ಮಡಿಕೇರಿ, ಏ. ೨೧: ಬೇಂಗ್ನಾಡ್ ಚೇರಂಬಾಣೆಯ ಶ್ರೀನಾಡು ಕಡಪಾಲಪ್ಪ ದೇವಾಲಯದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ತಾ.೧೯ರಿಂದ ಆರಂಭಗೊAಡಿದೆ. ತಾ.೨೫ರ ತನಕ ವಿವಿಧ ಧಾರ್ಮಿಕ ಕೈಂಕರ್ಯಗಳು ಹಾಗೂ ಈ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ತಾ.೨೨ರಂದು (ಇಂದು) ಬೆಳಿಗ್ಗೆ ೮.೩೨ಕ್ಕೆ ವೃಷಭ ಲಗ್ನದಲ್ಲಿ ಪೇಜಾವರ ಶ್ರೀ, ಶ್ರೀ ವಿಶ್ವಪ್ರಸನ್ನ ತೀರ್ಥರ ಅಮೃತ ಹಸ್ತದಲ್ಲಿ ಶ್ರೀನಾಡು ಕಡಪಾಲಪ್ಪ ದೇವರ ಪುನರ್ ಪ್ರತಿಷ್ಠೆ, ಜೀವಕುಂಭಾಭಿಷೇಕ, ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, ಶ್ರೀ ನಾಗದೇವರ ಪ್ರತಿಷ್ಠೆ, ಪ್ರಸನ್ನಪೂಜೆ, ಕವಾಟಬಂಧನ, ಸಂಜೆ ೪.೩೦ರಿಂದ ಮಹಾಗಣಪತಿ ದೇವರ ಕಲಶ ಪ್ರತಿಷ್ಠೆ ಅಧಿವಾಸ ಹೋಮಗಳು ಬಳಿಕ ಅಭಿಜ್ಞಾ ಅವರಿಂದ ಕೊಳಲುವಾದನ ನಡೆಯಲಿದೆ.