ಕೂಡಿಗೆ, ಏ. ೧೯: ಹಾರಂಗಿ ಸಮೀಪದ ಮಾವಿನಹಳ್ಳ ಗ್ರಾಮದ ಬಳಿ ಇರುವ ಕಿರು ಸೇತುವೆಯು ಅತಿಯಾದ ಮಳೆಯಿಂದಾಗಿ ಬೆಟ್ಟದ ನೀರಿನ ರಭಸಕ್ಕೆ ಕುಸಿತಗೊಂಡು ಎರಡು ವರ್ಷಗಳು ಕಳೆಯುತ್ತಾ ಬಂದರೂ ಇದುವರೆಗೂ ದುರಸ್ತಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಯದಿರುವ ಕಾರಣ ಈ ವ್ಯಾಪ್ತಿಯ ಗ್ರಾಮಸ್ಥರೇ ಕಿರು ಸೇತುವೆ ಕುಸಿದ ಜಾಗಕ್ಕೆ ಮಣ್ಣು ಸುರಿದು ತಿರುಗಾಡಲು ದಾರಿ ಮಾಡಿಕೊಂಡಿರುವ ಪ್ರಸಂಗ ಹಾರಂಗಿ ಯಡವನಾಡು ರಸ್ತೆಯಲ್ಲಿ ನಡೆದಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಹಳ್ಳ, ಯಡವನಾಡು, ಮತ್ತು ಐಗೂರು ಹಾರಂಗಿ ಸಂಪರ್ಕ ರಸ್ತೆ ಇದಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆ ನೀರಿನ ಸೆಳೆತಕ್ಕೆ ಕುಸಿತಗೊಂಡ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ೫ ಗ್ರಾಮಗಳ ಗ್ರಾಮಸ್ಥರು, ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮುಖ್ಯ ರಸ್ತೆಯನ್ನು ಸಂಪರ್ಕಿಸಲು ೫ ಕಿ.ಮೀ. ದೂರವನ್ನು ಸುತ್ತಿ ಬರಬೇಕಾಗಿತ್ತು.

ಅಲ್ಲದೆ ಈ ಕಿರು ಸೇತುವೆಯು ಯಡವನಾಡು - ಹುದುಗೂರು ಸಂಪರ್ಕ ರಸ್ತೆಯಾಗಿದ್ದು, ಈ ಭಾಗದ ಜನರು ಕುಶಾಲನಗರ ಕಡೆಗೆ ತೆರಳಲು ಸೋಮವಾರಪೇಟೆ - ಕುಶಾಲನಗರ ಹೆದ್ದಾರಿ ರಸ್ತೆಯು ಹತ್ತಿರ ದುರಸ್ತಿ ಸಂಬAಧಿಸಿದAತೆ ಅನೇಕ ಬಾರಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಅದಕ್ಕೆ ಸಂಬAಧಿಸಿದ ಇಂಜಿನಿಯರ್ ಸ್ಥಳ ಪರಿಶೀಲಿಸಿ ಕಾಮಗಾರಿಯ ವರದಿಯನ್ನು ನೀಡಿದ್ದಾರೆ. ಆದರೆ ಇದುವರೆಗೂ ಕಾಮಗಾರಿಯ ಯಾವುದೇ ರೀತಿಯ ಟೆಂಡರ್ ಪ್ರಕ್ರಿಯೆಗಳು ಜಿಲ್ಲಾ ಮಟ್ಟದಲ್ಲಿ ನಡೆಯದೆ ಇದ್ದ ಕಾರಣ ಗ್ರಾಮಸ್ಥರೇ ದುರಸ್ತಿ ಕಾರ್ಯಕ್ಕೆ ಮುಂದಾದರು.

ಇದು ತಾತ್ಕಾಲಿಕವಾಗಿ ಗ್ರಾಮಸ್ಥರು ಮಾಡಿಕೊಂಡಿರುವ ವ್ಯವಸ್ಥೆ ಮುಂದಿನ ದಿನಗಳಲ್ಲಿ ಮಳೆಗಾಲ ಆರಂಭವಾಗದ ಬೆಟ್ಟದ ನೀರು ಹರಿಯಲು ಈ ಜಾಗದ ಮೂಲಕ ಕೆಳ ಭಾಗಕ್ಕೆ ಹರಿಯಬೇಕಾಗುತ್ತದೆ, ಅಧಿಕಾರಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಕೈಗೊಳ್ಳುವಂತೆ ನಾಲ್ಕು ಗ್ರಾಮಗಳ ಗ್ರಾಮಸ್ಥರ ಆಗ್ರಹವಾಗಿದೆ.

-ಕೆ.ಕೆ. ನಾಗರಾಜ ಶೆಟ್ಟಿ.