ವೀರಾಜಪೇಟೆ, ಏ. ೧೯: ಸಮೀಪದ ಬೇಟೋಳಿ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಸಭಾಂಗಣದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮತ್ತು ವಿನಾಯಕ ಭಜನಾ ಮಂಡಳಿಯ ಸಹಯೋಗದಲ್ಲಿ ಉಚಿತ ಕುಣಿತ-ಭಜನೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಬೆಳ್ತಂಗಡಿಯ ಪ್ರಸಿದ್ಧ ಕುಣಿತ-ಭಜನೆಯ ತರಬೇತುದಾರ ಹರೀಶ್ ನೆರಿಯ ಅವರು ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯಾವ ಮನೆಯಲ್ಲಿ ನಿತ್ಯ ತಾಳದ ಸದ್ದು ಕೇಳಿಸುತ್ತದೋ ಅಂತಹ ಮನೆಗೆ ಬೇರೆ ಸುರಕ್ಷಿತ ಸಾಧನಗಳ ಅಗತ್ಯವಿಲ್ಲ. ಮಕ್ಕಳು ಮೊಬೈಲ್‌ಅನ್ನು ಅತಿಯಾಗಿ ಬಳಸದೇ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಸನಾತನ ಸಂಸ್ಕöÈತಿಯ ವಿಚಾರಧಾರೆಗಳನ್ನು ಅರಿಯಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಊರಿನ ಹಿರಿಯರಾದ ವೀಣಾ ಅವರು ಮಾತನಾಡಿ, ಭೂ ಗರ್ಭದ ಆಳದಲ್ಲಿ ನೀರಿನ ವರತೆ ತುಂಬಿರುವAತೆ ಪ್ರತಿಯೊಬ್ಬರ ಅಂತರಾಳದಲ್ಲೂ ದೈವತ್ವ ತುಂಬಿರುತ್ತದೆ. ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಗಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ತರಬೇತುದಾರ ಕೀರ್ತಿ ಧರ್ಮಸ್ಥಳ, ವಿನಾಯಕ ಭಜನಾ ಮಂಡಳಿ ಸದಸ್ಯರಾದ ಗೀತಾ ನಂದ, ಸುಮನ, ನಾಗವೇಣಿ, ಸಂಗೀತ, ಲಕ್ಷಿ÷್ಮ, ಜ್ಯೋತಿ ವೇಣುಗೋಪಾಲ್, ಜ್ಯೋತಿ ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು. ತರಬೇತಿ ಶಿಬಿರದಲ್ಲಿ ೩೫ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.