ಮಡಿಕೇರಿ, ಏ. ೨೧: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಪ್ರೀಮಿಯರ್ ಲೀಗ್ ಲೆದರ್‌ಬಾಲ್ ಕ್ರಿಕೆಟ್‌ನಲ್ಲಿ ಎಲೈಟ್ ಸ್ಕಾ÷್ವಡ್ ಬಿ ಹಾಗೂ ದಿ ಮರಗೋಡಿಯನ್ಸ್ ಮುನ್ನಡೆ ಸಾಧಿಸಿದವು.

ಮೊದಲ ಪಂದ್ಯಾಟ ಎಲೈಟ್ ಸ್ಕಾ÷್ವಡ್ ಬಿ ಮತ್ತು ಕಾಫಿ ಕ್ರಿಕೆಟರ್ಸ್ ತಂಡದ ನಡುವೆ ನಡೆದು ಎಲೈಟ್ ಸ್ಕಾ÷್ವಡ್ ಬಿ ತಂಡ ೮ ವಿಕೆಟ್‌ಗಳ ಜಯ ಸಾಧಿಸಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕಾಫಿ ಕ್ರಿಕೆಟರ್ಸ್ ತಂಡ ನಿಗದಿತ ೧೦ ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ೧೧೭ ರನ್ ಗಳಿಸಿತು. ತಂಡದ ಪರ ತಳೂರು ವಿಕ್ಕಿ ೧೯ ಎಸೆತಗಳಲ್ಲಿ ೪೮ ರನ್ ಗಳಿಸಿದರು. ರಾಮ್‌ಸ್ವರೂಪ್ ದೊಡ್ಡಮನೆ ೨೫ ಎಸೆತಗಳಲ್ಲಿ ೩೭ ರನ್ ಗಳಿಸಿದರು.

ಗುರಿ ಬೆನ್ನಟ್ಟಿದ ಎಲೈಟ್ ಸ್ಕಾ÷್ವಡ್ ಬಿ ತಂಡ ೮.೩ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೧೧೮ ರನ್ ಗಳಿಸಿ ವಿಜಯದ ನಗೆ ಬೀರಿದರು. ಎಲೈಟ್ ತಂಡದ ಪರ ರಾಹುಲ್ ೩೪ ಎಸೆತಗಳಲ್ಲಿ ಅಜೇಯ ೭೩ ರನ್ ಗಳಿಸಿದರು. ಟೋಟಲ್ ಜಿಪಿಎಲ್ ಸೀಸನ್-೨ನ ಮೊದಲ ಮಹಿಳಾ ಬೌಲರ್ ಆಗಿ ಎಲೈಟ್ ತಂಡದ ಕಟ್ಟೆಮನೆ ಜಾಹ್ನವಿ ಒಂದು ಓವರ್ ಬೌಲ್ ಮಾಡಿದರು.

ಎರಡನೇ ಪಂದ್ಯಾಟ ದಿ ಮರಗೋಡಿಯನ್ಸ್ ಮತ್ತು ಕೂರ್ಗ್ ಹಾಕ್ಸ್ ತಂಡದ ನಡುವೆ ನಡೆಯಿತು. ಟಾಸ್ ಗೆದ್ದ ಹಾಕ್ಸ್ ತಂಡ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಮರಗೋಡಿಯನ್ಸ್ ತಂಡ ನಿಗದಿತ ಹತ್ತು ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ೧೦೪ ರನ್ ಗಳಿಸಿತು. ತಂಡದ ಪರ ಬೈಲೆ ಡ್ಯೂಕ್ ಕಾವೇರಿ ೨೭ ಎಸೆತಕ್ಕೆ ೫೮ ರನ್ ಗಳಸಿದರು. ವರುಣ್ ರಾಜ್ ಬೇಕಲ್ ೩೭ ರನ್‌ಗಳ ಕಾಣಿಕೆ ನೀಡಿದರು.

ಗುರಿ ಬೆನ್ನಟ್ಟಿದ ಕೂರ್ಗ್ ಹಾಕ್ಸ್ ತಂಡ ೭ ವಿಕೆಟ್ ನಷ್ಟಕ್ಕೆ ೯೯ ರನ್ ಗಳಿಸಿ ೫ ರನ್‌ಗಳಿಂದ ಸೋಲೊಪ್ಪಿಕೊಂಡಿತು. ಮರಗೋಡಿಯನ್ಸ್ ತಂಡದ ಪರ ಶರ್ವಿನ ಎರಡು ವಿಕೆಟ್ ಪಡೆದರು.

ದಿನದ ಮೂರನೆ ಪಂದ್ಯಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ದಿ ಎಲೈಟ್ ಸ್ಕಾ÷್ವಡ್ ಬಿ ತಂಡ ನಿಗದಿತ ೧೦ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೦೮ ರನ್ ಗಳಿಸಿ ೧೦೯ ರನ್‌ಗಳ ಟಾರ್ಗೆಟ್ ನೀಡಿತು. ರಾಹುಲ್ ೨೫ ಎಸೆತಗಳಿಗೆ ೫೦ ರನ್ ದಾಖಲಿಸುವ ಮೂಲಕ ಅರ್ಧಶತಕ ಪೂರೈಸಿದರು. ಇದು ಇವರ ಎರಡನೇ ಅರ್ಧ ಶತಕ.

ನಂತರ ಬೆನ್ನಟ್ಟಿದ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡ ೬ ವಿಕೆಟ್ ನಷ್ಟಕ್ಕೆ ೧೦೦ ರನ್ ಗಳಿಸಿ ೮ ರನ್ ಗಳ ಸೋಲೊಪ್ಪಿಕೊಂಡಿತು. ವರುಣ್ ಮೂಲೆಮಜಲು ೧೩ ಎಸೆತಕ್ಕೆ ೨೭ ರನ್ ಗಳಿಸಿದರು. ದಿ ಎಲೈಟ್ ಸ್ಕಾ÷್ವಡ್ ಬಿ. ಪರ ರಾಹುಲ್ ಎ ಎಸ್ ೨ ವಿಕೆಟ್ ಪಡೆದರು.