ಮಡಿಕೇರಿ, ಏ. ೨೦: ೨೦೧೮ರಲ್ಲಿ ಕೊಡಗು ಜಿಲ್ಲೆಯಲ್ಲಿ ಸ್ಥಾಪಿಸಲಾದ ಅತಿಥಿ ವೃಕ್ಷ ಶಿಕ್ಷಾ ಸಂಸ್ಥೆ ಇದುವರೆಗೆ ಕೊಡಗು ಸೇರಿದಂತೆ ಇತರ ಜಿಲ್ಲೆಗಳ ಒಟ್ಟು ೩೫೦ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬಂದಿದೆ. ತರಬೇತಿ ಪಡೆದ ಹಲವು ವಿದ್ಯಾರ್ಥಿಗಳು ಪ್ರತಿಷ್ಠಿತ ಆತಿಥ್ಯ ಸಂಸ್ಥೆಗಳಲ್ಲಿ, ವಿದೇಶಗಳಲ್ಲಿಯೂ ತರಬೇತಿಯ ಪ್ರಯೋಜನ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದಾಗಿ ಸಂಸ್ಥೆಯ ಸ್ಥಾಪಕಿ ಶಾಲಿನಿ ಖನ್ನಾ ಚಾರ್ಲ್ಸ್ ಅವರು ಮಾಹಿತಿ ನೀಡಿದ್ದಾರೆ. ಫೈವ್‌ಸ್ಟಾರ್ ಹೊಟೇಲ್‌ಗಳಲ್ಲಿ ಉದ್ಯೋಗಾವಕಾಶ ದೊರಕಲು ಅವಶ್ಯ ಇರುವ ತರಬೇತಿಯನ್ನು ಈ ಸಂಸ್ಥೆ ನೀಡುತ್ತಿದ್ದು, ಮಡಿಕೇರಿಯ ರೇಸ್‌ಕೋರ್ಸ್ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.