ಚೆಯ್ಯಂಡಾಣೆ, ಏ. ೧೮: ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದ ಕಡಿಯತ್ನಾಡು ಪೊನ್ನೋಲ ಸಾರ್ಥಾವು ಬೈತೂರು ಕಾರ್ಯಾರು ಹಾಗೂ ಪುದಿಯೋದಿ ದೇವರ ವಾರ್ಷಿಕ ಹಬ್ಬವು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಶ್ರದ್ಧಾಭಕ್ತಿಯಿಂದ ನಡೆಯಿತು.
ತಾ. ೧೩ ರಂದು ಬೆಳಿಗ್ಗೆ ೯ ಗಂಟೆಗೆ ಪಡಿಞರಮ್ಮಂಡ ದೇವತಕ್ಕರ ಮನೆಯಿಂದ ಭಂಡಾರ ಆಗಮಿಸುವುದರ ಮೂಲಕ ಧಾರ್ಮಿಕ ವಿಧಿವಿಧಾನಗಳು ಆರಂಭಗೊAಡವು. ತಾ.೧೭ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ಎತ್ತು ಪೋರಾಟ, ಮಹಾಪೂಜೆ, ಅಂದಿ ಬೊಳಕ್, ತೆಂಗಿನಕಾಯಿ ಪೊರುವುದು, ಕಣಿಪೂಜೆ, ವಿಶೇಷ ಪೂಜೆ, ವಾರ್ಷಿಕ ಮಹಾಸಭೆ, ದೇವತಕ್ಕರ ಮನೆಗೆ ಭಂಡಾರ ಹೊರಡುವುದು, ಪುದಿಯೋದಿ ದೇವರಿಗೆ ಮೇಲೇರಿ ಸೌದೆ ಕಡಿಯುವುದು, ದೇವತಕ್ಕರ ಮನೆಯಿಂದ ಭಂಡಾರ ಬರುವುದು, ಮೊದಲ ತೋತ, ಎರಡನೇ ತೋತ, ಮೇಲೇರಿ ಅಗ್ನಿ ಹಾಕುವುದು, ಮೂರನೇ ತೋತ, ಬಿರಾಳಿ ತೆರೆ, ಪುದಿಯೋದಿ ತೆರೆ, ಭದ್ರಕಾಳಿ ತೆರೆ ನಡೆದು ನಂತರ ತಕ್ಕರ ಮನೆಗೆ ಭಂಡಾರ ಹಿಂದಿರುಗಿಸಲಾಯಿತು .
ಈ ಬಾರಿ ಸ್ಥಳೀಯ ೫ ಜನ ತಿರುವಳಕಾರರು, ಕೇರಳದ ಪ್ರಖ್ಯಾತ ೧೧ ಚಂಡೆ ಮೇಳದ ತಂಡದವರಿAದ ಚಂಡೆ ವಾದ್ಯ ಹಾಗೂ ಆಕರ್ಷಕ ದೀಪಾಲಂಕಾರ ನೋಡುಗರ ಗಮನ ಸೆಳೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.