ನಾಪೋಕ್ಲು, ಏ. ೨೧: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಂಡ್ಯೋಳAಡ ಕಪ್ನ ೨೩ನೇ ದಿನದ ಪಂದ್ಯಾಟದಲ್ಲಿ ಚೆಪ್ಪುಡಿರ ತಂಡ ೬-೦ ಗೋಲುಗಳ ಭರ್ಜರಿ ಜಯ ದಾಖಲಿಸಿದರೆ, ಮಾಜಿ ಚಾಂಪಿಯನ್ ಮಂಡೇಪAಡ ತಂಡ ಸೋಲನುಭವಿಸಿ ಪಂದ್ಯಾಟದಿAದ ಹೊರಬಿದ್ದಿದೆ. ಉಳಿದಂತೆ ಚೆಕ್ಕೆರ, ಕುಲ್ಲೇಟಿರ, ಐನಂಡ, ಪುದಿಯೊಕ್ಕಡ, ಚೇಂದAಡ, ಕರಿನೆರವಂಡ, ಬೊವ್ವೇರಿಯಂಡ ಐಚ್ಚೆಟ್ಟಿರ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಮೈದಾನ ೧ರಲ್ಲಿ ಚೇನಂಡ ಮತ್ತು ಚೆಕ್ಕೆರ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಚೆಕ್ಕೆರ ಮತ್ತು ಚೇನಂಡ ತಂಡಗಳು ಸಮಬಲ ಸಾಧಿಸಿದ ಹಿನ್ನಲೆಯಲ್ಲಿ ನಂತರ ನಡೆದ ಟೈಬ್ರೇಕರ್ನಲ್ಲಿ ೨-೦ ಗೋಲುಗಳ ಅಂತರದಿAದ ಚೆಕ್ಕೆರ ತಂಡವು ಚೇನಂಡ ತಂಡವನ್ನು ಪರಾಭವಗೊಳಿಸಿತು. ಕುಲ್ಲೇಟಿರ ಮತ್ತು ಕೊಕ್ಕಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಲ್ಲೇಟಿರ ತಂಡವು ಕೊಕ್ಕಂಡ ತಂಡವನ್ನು ೫-೨ ಗೋಲುಗಳ ಅಂತರದಿAದ ಸೋಲಿಸಿತು. ಕುಲ್ಲೇಟಿರ ತಂಡದ ಪರ ಅವಿನಾಶ್, ಯಾಶಿಕ್ ತಲಾ ಎರಡು, ನಿಶ್ಚಲ್ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಕೊಕ್ಕಂಡ ತಂಡದ ಪರ ಸುಬ್ಬಯ್ಯ, ಚಿರಾಗ್ ತಲಾ ಒಂದೊAದು ಗೋಲು ಗಳಿಸಿದರು. ಮಾಜಿ ಚಾಂಪಿಯನ್ ಮಂಡೇಪAಡ ಮತ್ತು ಐನಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಐನಂಡ ತಂಡವು ಮಂಡೇಪAಡ ತಂಡವನ್ನು ೩-೨ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಐನಂಡ ತಂಡದ ಪರ ನಾಚಪ್ಪ ಎರಡು, ಆಕಾಶ್ ಪೂವಣ್ಣ ಒಂದು ಗೋಲು ದಾಖಲಿಸಿದರೆ, ಮಂಡೇಪAಡ ತಂಡದ ಪರ ಸಜನ್, ಗೌತಮ್ ತಲಾ ಒಂದೊAದು ಗೋಲು ದಾಖಲಿಸಿದರು. ಬಾಳೆಯಡ ಮತ್ತು ಚೆಪ್ಪುಡಿರ ತಂಡಗಳ ನಡುವಿನ ಸೆಣಸಾಟದಲ್ಲಿ ಚೆಪ್ಪುಡಿರ ತಂಡವು ೬-೦ ಗೋಲುಗಳಿಂದ ಬಾಳೆಯಡ ತಂಡವನ್ನು ಸೋಲಿಸಿತು. ಚೆಪ್ಪುಡಿರ ತಂಡದ ಪರ ಗಗನ್ ಬೆಳ್ಯಪ್ಪ ಎರಡು, ಗಗನ್ ತಿಮ್ಮಯ್ಯ, ಪ್ರಣವ್ ತಿಮ್ಮಯ್ಯ, ಚೇತನ್, ನರೇನ್ ತಲಾ ಒಂದೊAದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
ಮೈದಾನ ೨ರಲ್ಲಿ ನಡೆದ ಪುಳ್ಳಂಗಡ ಮತ್ತು ಮತ್ತು ಪುದಿಯೊಕ್ಕಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಪುದಿಯೊಕ್ಕಡ ತಂಡವು ಪುಳ್ಳಂಗಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿತು. ಪುದಿಯೊಕ್ಕಡ ತಂಡದ ಪರ ಮುತ್ತಣ್ಣ, ಪ್ರೇಕ್ಷಿತ್ ಮುದ್ದಯ್ಯ ತಲಾ ಒಂದು ಗೋಲು ದಾಖಲಿಸಿದರು. ಕಂಬೀರAಡ ಮತ್ತು ಮಾಜಿ ಚಾಂಪಿಯನ್ ಚೇಂದAಡ ತಂಡಗಳ ನಡುವಿನ ಪಂದ್ಯದಲ್ಲಿ ಚೇಂದAಡ ತಂಡವು ೨-೧ ಗೋಲುಗಳ ಅಂತರದಿAದ ಕಂಬೀರAಡ ತಂಡವನ್ನು ಪರಾಭವಗೊಳಿಸಿತು. ಚೇಂದAಡ ತಂಡದ ಪರ ನಿಖಿನ್ ತಿಮ್ಮಯ್ಯ ಎರಡು ಗೋಲು ಗಳಿಸಿದರೆ, ಕಂಬೀರAಡ ತಂಡದ ಪರ ಯೋಗೇಶ್ ಅಪ್ಪಯ್ಯ ಒಂದು ಗೋಲು ದಾಖಲಿಸಿದರು. ಚೋಯಮಾಡಂಡ ಮತ್ತು ಕರಿನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರಿನೆರವಂಡ ತಂಡವು ಚೋಯಮಾಡಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕರಿನೆರವಂಡ ತಂಡದ ಪರ ಸಚಿನ್ ಸೋಮಣ್ಣ, ಲಿತೇಶ್ ಬಿದ್ದಪ್ಪ, ಯತೀಶ್ ಸೋಮಣ್ಣ ತಲಾ ಒಂದು ಗೋಲು ದಾಖಲಿಸಿದರು. ಬೊವ್ವೇರಿಯಂಡ ಮತ್ತು ಚೇಂದಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೊವ್ವೇರಿಯಂಡ ತಂಡವು ಚೇಂದಿರ ತಂಡವನ್ನು ೨-೧ ಗೋಲುಗಳಿಂದ ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬೊವ್ವೇರಿಯಂಡ ತಂಡದ ಪರ ಮುತ್ತಣ್ಣ, ಕವನ್ ತಲಾ ಒಂದು ಗೋಲು ದಾಖಲಿಸಿದರೆ, ಚೇಂದಿರ ಚೇತನ್ ಚಿಣ್ಣಪ್ಪ ಒಂದು ಗೋಲು ದಾಖಲಿಸಿದರು. ಐಚೆಟ್ಟಿರ ಮತ್ತು ಕೇಲೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಐಚೆಟ್ಟಿರ ತಂಡವು ೧-೦ ಗೋಲುಗಳ ಅಂತರದಿAದ ಕೇಲೇಟಿರ ತಂಡವನ್ನು ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಐಚೆಟ್ಟಿರ ತಂಡದ ಪರ ನಿಖಿಲ್ ಕಾರ್ಯಪ್ಪ ಒಂದು ಗೋಲು ದಾಖಲಿಸಿದರು. -ಪಿ.ವಿ.ಪ್ರಭಾಕರ್