ನಾಪೋಕ್ಲು, ಏ. ೧೮: ಸಮೀಪದ ದೊಡ್ಡಪುಲಿಕೋಟು ಗ್ರಾಮದ ಕೋಟೆ ಭಗವತಿ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದ ಉತ್ಸವದಲ್ಲಿ ಊರ ಹಾಗೂ ಪರ ಊರಿನ ಭಕ್ತರು ಪಾಲ್ಗೊಂಡಿದ್ದರು. ಉತ್ಸವದ ಅಂಗವಾಗಿ ಅಂದಿ ಬೊಳಕ್, ಮಹಾಪೂಜೆ, ಎತ್ತು ಪೋರಾಟ, ಪಟ್ಟಣಿ ದೇವಿಯ ನೃತ್ಯ ಬಲಿ, ಪ್ರಸಾದ ವಿತರಣೆ ಬಳಿಕ ಉತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬೊಳಕಾಟ್, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಬಳಿಕ ಕಾವೇರಿ ನದಿಯಲ್ಲಿ ದೇವಿಯ ಜಳಕ. ಅನಂತರ ದೇವಾಲಯದ ಸುತ್ತ ದೇವರ ನೃತ್ಯಬಲಿ ಜರುಗಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಉತ್ಸವ ಸಂಪನ್ನಗೊAಡಿತು. ಪೂಜಾ ಕೈಂಕರ್ಯಗಳನ್ನು ದೇವಾಲಯದ ಮುಖ್ಯ ಅರ್ಚಕ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ನೆರವೇರಿಸಿಕೊಟ್ಟರು. ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಚ್ಚಿರ ತಮ್ಮಯ್ಯ, ಉಪ ಅಧ್ಯಕ್ಷ ಮಣವಟ್ಟಿರ ಮುದ್ದಯ್ಯ, ಮುಕ್ಕಾಟಿರ ಸುತನ್ ಸುಬ್ಬಯ್ಯ, ಕಾರ್ಯದರ್ಶಿ ಕರವಂಡ ಲವ ನಾಣಯ್ಯ, ದೇವಾಲಯದ ತಕ್ಕರಾದ ಪೆಬ್ಬಟ್ಟಿರ ಕುಶಾಲಪ್ಪ, ಕರವಂಡ ರವಿ ಬೋಪಣ್ಣ, ಆಡಳಿತ ಮಂಡಳಿ ನಿರ್ದೇಶಕ ಸದಸ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.