ಕೂಡಿಗೆ, ಏ. ೨೦: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮದಲ್ಲಿರುವ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯ ಸಮಾರಂಭದಲ್ಲಿ ಊಟ ಸೇವನೆ ಮಾಡಿದ ೬೦ ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಸುಮಾರು ೨೦ ಮಂದಿ ಸೇರಿದಂತೆ ಮೈಸೂರು, ಚಾಮರಾಜ ನಗರ ದಿಂದಲೂ ಮದುವೆಗೆ ಆಗಮಿಸಿದ್ದ ಒಟ್ಟು ಸುಮಾರು ೬೦ ಕ್ಕೂ ಅಧಿಕ ಮಂದಿ ಊಟ ಸೇವಿಸಿ ಅಸ್ವಸ್ಥಗೊಂಡಿದ್ದಾರೆ.
ಕಳೆದ ವಾರ ಹೆಬ್ಬಾಲೆ ಗ್ರಾಮದ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ರಾತ್ರಿ ಊಟ ಸೇವನೆ ಮಾಡಿದವರಿಗೆ ಮತ್ತು ಮರುದಿನ ಊಟ ಸೇವನೆ ಮಾಡಿದ ಕೂಡಿಗೆ, ಏ. ೨೦: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮದಲ್ಲಿರುವ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯ ಸಮಾರಂಭದಲ್ಲಿ ಊಟ ಸೇವನೆ ಮಾಡಿದ ೬೦ ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಸುಮಾರು ೨೦ ಮಂದಿ ಸೇರಿದಂತೆ ಮೈಸೂರು, ಚಾಮರಾಜ ನಗರ ದಿಂದಲೂ ಮದುವೆಗೆ ಆಗಮಿಸಿದ್ದ ಒಟ್ಟು ಸುಮಾರು ೬೦ ಕ್ಕೂ ಅಧಿಕ ಮಂದಿ ಊಟ ಸೇವಿಸಿ ಅಸ್ವಸ್ಥಗೊಂಡಿದ್ದಾರೆ.
ಕಳೆದ ವಾರ ಹೆಬ್ಬಾಲೆ ಗ್ರಾಮದ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ರಾತ್ರಿ ಊಟ ಸೇವನೆ ಮಾಡಿದವರಿಗೆ ಮತ್ತು ಮರುದಿನ ಊಟ ಸೇವನೆ ಮಾಡಿದ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯ ತಂಡದವರು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಕೆ. ಎಂ. ಸತೀಶ್, ಮತ್ತು ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಾಕುಮಾರಿ
೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ತಾಲೂಕು, ಮತ್ತು ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳ ತಂಡ ಹೆಬ್ಬಾಲೆಯಲ್ಲಿ ಎರಡು ದಿನ ಮುಖಾಂ ಹೂಡಿದ್ದು, ಮದುವೆ ಊಟ ಸೇವಿಸಿ ಅಸ್ವಸ್ಥಗೊಂಡ ಹೆಬ್ಬಾಲೆ ಮತ್ತು ಸುತ್ತಮುತ್ತಲಿನ ಗ್ರಾಮದವರು ಚಿಕಿತ್ಸೆಗಾಗಿ ಹೆಬ್ಬಾಲೆ ಆರೋಗ್ಯ ಕೇಂದ್ರಕ್ಕೆ ಬಂದಾಗ ತಂಡದ ನೇತೃತ್ವದಲ್ಲಿಯೇ ವೈದ್ಯಾಧಿಕಾರಿಗಳಾದ ಡಾ. ದರ್ಶನ, ಡಾ. ಅಶೋಕ್ ಅವರುಗಳ ಮುಖಾಂತರ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ. ಇದೀಗ ಎಲ್ಲರೂ ಗುಣಮುಖರಾಗಿದ್ದಾರೆ.
ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾ ಆರೋಗ್ಯ ಇಲಾಖೆಯ ತಂಡ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹೆಬ್ಬಾಲೆಯ ವಿವಿಧ ವಾರ್ಡ್ ಗಳ ಮನೆಗಳಿಗೆ ತೆರಳಿ ಊಟ ಸೇವಿಸಿ ಅಸ್ವಸ್ಥಗೊಂಡವರ ಬಗ್ಗೆ ಮಾಹಿತಿ ಪಡೆದು ಅಸ್ವಸ್ಥಗೊಂಡವರ ಮಲ, ಮತ್ತು ಕಲ್ಯಾಣ ಮಂಟಪದ ನೀರಿನ ಮಾದರಿಯನ್ನು ಹಾಸನದಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಹೆಬ್ಬಾಲೆಯಲ್ಲಿರುವ ಕಲ್ಯಾಣ ಮಂಟಪದಲ್ಲಿನ ಶುಚಿತ್ವ ಮತ್ತು ನೀರಿನ ಪರಿಶೀಲನೆಯನ್ನು ಖುದ್ದಾಗಿ ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಕೆ.ಎಂ.ಸತೀಶ್, ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಅಧಿಕಾರಿ ಡಾ.ಬಿ.ಎಲ್. ಶ್ರೀನಿವಾಸ್, ಕುಶಾಲನಗರ ತಾಲೂಕು ವೈದ್ಯಾಧಿಕಾರಿ ಡಾ. ಇಂದುದರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ,ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಾಕುಮಾರಿ ಅವರುಗಳು ನಡೆಸಿದ್ದು, ಶುಚಿತ್ವ ಕಾಪಾಡುವಂತೆ ಸೂಚನೆ ನೀಡಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ