ಸುಂಟಿಕೊಪ್ಪ, ಏ. ೨೧: ಸಂಬAಧಿಕರ ಮದುವೆಗೆಂದು ಬಂದಿದ್ದ ಮಹಿಳೆಯೊಬ್ಬರಿಗೆ ಮಾರುತಿ ಕಾರು (ಕೆಎ೦೨ ಎಂಎ೩೦೨೨) ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಮೀಪದ ಗದ್ದೆಹಳ್ಳದಲ್ಲಿ ನಡೆದಿದೆ.
ಕೇರಳದ ಕಾಸರಗೋಡಿನ ನಿವಾಸಿ ಸಿದ್ಧಿಕ್ ಎಂಬವರ ಪತ್ನಿ ರಾಬಿಯ (೪೫) ಮೃತ ದುರ್ದೈವಿ ಯಾಗಿದ್ದಾರೆ. ಸುಂಟಿಕೊಪ್ಪ ಸಮೀಪದ ೭ನೇ ಹೊಸಕೋಟೆಯಲ್ಲಿರುವ ಅವರ ಸಂಬAಧಿಯ ವಿವಾಹ ಕಾರ್ಯಕ್ರಮವು ಗದ್ದೆಹಳ್ಳದಲ್ಲಿ ನಡೆಯುತ್ತಿತ್ತು. ಮದುವೆ ಮುಗಿಸಿ ರಾಬಿಯ ಅವರು ಪತಿ ಹಾಗೂ ಸಂಬAಧಿಕರೊAದಿಗೆ ಸುಂಟಿಕೊಪ್ಪ ಚೆಟ್ಟಳ್ಳಿಗೆ ತೆರಳುವ ರಾಜ್ಯ ಹೆದ್ದಾರಿ ಬದಿಯಲ್ಲಿ ನಿಂತಿದ್ದರು. ಈ ಸಂದರ್ಭ ಗಿರಿಯಪ್ಪ ಮನೆ ಗದ್ದೆ ನಿವಾಸಿ ಪೊನ್ನಪ್ಪ ಎಂಬುವರ ಪುತ್ರ ಶರತ್(೩೦) ಎಂಬಾತ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಬಂದು ನಿಂತಿದ್ದವರಿಗೆ ಡಿಕ್ಕಿಪಡಿಸಿದ್ದಾನೆ. ಅಲ್ಲಿಯೂ ನಿಯಂತ್ರಣಕ್ಕೆ ಬಾರದ ಕಾರು ಮುಂದಕ್ಕೆ ಚಲಿಸಿ ರಾಬಿಯ ಅವರಿಗೆ ಡಿಕ್ಕಿಯಾಗಿ ಅವರೊಂದಿಗೆ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ರಾಬಿಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರ ಪತಿ ಸಿದ್ಧಿಕ್, ಖೈರುನ್ನಿಸಾ ಹಾಗೂ ಕಾರು ಚಾಲಕ ಶರತ್ ಗಂಭೀರ ಗಾಯಗೊಂಡಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳದಲ್ಲಿ ಕೆಲಕಾಲ ಮೃತ ರಾಬಿಯ ಅವರ ಮೃತದೇಹವನ್ನು ಇರಿಸಿಕೊಂಡು ಕಾರು ಚಾಲಕನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಅಲ್ಲಿನ ನಿವಾಸಿಗಳು ಪ್ರತಿಭಟನೆಗೆ ಮುಂದಾದರು. ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಗಂಗಾಧರಪ್ಪ, ಕುಶಾಲನಗರ ಸಿಪಿಐ ರಾಜೇಶ್ ಕೋಟ್ಯಾನ್ ಹಾಗೂ ಠಾಣಾಧಿಕಾರಿ ಎಂ.ಸಿ. ಶ್ರೀಧರ್ ಪ್ರತಿಭಟನಾಕಾರರ ಮನವೊಲಿಸಿ ಕಾನೂನು ಕ್ರಮಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದರು.