ಮಡಿಕೇರಿ, ಏ. ೨೨: ಮಳೆಗಾಗಿ ಪರಿತಪಿಸುತ್ತಿದ್ದ ಜಿಲ್ಲೆಯ ಜನತೆ ಇದೀಗ ಒಂದಷ್ಟು ನಿಟ್ಟುಸಿರು ಬಿಡುವಂತಾಗಿದೆ. ಸೋಮವಾರ ಅಪರಾಹ್ನದ ನಂತರ ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಹಲವೆಡೆಗಳಲ್ಲಿ ಒಂದಷ್ಟು ಮಳೆ ಸುರಿದಿದ್ದು, ಇಳೆ ತಂಪಾದAತಾಗಿದೆ.

ಮಡಿಕೇರಿಗೆ ಗುಡುಗು ಸಹಿತವಾಗಿ ಅಂದಾಜು ಅರ್ಧ ಇಂಚಿನಷ್ಟು ಮಳೆಯಾಯಿತು. ಜಿಲ್ಲಾ ಕೇಂದ್ರ ಮಡಿಕೇರಿಗೆ ತಾ. ೧೩ರಂದು ಅಪರಾಹ್ನ ಅಲ್ಪಪ್ರಮಾಣದ ಮಳೆಯ ಸಿಂಚನವಾಗಿದ್ದು ಹೊರತುಪಡಿಸಿದರೆ ಈ ತನಕ ಮಳೆಯಾಗಿರಲಿಲ್ಲ. ಜಿಲ್ಲಾ ಕ್ರೀಡಾಂಗಣ ವ್ಯಾಪ್ತಿಯಲ್ಲಿ ೯೦ ಸೆಂಟ್‌ನಷ್ಟು ಮಳೆ ಸುರಿದಿದೆ.

ನಾಪೋಕ್ಲು ವಿಭಾಗ, ಕಡಂಗ, ಸಿದ್ದಾಪುರ, ಕುಶಾಲನಗರ ಸೇರಿದಂತೆ ಮಡಿಕೇರಿಗೆ ಗುಡುಗು ಸಹಿತವಾಗಿ ಅಂದಾಜು ಅರ್ಧ ಇಂಚಿನಷ್ಟು ಮಳೆಯಾಯಿತು. ಜಿಲ್ಲಾ ಕೇಂದ್ರ ಮಡಿಕೇರಿಗೆ ತಾ. ೧೩ರಂದು ಅಪರಾಹ್ನ ಅಲ್ಪಪ್ರಮಾಣದ ಮಳೆಯ ಸಿಂಚನವಾಗಿದ್ದು ಹೊರತುಪಡಿಸಿದರೆ ಈ ತನಕ ಮಳೆಯಾಗಿರಲಿಲ್ಲ. ಜಿಲ್ಲಾ ಕ್ರೀಡಾಂಗಣ ವ್ಯಾಪ್ತಿಯಲ್ಲಿ ೯೦ ಸೆಂಟ್‌ನಷ್ಟು ಮಳೆ ಸುರಿದಿದೆ.

ನಾಪೋಕ್ಲು ವಿಭಾಗ, ಕಡಂಗ, ಸಿದ್ದಾಪುರ, ಕುಶಾಲನಗರ ಸೇರಿದಂತೆ ಇಂದು ಹಲವೆಡೆಗಳಲ್ಲಿ ಮಳೆಯಾಗಿದೆ. ಕಾಕೋಟುಪರಂಬು, ಕೈಕೇರಿ, ಕುಂಜಿಲ, ಕಕ್ಕಬ್ಬೆ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗಿದೆ.

ಕರಿಕೆ

ಕರಿಕೆ ಭಾಗದಲ್ಲಿ ಆಲಿಕಲ್ಲು ಸಹಿತವಾಗಿ ಮೊದಲ ಮಳೆಯಾಗಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿದೆ.

ಕರಿಕೆ ಸುತ್ತಮುತ್ತ ೧೨ ಸೆ.ಮಿ. ಮಳೆಯಾಗಿದ್ದು, ಇಂದಿನ ಮಳೆ ಒಂದಷ್ಟು ಸಮಾಧಾನ ತರಿಸಿದೆ.