ವೀರಾಜಪೇಟೆ, ಏ. ೨೦: ದ್ವಿಚಕ್ರ ವಾಹನಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಶನಿವಾರ ಬಿಟ್ಟಂಗಾಲದಲ್ಲಿ ನಡೆದಿದೆ. ಬಾಳುಗೋಡುವಿನಲ್ಲಿ ನೆಲೆಸಿದ್ದ ಸಿ.ಸಿ. ಗಿರೀಶ್ ಮೃತ ದುರ್ದೈವಿ.
ಬೆಳಿಗ್ಗೆ ಸುಮಾರು ೧೧ ಗಂಟೆಯ ವೇಳೆಗೆ ಬೆಂಗಳೂರಿನಿAದ ವೀರಾಜಪೇಟೆ ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ (ಕೆ.ಎ-೨೧ ಎಫ್-೦೧೪೧) ದ್ವಿಚಕ್ರ ವಾಹನ (ಕೆ.ಎ. ೦೫ ಜಿಹೆಚ್-೨೩೬) ಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸಿ.ಸಿ ಗಿರೀಶ್(೨೨) ರಸ್ತೆ ಮೇಲೆ ಬಿದ್ದಿದ್ದಾನೆ. ಕೂಡಲೇ ಸ್ಥಳೀಯರ ಸಹಾಯದಿಂದ ಸವಾರನನ್ನು ಸ್ಥಳೀಯ ಆಟೋ ಚಾಲಕ ಕೆ. ವೇಣುಗೋಪಾಲ್ ಎಂಬವರು ಗಿರೀಶ್ ಹಾಗೂ ಆತನ ಜೊತೆಗಿದ್ದ ದೀಕ್ಷಿತ್ (೧೧) ಅವರುಗಳನ್ನು ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.
ಆದರೆ, ಚಿಕಿತ್ಸೆ ನೀಡುವ ಸಲುವಾಗಿ ಪರೀಕ್ಷೆ ನಡೆಸಿದ ವೈದ್ಯರು ಸವಾರ ಮೃತ ಪಟ್ಟಿರುವುದಾಗಿ ಧೃಡಪಡಿಸಿದರು. ಬಾಲಕ ದೀಕ್ಷಿತ್ ಪ್ರಾಣಾಪಾಯದಿಂದ ಪಾರಾಗಿದ್ದು, ವೀರಾಜಪೇಟೆಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗಾಯಾಳು ದೀಕ್ಷಿತ್, ಮೃತರ ಗಿರೀಶ್ ಸಂಬAಧಿ ಎಂದು ತಿಳಿದು ಬಂದಿದೆ. ಸ್ಕೂಟಿ ಸವಾರ ಗಿರೀಶ್ ಬಾಳುಗೋಡುವಿನ ಮೀನಾ ಎಂಬವರ ಲೈನ್ಮನೆಯಲ್ಲಿ ತೋಟ ಕೆಲಸ ಮಾಡಿಕೊಂಡಿದ್ದು ಸ್ಥಳೀಯ ಸೂಪರ್ ಮಾರ್ಕೆಟ್ನಿಂದ ವಸ್ತುಗಳನ್ನು ತೆಗೆದುಕೊಂಡು ಹೋಗುವಾಗ ದುರ್ಘಟನೆ ಸಂಭವಿಸಿದೆ.
ಸ್ಥಳಕ್ಕೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಸ್ಥಳ ಮಹಜರು ನಡೆಸಿ ಸ್ಕೂಟರ್ ಹಾಗೂ ಬಸ್ಸನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ಗಿರೀಶ್ ಅವರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.