ಮಡಿಕೇರಿ, ಏ.೨೨: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಸೆಲ್ಫಿ ಅoಟಿಣesಣ ನಡೆಸಲು ತೀರ್ಮಾನಿಸಲಾಗಿರುತ್ತದೆ. ಈ ಸೆಲ್ಫಿ ಅoಟಿಣesಣ ನಲ್ಲಿ #ಐeಣs ಗಿoಣe ಏoಜಚಿgu! ಶೀರ್ಷಿಕೆಯಲ್ಲಿ ಸ್ಪರ್ಧೆ ನಡೆಯಲಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ, ರಾಜಾಸೀಟು, ಸೋಮವಾರಪೇಟೆ ತಾಲೂಕು ಪಂಚಾಯತ್ ಕಚೇರಿ, ಪೊನ್ನಂಪೇಟೆ ತಾಲೂಕು ಪಂಚಾಯತ್ ಕಚೇರಿ, ವೀರಾಜಪೇಟೆ ತಹಶೀಲ್ದಾರ್ ಕಚೇರಿ, ಕುಶಾಲನಗರ ಕಾವೇರಿ ನಿಸರ್ಗಧಾಮ ಈ ೬ ಸ್ಥಳಗಳಲ್ಲಿ ಮತದಾನ ಜಾಗೃತಿಗಾಗಿ ಸೆಲ್ಫಿ ಪಾಯಿಂಟ್ಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಮತ್ತು ಯುವ ಮತದಾರರು ಫೋಟೊವನ್ನು ಕಳುಹಿಸಬಹುದಾಗಿದೆ.
ಅಲ್ಲದೆ ತಾ. ೨೬ ರಂದು ಮತದಾನ ನಡೆಯಲಿರುವ ಆಯ್ದ ವಿಶೇಷ ಮತಗಟ್ಟೆಗಳಲ್ಲಿಯೂ ಸೆಲ್ಪಿ ಪಾಯಿಂಟ್ ಗಳನ್ನು ಸ್ಥಾಪಿಸಲಿದ್ದು, ಈ ಮತಗಟ್ಟೆಗಳಲ್ಲಿ ಮತದಾನ ಮಾಡಿದ ನಂತರ ಸೆಲ್ಪಿ ಪಾಯಿಂಟ್ನಲ್ಲಿ ಪೋಟೋಗಳನ್ನು ಕ್ರಿಯಾತ್ಮಕವಾಗಿ ಸೆಲ್ಪಿ ಕ್ಲಿಕ್ಕಿಸಿ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯಾದ್ಯಂತ ಎಲ್ಲಾ ಸಾರ್ವಜನಿಕರು /ಮತದಾರರು ಮತದಾನದ ಪೂರ್ವದಲ್ಲಿ ನಾನು ಮತ ಚಲಾಯಿಸುತ್ತೇನೆ ಎಂಬ ಪರಿಕಲ್ಪನೆಯೊಂದಿಗೆ ತಾವಿರುವ ಸ್ಥಳದಲ್ಲಿಯೇ ವೈಯಕ್ತಿಕವಾಗಿ ಮತ್ತು ಗುಂಪಾಗಿ ಮತದಾನದಲ್ಲಿ ಪೂರ್ವದಲ್ಲಿ ಕ್ರಿಯಾತ್ಮಕವಾಗಿ ಸೆಲ್ಪಿ ಕ್ಲಿಕ್ಕಿಸಿ ವ್ಯಾಟ್ಸಪ್ ಮೊಬೈಲ್ ಸಂಖ್ಯೆ : ೯೭೪೧೨೨೪೩೦೦ ಗೆ ಕಳುಹಿಸಿ ಸ್ಪರ್ದೆಯಲ್ಲಿ ಭಾಗವಹಿಸಬಹುದಾಗಿದೆ. ಅಲ್ಲದೆ ಮತದಾನದ ದಿನದಂದು ಮತ ಚಲಾಯಿಸಿದ ನಂತರ ‘‘I ಗಿಔಖಿಇಆ’’ ಎಂಬ ಶೀರ್ಷಿಕೆಯೊಂದಿಗೆ ಸೆಲ್ಪಿ ಕ್ಲಿಕ್ಕಿಸಿ ೯೭೪೧೨೨೪೩೦೦ ವಾಟ್ಸಪ್ ಸಂಖ್ಯೆಗೆ ಕಳಹಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಇಂದಿನಿAದ ಮತದಾನ ಪೂರ್ಣಗೊಳ್ಳುವವರೆಗೂ ಈ ಸೆಲ್ಫಿ ಅoಟಿಣesಣ ಸ್ಪರ್ಧೆಯಲ್ಲಿ ಜಿಲ್ಲೆಯ ಎಲ್ಲಾ ಮತದಾರರು/ ಸಾರ್ವಜನಿಕರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕ್ರಿಯಾತ್ಮಕವಾಗಿ ಸೆಲ್ಪಿ ಕ್ಲಿಕ್ಕಿಸಿ ಕಳುಹಿಸುವ ಆಯ್ದ ಫೋಟೊಗಳಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು. ಕೊಡಗು ಜಿಲ್ಲಾ ಸ್ವೀಪ್ ಸಮಿತಿಯ ವ್ಯಾಟ್ಸಪ್ ಸಂಖ್ಯೆಗೆ ಉತ್ತಮವಾಗಿ ಕ್ಲಿಕ್ಕಿಸಿದ ಒಂದು ಪೋಟೊವನ್ನು ಕಳುಹಿಸಲು ಅವಕಾಶ ನೀಡಲಾಗಿದೆ.
ನಿಬಂಧನೆಗಳು: ಒಬ್ಬ ವ್ಯಕ್ತಿ ಒಂದು ಫೋಟೊವನ್ನು ಮಾತ್ರವೇ ಕಳುಹಿಸತಕ್ಕದ್ದು. ಫೋಟೊ ಜೊತೆಯಲ್ಲಿ ತಮ್ಮ ಹೆಸರು, ಊರಿನ ಹೆಸರನ್ನು ಕಡ್ಡಾಯವಾಗಿ ಕಳುಹಿಸತಕ್ಕದ್ದು. ವಿಜೇತರನ್ನು ಆಯ್ಕೆ ಮಾಡುವಲ್ಲಿ ಕೊಡಗು ಜಿಲ್ಲಾ ಸ್ವೀಪ್ ಸಮಿತಿ ನಿರ್ಣಯವೇ ಅಂತಿಮವಾಗಿರುತ್ತದೆ. ಯಾವುದೇ ಧರ್ಮ, ಜಾತಿ, ವ್ಯಕ್ತಿ, ರಾಜಕೀಯ ಪಕ್ಷ, ಚುನಾವಣಾ ಅಭ್ಯರ್ಥಿ ಪರವಾಗಿ ಅಥವಾ ಪಕ್ಷದ ಗುರುತಿನೊಂದಿಗೆ ಕಳುಹಿಸುವ ಫೋಟೊವನ್ನು ಸ್ಫರ್ಧೆಗೆ ಪರಿಗಣಿಸಲಾಗುವುದಿಲ್ಲ. ವ್ಯಾಟ್ಸಪ್ ಮುಖಾಂತರವಾಗಿ ಮಾತ್ರವೇ ಫೋಟೊ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.