ಪೊನ್ನಂಪೇಟೆ, ಏ. ೧೯: ಗದ್ದೆಯ ಬಯಲಲ್ಲಿ ಮೇಯಲು ಬಿಟ್ಟಿದ್ದ ಹಸುವೊಂದರ ಮೇಲೆ ಹಾಡಹಗಲೇ ದಾಳಿ ನಡೆಸಿದ ಹುಲಿ, ಅದನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ಬಿಟ್ಟಂಗಾಲ ಸಮೀಪದ ಅಂಬಟ್ಟಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅಂಬಟ್ಟಿ ಗ್ರಾಮದ ಕಿಕ್ಕರೆ ಎಚ್. ತೌಫಿಕ್ ಎಂಬವರಿಗೆ ಸೇರಿದ ಆರು ವರ್ಷ ಪ್ರಾಯದ ಅಡ್ಡತಳಿಯ ಹಸು ಹುಲಿ ದಾಳಿಗೆ ಸಿಲುಕಿ ಸಾವಿನಿಂದ ಪಾರಾಗಿದ್ದರೂ ಇದೀಗ ಗಂಭೀರ ಗಾಯದೊಂದಿಗೆ ಸಾವು ಬದುಕಿನೊಂದಿಗೆ ಹೋರಾಡುತ್ತಿದೆ.
ತನ್ನ ಮನೆಯ ಸಮೀಪದಲ್ಲಿರುವ ಅಬ್ಬಿಮೂಲೆ ಎಂಬ ಗದ್ದೆಬಯಲಿನಲ್ಲಿ ಎಂದಿನAತೆ ಹಸುವನ್ನು ಮೇಯಲು ಬಿಟ್ಟಿದ್ದ ತೌಫಿಕ್, ಸಂಜೆ ವೇಳೆ ಹಸುವನ್ನು ಮನೆಗೆ ಕರೆತರಲು ಸ್ಥಳಕ್ಕೆ ತೆರಳಿದಾಗ ಹಸು ಪತ್ತೆಯಾಗಲಿಲ್ಲ. ಇದರಿಂದ ಸಂಶಯಗೊAಡ ತೌಫೀಕ್, ಸಮೀಪದ ತೋಟಕ್ಕೆ ತೆರಳಿ ನೋಡಿದಾಗ ತೀವ್ರ ರಕ್ತಸ್ರಾವದೊಂದಿಗೆ ಹಸು ನರಳಾಡುತ್ತಿತ್ತು ಎನ್ನಲಾಗಿದೆ. ಮಧ್ಯಾಹ್ನದ ನಂತರ ಅಂದಾಜು ೩.೩೦ರ ಸಮಯದಲ್ಲಿ ಏಕಾಏಕಿ ದಾಳಿ ನಡೆಸಿದ ಹುಲಿ ಹಸುವಿನ ಹಿಂದಿನ ಭಾಗಕ್ಕೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ಈ ಸಂದರ್ಭದಲ್ಲಿ ಹಸು ತೀವ್ರ ಪ್ರತಿರೋಧ ಒಡ್ಡಿದಾಗ ದಾಳಿಯನ್ನು ಮುಂದುವರಿಸದೆ ಹುಲಿ ವಾಪಸ್ ತೆರಳಿರಬಹುದು ಎಂದು ಶಂಕಿಸಲಾಗಿದೆ.
ಕಳೆದ ವರ್ಷ ಇದೇ ಹಸುವನ್ನು ಈ ಪ್ರದೇಶದಲ್ಲಿ ಹುಲಿಯೊಂದು ದಾಳಿ ನಡೆಸಿ ತೀವ್ರವಾಗಿ ಗಾಯ ಗೊಳಿಸಲಾಗಿತ್ತು. ಬಳಿಕ ಪಶುವೈದ್ಯಾಧಿಕಾರಿಗಳ ನಿರಂತರ ಚಿಕಿತ್ಸೆಯ ಫಲವಾಗಿ ಹಸು ಸಾವಿನ ಅಂಚಿನಿAದ ಪಾರಾಗಿತ್ತು ಎಂದು ತೌಫಿಕ್ ತಿಳಿಸಿದ್ದಾರೆ.
ಹುಲಿ ದಾಳಿಯ ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದಾಗ ಸ್ಥಳಕ್ಕೆ ಬಂದು ಪರಿಶೀಲಿಸಿದ ವೀರಾಜಪೇಟೆ ಅರಣ್ಯ ಅಧಿಕಾರಿಗಳು, ಹುಲಿ ದಾಳಿಯಿಂದ ಗಾಯಗೊಂಡ ಹಸುವಿಗೆ ಸೂಕ್ತ ಪರಿಹಾರ ನೀಡಲು ಗಾಯದ ಪ್ರಮಾಣದ ಕುರಿತ ನಿರ್ದಿಷ್ಟ ಮಾನದಂಡವಿದೆ. ಈ ಗಾಯದ ಮಾನದಂಡದಲ್ಲಿ ಹಸುವಿನ ಮಾಲೀಕರಿಗೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾರ್ವಜನಿಕರು ಆಕ್ಷೇಪಿಸಿದ್ದು, ಪರಿಹಾರಕ್ಕೆ ಆಗ್ರಹಿಸಿದ್ದಾರೆ.