ಮಡಿಕೇರಿ, ಏ. ೧೭: ಮಡಿಕೇರಿಯ ಜನರಲ್ ತಿಮ್ಮಯ್ಯ ಪ್ಲಬ್ಲಿಕ್ ಶಾಲೆಯಲ್ಲಿ ೧೦ ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿ ನಿವೃತ್ತರಾಗಿರುವ ಕಲ್ಮಾಡಂಡ ಸರಸ್ವತಿ ಸುಬ್ಬಯ್ಯ ಅವರಿಗೆ ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವಾ ಮನೋಭಾವನೆಯೊಂದಿಗೆ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಬೇಕೆಂದರು. ಸರಸ್ವತಿ ಅವರ ಸೇವೆಯನ್ನು ಸ್ಮರಿಸಿ ಆಭಿನಂದಿಸಿದರು.
ಶಾಲಾ ಕಾರ್ಯಧ್ಯಕ್ಷ ಕೇಕಡ ವಿಜು ದೇವಯ್ಯ, ಕರಸ್ಪಾಂಡೆAಟ್ ಕನ್ನಂಡ ಕವಿತಾಬೊಳ್ಳಪ್ಪ, ಮಾಜಿ ಕಾರ್ಯಾಧ್ಯಕ್ಷ ನಂದಿನೆರವAಡ ಚೀಯಣ್ಣ, ನಿರ್ದೇಶಕರಾದ ಕನ್ನಂಡ ಸಂಪತ್, ನಂದಿನೆರವAಡ ದಿನೇಶ್, ಪುತ್ತರಿರ ಕರುಣ್ ಕಾಳಯ್ಯ, ನಂದಿನೆರವAಡ ರವಿಬಸಪ್ಪ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ, ಮಂಡಿರ ಸದಾಮುದ್ದಪ್ಪ, ಬೊಪ್ಪಂಡ ಸರಳಾ ಕರುಂಬಯ್ಯ, ಆಡಳಿತಾಧಿಕಾರಿಗಳಾದ ಮುಕ್ಕಾಟಿರ ಪೊನಮ್ಮ, ಚೌರಿರ ಕಾವೇರಿ ಪೂವಯ್ಯ, ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ನಿಯೋಜಿತ ಶಾಲಾ ಪ್ರಾಂಶುಪಾಲರಾದ ಬಾಳೆಯಡ ಸವಿತಾ ಪೂವಯ್ಯ ವೇದಿಕೆಯಲ್ಲಿದ್ದರು.
ಬೊಪ್ಪಂಡ ಸರಳಾ ಕರುಂಬಯ್ಯಪಾರ್ಥಿಸಿ,ಕೇಕಡ ವಿಜುದೇವಯ್ಯ ಸ್ವಾಗತಿಸಿ ಕನ್ನಂಡ ಕವಿತ ಬೊಳ್ಳಪ್ಪ ವಂದಿಸಿದರು.
ಈ ಹಿಂದಿನ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಚೋವಂಡ ಕಾಳಪ್ಪ, ಮಣವಟ್ಟಿರ ಚಿಣ್ಣಪ್ಪ, ಕುಡುವಂಡ ಉತ್ತಪ್ಪ, ಚೊಟ್ಟೆಯಂಡ ಸಂಜು, ಕೊಡವ ವಿದ್ಯಾನಿಧಿಯ ಕಾರ್ಯದರ್ಶಿ ಮೇದುರ ರವಿ ಕಾವೇರಪ್ಪ, ಶಾಲಾ ಶಿಕ್ಷಕ ವೃಂದ, ಸಿಬ್ಬಂದಿವರ್ಗ, ಸೌಹಾರ್ಧ ಸಹಕಾರ ಬ್ಯಾಂಕಿನ ಹಾಗು ಮಡಿಕೇರಿ ಕೊಡವ ಸಮಾಜದ ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.