೆಯ ಬಹುತೇಕ ಕಡೆ ಮಳೆ ಸುರಿದಿರುವುದು ಅದೂ ಒಂದಷ್ಟು ನೆಮ್ಮದಿ ತರುವ ಪ್ರಮಾಣದಷ್ಟಾಗಿರುವುದು ಮಳೆದೇವರ ಮಹಿಮೆ ಎಂದು ಡಾಟಿ ಸೇರಿದಂತೆ ಪಾದಯಾತ್ರೆ ನಡೆಸಿದ ಮಹಿಳೆಯರು ಹರ್ಷ ವ್ಯಕ್ತಪಡಿಸಿದ್ದಾರೆ.
-ಶಶಿ ಸೋಮಯ್ಯ