ಮಡಿಕೇರಿ, ಏ. ೨೧: ಜೈಪುರದ ಪಿಂಕ್ ಸಿಟಿ ಆಫ್ ಭಾರತ್‌ನಲ್ಲಿ ತಾ.೧೭ ರಂದು ನಡೆದ ಮಿಸ್ ಟೀನ್ ಯೂನಿವರ್ಸ್ ಇಂಡಿಯಾ-೨೦೨೪ ಸ್ಪರ್ಧೆ ಯಲ್ಲಿ ಜಿಲ್ಲೆಯ ಯುವತಿ ಅಮ್ಮಾಟಂಡ ಕ್ಯಾರಿಸಾ ಬೋಪಣ್ಣ ವಿಜೇತರಾಗಿ ಈ ಕಿರೀಟ ಪಡೆದು ಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಹಲವಷ್ಟು ಸ್ಪರ್ಧಿಗಳಿದ್ದು, ಕ್ಯಾರಿಸಾ ವಿಜೇತರಾಗಿ ಹೊರಹೊಮ್ಮಿದ್ದಾರೆ. ಇವರು ಮೂಲತಃ ಕಿಗ್ಗಾಲುವಿನ ಪ್ರಸ್ತುತ ಮಸ್ಕಟ್‌ನಲ್ಲಿ ನೆಲೆಸಿರುವ ಅಮ್ಮಾಟಂಡ ಬೋಪಣ್ಣ ಹಾಗೂ ಸರಸ್ವತಿ ದಂಪತಿಯ ಪುತ್ರಿ.