ಮಡಿಕೇರಿ, ಏ.೨೦ : ಮರಗೋಡುವಿನ ಗೌಡ ಇವ್‌ನಿಂಗ್ ಸ್ಟರ‍್ಸ್ ವತಿಯಿಂದ ಅರೆಬಾಷೆ ಗೌಡ ಜನಾಂಗದವರಿಗಾಗಿ ಗೌಡ ಕ್ರಿಕೆಟ್ ಲೀಗ್ ಪಂದ್ಯಾವಳಿ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಸಂಘದ ಅಧ್ಯಕ್ಷ ಕಟ್ಟೆಮನೆ ರೋಶನ್; ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟದ ೨೫ನೇ ವರ್ಷದ ಸಂಭ್ರಮದ ಅಂಗವಾಗಿ ಮೇ೧೪ರಿಂದ ೧೬ರವರೆಗೆ ಗೌಡ ಕ್ರಿಕೆಟ್ ಲೀಗ್ ಪಂದ್ಯಾವಳಿ ಏರ್ಪಡಿಸಲಾಗಿದೆ. ನಾಲ್ಕು ಓವರ್‌ಗಳ ಟೆನ್ನಿಸ್‌ಬಾಲ್ ಪಂದ್ಯಾವಳಿ ಮರಗೋಡು ಭಾರತಿ ಪ.ಪೂ.ಕಾಲೇಜು ಮೈದಾನದಲ್ಲಿ ನಡೆಯಲಿದೆ. ಜನಾಂಗದವರಲ್ಲಿ ಬಾಂಧವ್ಯ ಬೆಸೆಯುವ ಸಲುವಾಗಿ ಪಂದ್ಯಾವಳಿ ಏರ್ಪಡಿಸಲಾಗಿದ್ದು, ಒಟ್ಟು ೧೪ ಫ್ರಾಂಚೈಸಿ ತಂಡಗಳು ಭಾಗವಹಿಸಲಿವೆ. ಭಾಗವಹಿಸುವ ಆಟಗಾರರು ತಾ.೨೮ರ ಒಳಗಡೆ ಹೆಸರು ನೋಂದಾಯಿಸಿಕೊಳ್ಳಬೇಕಿದೆ. ತಾ.೩೦ರ ನಂತರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

ಪಂದ್ಯಾವಳಿಯಲ್ಲಿ ವಿಜೇತ ರಾಗುವ ತಂಡಕ್ಕೆ ಪ್ರಥಮ ಬಹುಮಾನವಾಗಿ ರೂ.೫೫,೫೫೫, ದ್ವಿತೀಯ ಬಹುಮಾನವಾಗಿ ರೂ.೩೩,೩೩೩ ನಗದು ಮತ್ತು ಟ್ರೋಫಿ ನೀಡಲಾಗುವದು. ಮೂರನೇ, ನಾಲ್ಕನೇ ಬಹುಮಾನಗಳೊಂದಿಗೆ ವೈಯಕ್ತಿಕ ಬಹುಮಾನ ಕೂಡ ನೀಡಲಾಗುವದು. ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ವಿವೇಕ್ ಕರ್ಣಯ್ಯನ(೯೯೦೨೪೯೭೮೧೭), ಮಿಲನ್ ಕಾಂಗೀರ(೯೦೦೮೫೩೮೯೩೨), ತರುಣ್ ಮುಕ್ಕಾಟಿ(೮೨೧೭೬೧೫೮೦೭), ರೋಶನ್ ಕಟ್ಟೆಮನೆ(೯೪೪೯೩೬೧೯೩೩), ಸರ್ವಿನ್ ಬೈಮನ(೭೩೩೮೩೨೩೫೭೧), ಸತ್ಯ ಪರ್ಲಕೋಟಿ(೯೪೪೯೪೭೬೧೩೯) ಇವರುಗಳನ್ನು ಸಂಪರ್ಕಿಸಬ ಹುದಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಸತ್ಯ ಪರ್ಲಕೋಟಿ, ಕಾರ್ಯದರ್ಶಿ ವಿವೇಕ್ ಕರ್ಣಯ್ಯನ, ಸಹ ಕಾರ್ಯದರ್ಶಿ ಮಿಲನ್ ಕಾಂಗೀರ, ಖಜಾಂಚಿ ಸರ್ವಿನ್ ಬೈಮನ ಇದ್ದರು.