ಮಡಿಕೇರಿ, ಏ. ೧೭: ಮೈಸೂರು-ಕೊಡಗು ಕ್ಷೇತ್ರಕ್ಕೆ ಸಂಬAಧಿಸಿದAತೆ ಪ್ರತ್ಯೇಕ ಪ್ರಣಾಳಿಕೆಯನ್ನು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷಣ್ ಗೌಡ ಬಿಡುಗಡೆಗೊಳಿಸಿದರು. ನಗರದ ಖಾಸಗಿ ಹೊಟೇಲ್‌ನಲ್ಲಿ ೨೩ ಅಂಶಗಳ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೈಸೂರು-ಕೊಡಗು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರೆ ನಿಮ್ಮ ಆದ್ಯತೆಯೇನು ಎಂದು ಮತದಾರರು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಕ್ಷೇತ್ರದ ವ್ಯಾಪ್ತಿಯ ಶಾಸಕರೊಂದಿಗೆ ಚರ್ಚಿಸಿ ಮುಖ್ಯಮಂತ್ರಿಯವರ ಒಪ್ಪಿಗೆ ಪಡೆದು ಮೈಸೂರು-ಕೊಡಗು ಕ್ಷೇತ್ರದಲ್ಲಿ ಮುಂದಿನ ೫ ವರ್ಷಗಳಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಕಾರ್ಯಗಳ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆಗೊಳಿಸುತ್ತಿದ್ದೇವೆ ಎಂದು ಹೇಳಿದರು.

ವೀರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣö, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ ಚಂದ್ರಕಲಾ, ಕಾಂಗ್ರೆಸ್ ಮಾಧ್ಯಮ ಸಂವಹನ ವಕ್ತಾರ ಟಿ.ಪಿ ರಮೇಶ್ ಹಾಜರಿದ್ದರು.

ಪ್ರಣಾಳಿಕೆಯಲ್ಲೇನಿದೆ?

¨ ಪಾರಂಪರಿಕ ಪ್ರದೇಶಗಳಾದ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಪಾರಂಪರಿಕ ಪ್ರಾಧಿಕಾರ ರಚಿಸಿ ೩೦೦೦ ಕೋಟಿ ಅನುದಾನ ತರುವ ಪ್ರಯತ್ನ.

¨ ಮೊದಲನೆಯ ಹಂತದ ಮೈಸೂರು- ಕುಶಾಲನಗರ ರೈಲ್ವೆ ಮಾರ್ಗ ೫ ವರ್ಷಗಳಲ್ಲಿ ಪೂರ್ಣಗೊಳಿಸಲು ಕ್ರಮ.

¨ ಮೈಸೂರು ವಿಮಾನ ನಿಲ್ದಾಣವನ್ನು ರಾಷ್ಟಿçÃಯ ಮಟ್ಟಕ್ಕೆ ಮೇಲ್ದರ್ಜೇಗೇರಿಸಲು ರನ್‌ವೇ ವಿಸ್ತರಿಸಲು ಕ್ರಮ

¨ ಮೈಸೂರಿನಲ್ಲಿ ಐಟಿ ಮತ್ತು ಬಿಟಿ ಕಂಪನಿಗಳು ಪ್ರಾರಂಭಿಸಲು ಆದ್ಯತೆ, ಸ್ಥಳೀಯರಿಗೆ ಶೇ. ೫೦ರಷ್ಟು ಉದ್ಯೋಗ ಅವಕಾಶ.

¨ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೂ ಮತ್ತು ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯ ಅನುಷ್ಠಾನ.

¨ ಪಿರಿಯಾಪಟ್ಟಣದಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ.

¨ ಪಾರಂಪರಿಕ ಕಟ್ಟಡಗಳು, ಸಮೃದ್ಧ ವನ್ಯಲೋಕ, ಕರ್ನಾಟಕದ ಕಾಶ್ಮೀರವನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಮೈಸೂರು-ಕೊಡಗು ಪ್ರವಾಸೋದ್ಯಮ ಅಭಿವೃದ್ಧಿ.

¨ ಮೈಸೂರು-ಕೊಡಗು ಲೋಕಸಭಾ ವ್ಯಾಪ್ತಿಯಲ್ಲಿ ಆಯ್ದ ಪ್ರಮುಖ ಕೆರೆಗಳ ಜೀರ್ಣೋದ್ಧಾರ

¨ ಕೊಡಗು ಜಿಲ್ಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ನೆರವಿನಿಂದ ಅತ್ಯಾಧುನಿಕ ಸೌಲಭ್ಯ ಅಳವಡಿಕೆ ಮತ್ತು ವಿಸ್ತರಣೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ತುರ್ತು ಟ್ರಾಮಾ ಕೇಂದ್ರ ಸ್ಥಾಪನೆಗೆ ಪ್ರಯತ್ನ.

¨ ಸೈನ್ಸ್ ಸಿಟಿ ಪ್ಲಾನಿಟೋರಿಯಂ ವ್ಯವಸ್ಥೆಯ ಮೂಲಕ ಖಗೋಳಶಾಸ್ತ್ರ ಅಭ್ಯಾಸ ಮಾಡಲು 'ಟೆಕ್ನಾಲಜಿ ಪಾರ್ಕ್' ಸೋಮವಾರಪೇಟೆಯಲ್ಲಿ ಸ್ಥಾಪನೆಗೆ ಶ್ರಮ.

¨ ಕೊಡಗಿನ ಕಾಫಿ, ಏಲಕ್ಕಿ, ಮೆಣಸು ಬೆಳೆಗಾರರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಹಾಗೂ ನಿವೃತ್ತ ಸೇನಾನಿಗಳ ಸಮಸ್ಯೆಗಳಿಗೆ ಪ್ರತ್ಯೇಕ ಪ್ಯಾಕೇಜ್ ಮೂಲಕ ಪರಿಹಾರ. ಫೀ.ಮಾ. ಕಾರ್ಯಪ್ಪ ಅವರಿಗೆ ಮರಣೋತ್ತರ ಭಾರತ ರತ್ನ ಕೊಡಿಸಲು ಪ್ರಯತ್ನ.

¨ ಮೈಸೂರಿನ ಎಲ್ಲಾ ತಾಲೂಕು ಕೇಂದ್ರಗಳ ಮೂಲಕ ಹಾದುಹೋಗುವಂತಹ ರೈಲು ಸಂಪರ್ಕ ಕಲ್ಪಿಸಲು ವರ್ತುಲ ರೈಲು ಮಾರ್ಗವನ್ನು ನಿರ್ಮಿಸಲು ಶ್ರಮಿಸುವುದು.

¨ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಮಡಿಕೇರಿ ನಗರದಲ್ಲಿ ಕೇಂದ್ರ ಸರಕಾರದ ನೆರವಿನಿಂದ ಲಘು ವಿಮಾನ ನಿಲ್ದಾಣ ನಿರ್ಮಿಸಲು ಪ್ರಯತ್ನ.

¨ ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕ್ರೀಡಾಂಗಣ ಅಭಿವೃದ್ಧಿ, ಅಂತರರಾಷ್ಟಿçÃಯ ಹಾಕಿ ಕ್ರೀಡಾಂಗಣ ಸ್ಥಾಪಿಸಲು ಪ್ರಯತ್ನ.

¨ ಮೈಸೂರು ಮತ್ತು ಕೊಡಗು ಜಿಲ್ಲೆಗಳ ತಾಲೂಕು ಕೇಂದ್ರಗಳಲ್ಲಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಯೋಗಾ ಕೇಂದ್ರಗಳನ್ನು ಸಂಸದರ ನಿಧಿಯಡಿಯಲ್ಲಿ ಸ್ಥಾಪಿಸುವುದು.¨ ಮೈಸೂರು-ಕುಶಾಲನಗರ ೬ ಪಥದ ರಾಷ್ಟಿçÃಯ ಹೆದ್ದಾರಿ ಈಗಾಗಲೇ ಮಂಜೂರಾಗಿದ್ದು ರಸ್ತೆ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸಲು ಪ್ರಯತ್ನ.

¨ ಹುಣಸೂರು ತಾಲೂಕಿನಲ್ಲಿ ಕೇಂದ್ರ ವಿಶ್ವವಿದ್ಯಾನಿಲಯ ಸ್ಥಾಪಿಸಲು ಪ್ರಯತ್ನ.

¨ ಕೇಂದ್ರ ಸರಕಾರದ ಅನುದಾನದಲ್ಲಿ ಕೌಶಲ ತರಬೇತಿ ಕೇಂದ್ರವನ್ನು ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಸ್ಥಾಪಿಸಲಾಗುವುದು.

¨ ವೀರಾಜಪೇಟೆಯಲ್ಲಿ ಕಂಪ್ಯೂಟರ್ ಹಾರ್ಡ್ವೇರ್ ತಯಾರಿಸುವ ಘಟಕವನ್ನು ಕೇಂದ್ರ ಸರಕಾರದ ನೆರವಿನಿಂದ ಸ್ಥಾಪಿಸಲು ಪ್ರಯತ್ನ.

¨ ಕಾಫಿ ರಫ್ತು ಕೇಂದ್ರ, ಆಹಾರ ಸಂಸ್ಕರಣ ಘಟಕ (ಫುಡ್ ಪ್ರಾಡಕ್ಟ್), ಪ್ಲೋರಿಕಲ್ಚರ್ ಕೈಗಾರಿಕೆಯನ್ನು ಗೋಣಿಕೊಪ್ಪದಲ್ಲಿ ಜಾರಿಗೊಳಿಸಲಾಗುವುದು.

¨ ಮೈಸೂರು ತಾಲೂಕಿನ ಜಯಪುರದಲ್ಲಿ ಮೆಟಿರಿಯಲ್ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆ.

¨ ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಹರಿಯುತ್ತಿರುವ ಕಾವೇರಿ ನೀರನ್ನು ಉಪಯೋಗಿಸಿ ಸಣ್ಣ-ಸಣ್ಣ ವಿದ್ಯುಚ್ಛಕ್ತಿ ಉತ್ಪಾದನಾ ಘಟಕಗಳ ಸ್ಥಾಪನೆ.

¨ ಮೈಸೂರಿನಲ್ಲಿ ಅಂತರರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣ ಸ್ಥಾಪಿಸಲು ಪ್ರಯತ್ನ.

‘ಕೊಟ್ಟ ಮಾತಿಗೆ ತಪ್ಪುವುದಿಲ್ಲ’

ತಾನು ಸಂಸದನಾಗಿ ಆಯ್ಕೆಯಾದರೆ ಕೊಡಗು - ಮೈಸೂರು ಕ್ಷೇತ್ರಕ್ಕೆ ಏನೆಲ್ಲಾ ಮಾಡುತ್ತೇನೆ ಎಂಬುದನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದು, ಅವುಗಳ ಅನುಷ್ಠಾನಕ್ಕೆ ಬದ್ಧನಾಗಿರುತ್ತೇನೆ. ಯಾವುದೇ ಕಾರಣಕ್ಕೂ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷö್ಮಣ್ ಗೌಡ ಹೇಳಿದರು. ಹಿಂದಿನ ಸಂಸದರು ಕೊಡಗಿನ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಚರ್ಚೆಯೆ ಮಾಡಲಿಲ್ಲ. ಈಗಿನ ಬಿಜೆಪಿ ಅಭ್ಯರ್ಥಿ ಕೊಡಗಿಗಾಗಿ ಏನು ಮಾಡುತ್ತೇನೆ ಎಂಬುದನ್ನು ಹೇಳುತ್ತಿಲ್ಲ. ಆದರೆ, ಕಾಂಗ್ರೆಸ್ ತನ್ನ ಗುರಿ ಏನು ಎಂಬುದನ್ನು ಪ್ರಣಾಳಿಕೆಯಲ್ಲಿ ತಿಳಿಸಿದೆ. ಅದರಂತೆ ನಡೆದುಕೊಳ್ಳುತ್ತೇನೆ. ಜನರ ಪರವಾಗಿರುತ್ತೇನೆ. ತನಗೆ ಮತದಾನ ಮಾಡಿದ ಮತದಾರರ ಮತ ವ್ಯರ್ಥವಾಗದಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಲಕ್ಷö್ಮಣ್‌ಗೌಡ ಹೇಳಿದರು.

‘ಉತ್ತಮ ಸಮಾಜ ನಿರ್ಮಾಣ’

ಜಿಲ್ಲೆಯ ಅಭಿವೃದ್ಧಿಯೊಂದಿಗೆ ಶಾಂತಿ -ಸೌಹಾರ್ದಯುತ ಉತ್ತಮ ಸಮಾಜ ನಿರ್ಮಾಣ ಮಾಡುವ ಉದ್ದೇಶ ಇಟ್ಟುಕೊಂಡು ಕಾಂಗ್ರೆಸ್ ಜನರ ಬಳಿ ಮತ ಕೇಳುತ್ತಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ಕೊಡಗಿಗಾಗಿ ಏನು ಮಾಡುತ್ತೇವೆ ಎಂದು ಬಿಜೆಪಿ ಹೇಳುತ್ತಿಲ್ಲ. ಆದರೆ, ಕಾಂಗ್ರೆಸ್ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕೊಡಗಿಗಾಗಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದೇವೆ ಎಂದು ನುಡಿದರು.

‘ಜನರಿಗೆ ಅನ್ಯಾಯ ಮಾಡುವುದಿಲ್ಲ’

ಈ ಹಿಂದೆ ಕೊಡಗಿನಲ್ಲಿ ಶಾಸಕರು - ಸಂಸದರು ಬಿಜೆಪಿಯವರೇ ಇದ್ದರೂ ಕೂಡ ಕೊಡಗಿಗಾಗಿ ಏನನ್ನೂ ಮಾಡಲಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ್ ಗೌಡ ಅವರು ಸಂಸದರಾಗಿ ಅಯ್ಕೆಯಾದರೆ, ಅವರೊಂದಿಗೆ ಶಾಸಕರುಗಳಾದ ನಾವುಗಳು ಕೂಡ ಸೇರಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ. ನಾವು ಎಂದಿಗೂ ಕೊಡಗಿನ ಜನರಿಗೆ ಅನ್ಯಾಯ ಮಾಡುವುದಿಲ್ಲ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು. ಲಕ್ಷö್ಮಣ್ ಗೌಡ ದೂರದೃಷ್ಟಿಯುಳ್ಳ ಅಭ್ಯರ್ಥಿಯಾಗಿದ್ದು, ಸಂಸತ್‌ನಲ್ಲಿ ಕೊಡಗಿನ ಬಗ್ಗೆ ಧ್ವನಿ ಎತ್ತುತ್ತಾರೆ ಎಂದು ಶಾಸಕರು ನುಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಮಾತ್ರ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.