ಸಿದ್ದಾಪುರ, ಏ. ೧೯: ಕೊಂಡAಗೇರಿ ದರ್ಗಾ ಶರೀಫಿನಲ್ಲಿ ಉರೂಸ್ ಕಾರ್ಯಕ್ರಮಕ್ಕೆ ವಿಶೇಷ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು.
ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಸರಫುಸ್ಸಾದಾತ್ ಅಸಯ್ಯದ್ ಮೊಹಮ್ಮದ್ ಅಶ್ರಫ್ ಸಖಾಫಿ ತಂಙಳ್ ಆದೂರು ಅವರು ನೇತೃತ್ವದಲ್ಲಿ ಕೊಂಡAಗೇರಿ ಸುನ್ನೀ ಮುಸ್ಲಿಂ ಜಮಾಅತ್ ಅಧ್ಯಕ್ಷ ಕುಪ್ಪಂದರ ಕೆ. ಯೂಸುಫ್ ಹಾಜಿ, ಉಪಾಧ್ಯಕ್ಷ ಪುಡಿಯಂಡ ಈ ಶಾದುಲಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ತಕ್ಕ ಮುಖ್ಯಸ್ಥರುಗಳಾದ ಪೇರಿಯಂಡ ಎ ಕುಂಞೆ ಅಹಮದ್ ಮುಸ್ಲಿಯಾರ್, ಕುಪ್ಪಂದರ ಎಂ.ಯಹ್ಯಾ ಹಾಜಿ, ಎಂ.ಐ. ಇಕ್ಬಾಲ್, ಕೊಟ್ಟಿಯಾಟ್ ಎಂ.ಶಾದುಲಿ, ಸಮಿತಿಯ ಕಾರ್ಯದರ್ಶಿ ಪೇರಿಯಂಡ ಎಂ ಹಂಸ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
ತಾ೨೨ ರಂದು ಸಮ್ಮೇಳನ
ತಾ ೨೨ ರಂದು ಬೆಳಿಗ್ಗೆ ೧೧ ಗಂಟೆಗೆ ಸಾರ್ವಜನಿಕ ಸಮ್ಮೇಳನವನ್ನು ಧಾರ್ಮಿಕ ಪಂಡಿತ ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ಉದ್ಘಾಟನೆ ಮಾಡಲಿದ್ದು. ಅಸ್ಸಯ್ಯದ್ ಆಟಕೋಯ ಅಸ್ಸಖಾಫ್ ತಂಙಳ್ ಆದೂರು ದುಆಃ ನೇತೃತ್ವ ವಹಿಸಲಿದ್ದಾರೆ.
-ಎಸ್.ಎಂ ಮುಬಾರಕ್