ಕಣಿವೆ, ಏ. ೧೮: ಮರಗೆಣಸು ಹೊಲಕ್ಕೆ ನುಗ್ಗಿ ಕಟಾವಿಗೆ ಬಂದ ಫಸಲನ್ನು ಕಾಡಾನೆಗಳು ತಿಂದು ಹಾನಿಪಡಿಸಿದ ಪ್ರಸಂಗ ನಾಕೂರು ಶಿರಂಗಾಲದಲ್ಲಿ ನಡೆದಿದೆ.
ಹೆರೂರು ಗ್ರಾಮದ ಪ್ರಗತಿಪರ ಕೃಷಿಕ ಅರುಣಕುಮಾರ್ ಎಂಬವರು ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಹಣ ವ್ಯಯಿಸಿ ಬೆಳೆದಿದ್ದ ಮರಗೆಣಸು ಫಸಲು ಪೂರ್ಣ ಪ್ರಮಾಣದಲ್ಲಿ ಕಾಡಾನೆಗಳ ಪಾಲಾಗಿದೆ. ಇದರಿಂದಾಗಿ ಲಕ್ಷಾಂತರ ರೂಗಳ ಬೆಳೆ ನಷ್ಟವಾಗಿದೆ.
ಕಾಡಾನೆಗಳ ಹಿಂಡು ಯಾವ ರೀತಿ ಬೆಳೆನಷ್ಟ ಮಾಡಿವೆ ಎಂದರೆ, ಒಂದೂವರೆ ಎಕರೆಯಷ್ಟು ಮರಗೆಣಸು ಫಸಲಿನ ಹೊಲದ ಒಟ್ಟು ೩,೫೦೦ ಬುಡಗಳ ಪೈಕಿ ಬಹುತೇಕ ಫಸಲನ್ನು ಒಂದು ಕಡೆಯಿಂದ ಕಿತ್ತು ಮಣ್ಣನ್ನು ಒದರಿ ಫಸಲನ್ನು ತಿಂದು ತುಳಿದು ಹಾನಿಪಡಿಸಿ ಕಾಡಿಗೆ ಮರಳಿವೆ.
ಕಲ್ಲೂರು ಅರಣ್ಯದಿಂದ ಧಾವಿಸಿ ಬಂದ ಈ ಕಾಡಾನೆಗಳ ಹಿಂಡಿನಿAದ ಅಪಾರ ಪ್ರಮಾಣದ ನಷ್ಟ ವಾಗಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು. ನಮಗಾಗಿರುವ ಸಂಪೂರ್ಣ ಬೆಳೆ ನಷ್ಟವನ್ನು ಭರಿಸಬೇಕೆಂದು ರೈತ ಅರುಣಕುಮಾರ್ ಒತ್ತಾಯಿಸಿದ್ದಾರೆ.
ಕಾಡಾನೆ ಹಾವಳಿ ತಡೆಗೆ ಸೂಕ್ತ ಕ್ರಮಕೈಗೊಂಡು ಶಾಶ್ವತ ಯೋಜನೆ ರೂಪಿಸುವಂತೆ ನಿವಾಸಿಗಳು ಆಗ್ರಹಿ ಸಿದ್ದಾರೆ. ವರದಿ : ಕೆ.ಎಸ್. ಮೂರ್ತಿ