ಸಿದ್ದಾಪುರ, ಏ. ೧೮: ಸಿದ್ದಾಪುರದ ಜೈ ಭೀಮ್ ಯುವಕ ಸಂಘದ ವತಿಯಿಂದ ಸಿದ್ದಾಪುರದ ಕೂಡುಗದ್ದೆ ಮೈದಾನದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯಾಟವನ್ನು ಸಿದ್ದಾಪುರದ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ರವಿ ಹೆಚ್.ಎಸ್. ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಯುವಕರು ಕ್ರೀಡೆಯ ಮೂಲಕ ತಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು. ಗ್ರಾಮೀಣ ಕ್ರೀಡಾಕೂಟಗಳ ಬಗ್ಗೆ ಯುವಕರು ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಹೇಳಿದರು. ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಹೆಚ್‌ಎಂಸಿ ಅಂಬೇಡ್ಕರ್ ನಗರ ಪಡೆದುಕೊಂಡಿತು. ದ್ವಿತೀಯ ಬಹುಮಾನವನ್ನು ಸಿದ್ದಾಪುರ ತಂಡ, ತೃತೀಯ ಬಹುಮಾನವನ್ನು ವೀರಾಜಪೇಟೆ ತಂಡ ಹಾಗೂ ನಾಲ್ಕನೇ ಬಹುಮಾನವನ್ನು ಅಮ್ಮತ್ತಿ ತಂಡವು ಪಡೆದುಕೊಂಡಿತು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜೈ ಭೀಮ್ ಯುವಕ ಸಂಘದ ಪದಾಧಿಕಾರಿಗಳಾದ ಬಾಲು, ಚಿಕ್ಕ, ಜಗ್ಗು, ಟೋನಿ, ಮಹೇಂದ್ರ ಇನ್ನಿತರರು ಹಾಜರಿದ್ದರು.