ಐಗೂರು, ಏ. ೧೯ : ಈ ಬಾರಿಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಐಗೂರಿನ ಪ್ರಾಥಮಿಕ ಕೃಷಿ ಸಂಘದ ಸಭಾಂಗಣದಲ್ಲಿ ರಾ. ಸ್ವ. ಸೇವಕ ಸಂಘದ ಪ್ರಮುಖರು, ಸಂಘ ಪರಿವಾರದ ಪ್ರಮುಖರು, ಬಿಜೆಪಿ ಪ್ರಮುಖರು ಮತ್ತು ಜೆಡಿಎಸ್ ಮೈತ್ರಿಯ ಪ್ರಮುಖರು ಒಟ್ಟು ಸೇರಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಂಡಿದ್ದರು.

ಈ ಸಭೆಯಲ್ಲಿ ಉಪಸ್ಥಿತರಿದ್ದ ಆರ್‌ಎಸ್‌ಎಸ್ ಪ್ರಮುಖ ತೋಳೂರುಶೆಟ್ಟಳ್ಳಿಯ ರವಿಯವರು ಮಾತನಾಡಿ ಗ್ರಾಮಗಳಲ್ಲಿ ಬೂತ್ ಮಟ್ಟದ ಕಾರ್ಯಕರ್ತರನ್ನು ಒಟ್ಟು ಸೇರಿಸಿ ಕೇಂದ್ರ ಸರಕಾರದ ಯೋಜನೆಗಳ ಸಾಧನೆಯನ್ನು ಮನೆ ಮನೆಗೆ ತಲುಪಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಮಂಡಲ ಉಪಾಧ್ಯಕ್ಷ ಎನ್.ಆರ್. ಅಜೀಶ್ ಕುಮಾರ್ ಮಾತನಾಡಿ ಈ ಹಿಂದಿನ ಚುನಾವಣೆಯಲ್ಲಿ ಐಗೂರು ಭಾಗದಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ದೊರಕಿದ್ದು ಪಕ್ಷದ ಕಾರ್ಯಕರ್ತರ ಶ್ರಮದ ಫಲವಾಗಿದ್ದು ಈ ಚುನಾವಣೆಯಲ್ಲಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕೆಂದರು.

ಮಂಡಲ ಮಾಜಿ ಉಪಾಧ್ಯಕ್ಷ ಪ್ರಭಾಕರ್ ಮಾತನಾಡಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಒಟ್ಟು ಸೇರಿಸಿ ಒಂದು ತಂಡದAತೆ ಕೆಲಸ ಮಾಡಬೇಕೆಂದರು. ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ್, ಸೊ.ಪೇಟೆ ಮಂಡಲ ಉಪಾಧ್ಯಕ್ಷ ಅಜೀಶ್ ಕುಮಾರ್, ಮಂಡಲ ಮಾಜಿ ಉಪಾಧ್ಯಕ್ಷ ಪ್ರಭಾಕರ್, ಸೋ.ಪೇಟೆ ಮಂಡಲ ಕಾರ್ಯದರ್ಶಿ ದರ್ಶನ್ ಜೋಯಪ್ಪ, ಕೊಡಗು ಜಿಲ್ಲಾ ಸಮನ್ವಯ ಸಮಿತಿ ಸಂಚಾಲಕರಾದ ರವಿ ,ಸಮನ್ವಯ ಸಮಿತಿ ಪ್ರಮುಖರಾದ ಸನತ್, ಕೃಷಿ ಪತ್ತಿನ ಸದಸ್ಯೆ ದಾಕ್ಷಾಯಿಣಿ, ಕೃಷಿ ಮೋರ್ಚಾದ ಮಚ್ಚಂಡ ಪ್ರಕಾಶ್, ಎಪಿಎಂಸಿ ಉಪಾಧ್ಯಕ್ಷ ಟಿ .ಕೆ. ರಮೇಶ್ ,ಗ್ರಾಂ. ಪಂ ಸದಸ್ಯ ರಾಜೇಶ್, ಮಾಜಿ ಗ್ರಾಂ.ಪA. ಅಧ್ಯಕ್ಷ ರಾಯ್ ,ಸಾಮಾಜಿಕ ಜಾಲತಾಣದ ಹರೀಶ್ ಕುಮಾರ್ ಉಪಸ್ಥಿತರಿದ್ದರು.

-ಸುಕುಮಾರ