ನಾಪೋಕ್ಲು, ಏ. ೧೭: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಂಡ್ಯೋಳAಡ ಕಪ್ನ ೧೯ನೇ ದಿನದ ಪಂದ್ಯಾಟದಲ್ಲಿ ೫ ಬಾರಿ ಚಾಂಪಿಯನ್ ಪಟ್ಟ ಪಡೆದ ೮ ಬಾರಿ ಫೈನಲ್ ಪಂದ್ಯದಲ್ಲಿ ಆಟವಾಡಿ ಕೊಡವ ಹಾಕಿ ನಮ್ಮೆಯಲ್ಲಿ ಹೆಸರುಗಳಿಸಿದ ಪಳಂಗAಡ ತಂಡ ಕಡೇಮಾಡ ತಂಡದ ವಿರುದ್ಧ ಸೋಲನುಭವಿಸಿ ಪಂದ್ಯಾಟದಿAದ ಹೊರ ಬಿದ್ದಿದ್ದು ಹಾಕಿ ಪ್ರೇಮಿಗಳಿಗೆ ನಿರಾಸೆ ಮೂಡಿಸಿದೆ. ಉಳಿದಂತೆ ಒಟ್ಟು ೯ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಮೈದಾನ ೧ರಲ್ಲಿ ಸಣ್ಣುವಂಡ ಮತ್ತು ಐಚಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಸಣ್ಣುವಂಡ ತಂಡವು ಐಚಂಡ ತಂಡವನ್ನು ೩-೦ ಗೋಲಿನ ಅಂತರದಿAದ ಪರಾಭವಗೊಳಿಸಿತು. ಸಣ್ಣುವಂಡ ತಂಡದ ಉತ್ತಪ್ಪ, ಪೊನ್ನಣ್ಣ, ಪೂವಯ್ಯ ತಲಾ ಒಂದು ಗೋಲು ದಾಖಲಿಸಿ ಸಂಭ್ರಮಿಸಿದರು. ಚೇಂದಿರ ಮತ್ತು ಮುದ್ದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೇಂದಿರ ತಂಡವು ಮುದ್ದಂಡ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿತು. ಚೇಂದಿರ ತಂಡದ ಪರ ಚೇತನ್ ಎರಡು, ವಿನು, ಪುನೀತ್ ತಲಾ ಒಂದು ಗೋಲುಗಳಿಸಿದರು. ಕೊಲ್ಲಿರ ಮತ್ತು ಮುಂಡಚಾಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಲ್ಲಿರ ತಂಡವು ಮುಂಡಚಾಡಿರ ತಂಡವನ್ನು ೧-೦ ಗೋಲುಗಳ ಅಂತರದಿAದ ಸೋಲಿಸಿತು. ಕೊಲ್ಲಿರ ತಂಡದ ಪರ ಸೋಮಣ್ಣ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
ಮಾಜಿ ಚಾಂಪಿಯನ್ ಪಳಂಗAಡ ಮತ್ತು ಕಡೇಮಾಡ ತಂಡಗಳ ನಡುವಿನ ಸೆಣಸಾಟದಲ್ಲಿ ಕಡೇಮಾಡ ತಂಡವು ಪಳಂಗAಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿತು. ಕಡೇಮಾಡ ತಂಡದ ಪರ ಕಾವೇರಪ್ಪ, ರಚನ್ ತಲಾ ಒಂದು ಗೋಲು ದಾಖಲಿಸಿದರು. ಮೇರಿಯಂಡ ಮತ್ತು ಬಾರಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೇರಿಯಂಡ ತಂಡವು ಬಾರಿಯಂಡ ತಂಡವನ್ನು ೪-೧ ಗೋಲಿನಿಂದ ಪರಾಭವಗೊಳಿಸಿತು. ಮೇರಿಯಂಡ ತಂಡದ ಪರ ರೊನಾಲ್ ಅಯ್ಯಪ್ಪ ಎರಡು, ಅಯ್ಯಪ್ಪ, ನಿಖಿಲ್ ತಲಾ ಒಂದು ಗೋಲು ದಾಖಲಿಸಿದರು. ಬಾರಿಯಂಡ ತಂಡದ ಪರ ವಿನು ಭೀಮಯ್ಯ ಒಂದು ದಾಖಲಿಸಿದರು.
ಮೈದಾನ ೨ರಲ್ಲಿ ನಡೆದ ಕುಟ್ಟಂಡ ಮತ್ತು ಕನ್ನಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಕನ್ನಂಡ ತಂಡವು ಕುಟ್ಟಂಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿತು. ಕನ್ನಂಡ ತಂಡದ ಪರ ಅರುಣ್ ನಾಚಪ್ಪ, ರೋಹನ್ ಅಯ್ಯಪ್ಪ ತಲಾ ಒಂದು ಗೋಲು ದಾಖಲಿಸಿದರೆ, ಕುಟ್ಟಂಡ ತಂಡದ ಪರ ರಜೀನಾ ಒಂದು ಗೋಲು ದಾಖಲಿಸಿದರು. ಸೋಮೆಯಂಡ ಮತ್ತು ಮತ್ರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ನಂತರ ನಡೆದ ಟೈಬ್ರೇಕರ್ನಲ್ಲಿ ಮತ್ರಂಡ ತಂಡವು ಸೋಮೆಯಂಡ ತಂಡವನ್ನು ೬-೫ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ತೀತಿಮಾಡ ಮತ್ತು ನಂಬುಡುಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಂಬುಡುಮಾಡ ತಂಡವು ತೀತಿಮಾಡ ತಂಡವನ್ನು ೩-೧ ಗೋಲುಗಳಿಂದ ಮಣಿಸಿತು. ನಂಬುಡುಮಾಡ ತಂಡದ ಪರ ನಿಹಾಲ್ ಅಚ್ಚಯ್ಯ, ಅಭೀನ್ ಅಪ್ಪಣ್ಣ, ಅಶ್ವನ್ ಮಂದಣ್ಣ ತಲಾ ಒಂದು ಗೋಲು ದಾಖಲಿಸಿದರೆ, ತೀತಿಮಾಡ ತಂಡದ ಪರ ಪ್ರಜ್ವಲ್ ಬೋಪಯ್ಯ ಒಂದು ದಾಖಲಿಸಿದರು. ಮನೆಯಪಂಡ ಮತ್ತು ನಾಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಪಂಡ ತಂಡವು ಮನೆಯಪಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ನಾಪಂಡ ತಂಡದ ಪರ ಕಿರಣ್ ಪೊನ್ನಣ್ಣ, ನಾಚಪ್ಪ, ಬೋಪಣ್ಣ ತಲಾ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
-ಪಿ.ವಿ.ಪ್ರಭಾಕರ್