ಕಣಿವೆ, ಏ. ೧೭: ಉತ್ತರ ಕೊಡಗಿನ ಪ್ರಮುಖ ಪುಣ್ಯ ಕ್ಷೇತ್ರವಾಗಿರುವ ಕಣಿವೆಯ ಶ್ರೀರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮ ರಥೋತ್ಸವ ಬುಧವಾರ ಶ್ರದ್ದಾ ಭಕ್ತಿಯಿಂದ ನೆರವೇರಿತು.

ರಾಮಲಿಂಗೇಶ್ವರ, ಅಗಸ್ತೇಶ್ವರ, ಗುಹೇಶ್ವರ, ಲಕ್ಷ್ಮಣೇಶ್ವರ ಹಾಗೂ ಬಸವೇಶ್ವರ ಎಂಬ ಪಂಚ ಲಿಂಗಗಳ ಸನ್ನಿಧಿಯಲ್ಲಿ ಪೂರ್ವಾಭಿಮುಖವಾಗಿ ಹರಿದಿರುವ ಇಲ್ಲಿನ ಕಾವೇರಿ ನದಿಯ ದಂಡೆಯಲ್ಲಿ ನೆರೆದಿದ್ದ ಅಪಾರ ಭಕ್ತ ಸಮೂಹ ರಥೋತ್ಸವಕ್ಕೆ ಸಾಕ್ಷಿಯಾಯಿತು.

ಶ್ರೀ ರಾಮನು ಮರಳಿನಿಂದ ಪ್ರತಿಷ್ಠಾಪಿಸಿದನೆಂಬ ಪ್ರತೀತಿ ಇರುವ ಸನ್ನಿಧಿಯಲ್ಲಿ ಬೆಂಗಳೂರಿನ ವೇದಬ್ರಹ್ಮ ನರಹರಿಶರ್ಮಾ ನೇತೃತ್ವದ ಪುರೋಹಿತರ ತಂಡ ಧಾರ್ಮಿಕ ವಿಧಿಗಳನ್ನು ಪೂರೈಸಿತು.

ರಥೋತ್ಸವದ ಅಂಗವಾಗಿ ದೇವಾಲಯದ ಒಳ ಹಾಗೂ ಹೊರ ಆವರಣವನ್ನು ತಳಿರು ತೋರಣಗಳು ಮತ್ತು ಬಗೆ ಬಗೆಯ ಪುಷ್ಪಗಳಿಂದ ಸಿಂಗರಿಸಲಾಗಿತ್ತು.

ಮಧ್ಯಾಹ್ನ ೧-೪೦ ರ ಕ್ರೋಧಿ ನಾಮಸಂವತ್ಸರದ ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಇದಕ್ಕೂ ಮುನ್ನಾ ಪದ್ದತಿಯಂತೆ ನೆರೆಯ ಹೆಬ್ಬಾಲೆ ಗ್ರಾಮಸ್ಥರು ಅಂಚೆಯ ಮೂಲಕ ಕಾಶಿಯಿಂದ ತರಿಸಿದ್ದ ಪವಿತ್ರ ಗಂಗಾ ಜಲವನ್ನು ಅಲಂಕೃತ ಮಂಟಪದಲ್ಲಿಟ್ಟು ಮಂಗಳವಾದ್ಯಗಳೊAದಿಗೆ ಮೆರವಣಿಗೆಯಲ್ಲಿ ಕಣಿವೆಯ ಶ್ರೀಕ್ಷೇತ್ರಕ್ಕೆ ತಂದು ದೇವರಿಗೆ ಪ್ರೋಕ್ಷಣೆ ಗೈದ ಬಳಿಕ ರಾಮಲಿಂಗೇಶ್ವರ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಇರಿಸಿ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು.

ರಥೋತ್ಸವ ಆರಂಭವಾಗುತ್ತಿ ದ್ದಂತೆಯೇ ಇಷ್ಟಾರ್ಥ ಸಿದ್ಧಿಗೆ ನೆರೆದಿದ್ದ ಅನೇಕ ಭಕ್ತರು

ಮಡಿಕೇರಿ: ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದ ವತಿಯಿಂದ ಶ್ರೀ ರಾಮಮಂದಿರ ಟ್ರಸ್ಟ್, ಶ್ರೀರಾಮ ಸೇವಾ ಸಮಿತಿ, ಜ್ಯೋತಿ ಯುವಕ ಸಂಘ, ಕೋದಂಡರಾಮ ಭಜನಾ ಮಂಡಳಿ ಸಹಯೋಗದೊಂದಿಗೆ ದೇವಾಲಯದ ಪುನರ್ ಪ್ರತಿಷ್ಠಾಪನ ವಾರ್ಷಿಕೋತ್ಸವ ಹಾಗೂ ರಾಮನವಮಿ ಅಂಗವಾಗಿ ನಗರದಲ್ಲಿ ಮೆರವಣಿಗೆ, ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಇಂದು ಬೆಳಿಗ್ಗೆ ದೇವಾಲಯದಿಂದ ಹೊರಟ ಮೆರವಣಿಗೆಯು ಮಹದೇವಪೇಟೆಗಾಗಿ, ಚೌಕಿ, ಹಳೆ ಖಾಸಗಿ ಬಸ್ ನಿಲ್ದಾಣ, ಗಣಪತಿ ಬೀದಿಗಾಗಿ ಸಾಗಿ ದೇವಾಲಯದಲ್ಲಿ ಸಮಾಪ್ತಿಗೊಂಡಿತು. ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಹೊತ್ತು ಸಾಗಿದ ಮೆರವಣಿಗೆಯಲ್ಲಿ ಚಂಡೆ ವಾದ್ಯ ಗಮನ ಸೆಳೆಯಿತು.ಮಹಿಳೆಯರ ಕಲಶ ಹೊತ್ತ ತಂಡ, ಭಜನಾ ತಂಡ ಹಾಗೂ ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆ ಸಂದರ್ಭ ಜಿಲ್ಲಾ ಪೊಲೀಸ್ ಇಲಾಖೆ ಬಂದೋಬಸ್ತ್ ಕಲ್ಪಿಸಿತ್ತು.

ಬಂಟಿAಗ್ಸ್ ಅಳವಡಿಕೆ, ಅಲಂಕೃತ ದೀಪಗಳಿಂದ ದೇವಾಲಯವನ್ನು ಸಿಂಗರಿಸಲಾಗಿತ್ತು.

ಕೃಷ್ಣ ಉಪಾಧ್ಯ, ಶ್ರೀನಿವಾಸ ಉಪಾಧ್ಯ, ಷಣ್ಮುಕ, ಶ್ರೀನಿವಾಸ ಭಟ್ ಪೂಜಾ

(ಮೊದಲ ಪುಟದಿಂದ) ಕೈಂಕರ್ಯಗಳನ್ನು ನೆರವೇರಿಸಿದರು. ತತ್ವ ಕಲಶ ಹೋಮ, ನವಗ್ರಹ ಹೋಮ, ತತ್ವ ಕಲಶಾಭಿಷೇಕ, ಮಹಾಮಂಗಳಾರತಿ ಬಳಿಕ ಕೋಸಂಬರಿ ಪಾನಕ ವಿತರಣೆ ನಡೆದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು.

ಉತ್ಸವದ ಅಂಗವಾಗಿ ಸಾರ್ವಜನಿಕರಿಗೆ ಆಯೋಜಿಸಲಾಗಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳು ಹಾಗೂ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

(ಮೊದಲ ಪುಟದಿಂದ) ಬಾಳೆ ಹಣ್ಣು ಹಾಗೂ ಜವುನಗಳನ್ನು ರಥದ ಮೇಲೆ ಎಸೆದು ಭಕ್ತಿ ಮೆರೆದುದು ಕಂಡು ಬಂತು.

ನೆತ್ತಿ ಹಾಗೂ ಪಾದಗಳನ್ನು ಸುಡುವ ಸೂರ್ಯನ ಪ್ರತಾಪವನ್ನು ಲೆಕ್ಕಿಸದೆ ಭಕ್ತಿ ಮೆರೆದ ಭಕ್ತ ಸಮೂಹ ದೇವಾಲಯದಿಂದ ಗ್ರಾಮದ ಅರಳಿಕಟ್ಟೆಯವರೆಗೂ ಬರಿಗಾಲಲ್ಲಿ ರಥವನ್ನು ಎಳೆದು ಭಕ್ತಿ ಭಾವ ಮೆರೆದರು.

ನಂತರ ಸಂಜೆ ರಥವನ್ನು ಸ್ವಸ್ಥಾನಕ್ಕೆ ಎಳೆದು ತರಲಾಯಿತು.

ರಥಕ್ಕೆ ವೃಕ್ಷ ಮಾತೆಯ ತಂಪು

ಭಕ್ತರ ಓಂಕಾರಗಳ ಝೇಂಕಾರಗಳೊAದಿಗೆ ಸುಡುವ ಬಿಸಿಲಲ್ಲಿ ದೇವಾಲಯದಿಂದ ಭಕ್ತರು ಎಳೆದು ತಂದ ರಥಕ್ಕೆ ಹಸಿರು ಹೊದಿಕೆ ಹೊದ್ದು ಕಾದಿದ್ದ ಗ್ರಾಮದ ಪ್ರಮುಖ ಆಕರ್ಷಣೆಯಾಗಿರುವ ಅರಳಿಮರ ರಥವನ್ನು ಸ್ವಾಗತಿಸಿ ತಂಪು ನೀಡಿತು.

ರಥೋತ್ಸವಕ್ಕೆ ಧಾವಿಸಿದ್ದ ಭಕ್ತರೂ ಕೂಡ ಬಿಸಿಲ ಝಳ ತಾಳಲಾರದೇ ತಂಪು ನೀಡುವ ಅರಳಿ ಮರದ ಕೆಳಗೆ ಕುಳಿತು ಹಾಗೂ ಮಲಗಿ ದಣಿವಾರಿಸಿಕೊಂಡಿದ್ದು ಕಂಡು ಬಂತು.

ರಥ ಸಾಗುವ ಮಾರ್ಗದುದ್ದಕ್ಕೂ ಭಕ್ತಾದಿಗಳಿಗೆ ಹಲವು ನಿವಾಸಿಗಳು ತಮ್ಮ ಮನೆಗಳ ಮುಂದೆ ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ನೀಡುವ ಮೂಲಕ ಭಕ್ತಿ ಭಾವ ಮೆರೆಯುತ್ತಿದ್ದುದು ಕಂಡು ಬಂತು.

ಆಕರ್ಷಿಸಿದ ಕಲಾ ತಂಡಗಳು

ಹೆಬ್ಬಾಲೆ ಗ್ರಾಮಸ್ಥರು ಮೆರವಣಿಗೆಯಲ್ಲಿ ಕಾಶಿಯ ತೀರ್ಥವನ್ನು ತಂದ ಸಂದರ್ಭ ಕಣಿವೆ ಗ್ರಾಮದ ಪ್ರವೇಶ ದ್ವಾರ ರಾಂಪುರದಲ್ಲಿ ತೋರಣಗಳೊಂದಿಗೆ ಭಕ್ತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.

ಇದೇ ಸಂದರ್ಭ ಚಂಡೆ ವಾದ್ಯ, ವೀರಗಾಸೆ ನೃತ್ಯ ಹಾಗೂ ಮಂಗಳ ವಾದ್ಯ ರಥೋತ್ಸವದಲ್ಲಿ ವಿಶೇಷ ಮೆರುಗು ನೀಡಿದವು.

ಭಕ್ತರನ್ನು ಆಕರ್ಷಿಸಿದ ತೂಗುಸೇತುವೆ

ಕಣಿವೆ ರಥೋತ್ಸವಕ್ಕೆ ಇಲ್ಲಿನ ಕಾವೇರಿ ನದಿಯ ಮೇಲೆ ನಿರ್ಮಿಸಿರುವ ತೂಗುಸೇತುವೆ ಭಕ್ತರನ್ನು ಆಕರ್ಷಿಸಿತು.

ನೀರೇ ಇಲ್ಲದ ಖಾಲಿ ನದಿಯನ್ನು ತೂಗು ಸೇತುವೆ ಮೇಲಿಂದ ನೋಡಿದ ಭಕ್ತರು ಸೆಲ್ಫಿ ತೆಗೆದುಕೊಂಡರು.

ಮೂರು ಜಿಲ್ಲೆಗಳ ಸಂಗಮ

ಕಣಿವೆಯ ರಥೋತ್ಸವಕ್ಕೆ ಕೊಡಗು ಜಿಲ್ಲೆಯ ಭಕ್ತರೂ ಸೇರಿದಂತೆ ನೆರೆಯ ಮೈಸೂರು ಜಿಲ್ಲೆಯ ಗಡಿ ಗ್ರಾಮಗಳ ಭಕ್ತರು ಹಾಗೂ ಹಾಸನ ಜಿಲ್ಲೆಯ ಗಡಿ ಗ್ರಾಮಗಳ ಭಕ್ತರು ಆಗಮಿಸುವುದು ಪ್ರತೀತಿ.

ಪೊಲೀಸರ ಕಾವಲು

ರಥೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತರನ್ನು ನೂಕುನುಗ್ಗಲಿನಲ್ಲಿ ಜೇಬಿಗೆ ಕನ್ನ ಹಾಕಲು ಯೋಜಿಸಿ ಬಂದಿದ್ದAತಹ ಕಳ್ಳರಿಗೆ ಪೊಲೀಸರ ಕಾವಲು ಎಚ್ಚರಿಕೆ ನೀಡಿದಂತಿತ್ತು.

ಮಹಿಳಾ ಭಕ್ತರಿಗೆ ಚಿನ್ನಾಭರಣಗಳ ಮೇಲೆ ನಿಗಾವಹಿಸುವಂತೆ ಮೈಕ್ ನಲ್ಲಿ ಎಚ್ಚರಿಸುತ್ತಿದ್ದುದು ಕೇಳಿ ಬಂತು.

ಭಕ್ತರಿಗೆ ಅನ್ನದಾನ

ರಥೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತ ಸಮೂಹಕ್ಕೆ ದೇವಾಲಯ ಸಮಿತಿಯಿಂದ ಲಾಡು ಹಾಗೂ ಅನ್ನದಾನ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

ರಥೋತ್ಸವದ ಅಂಗವಾಗಿ ಕಣಿವೆಯ ಮುಖ್ಯ ರಸ್ತೆಯಲ್ಲಿ ಮೂರು ದಿನಗಳ ಕಾಲ ವಿವಿಧ ಮಳಿಗೆಗಳನ್ನೊಳಗೊಂಡ ಜಾತ್ರೆ ಆಯೋಜನೆಗೊಂಡಿದೆ.

ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್, ಕಾರ್ಯಾಧ್ಯಕ್ಷ ಕೆ.ಎಸ್. ಮಾಧವ, ಕಾರ್ಯದರ್ಶಿ ಟಿ.ಎನ್. ಶೇಷಾಚಲ, ಉಪಾಧ್ಯಕ್ಷ ಮಂಜುನಾಥ ಸ್ವಾಮಿ, ನಿರ್ದೇಶಕರಾದ ಆರ್.ಆರ್. ಮಧು, ಕೆ.ಎಲ್. ಮಹೇಶಕುಮಾರ್, ಇ.ಎಸ್. ಗಣೇಶ್, ಕೆ.ಎಂ. ರಾಕೇಶ್, ಟಿ.ಎಂ. ಕಾರ್ತಿಕ್, ಕೆ.ಸಿ. ನಂಜುAಡಸ್ವಾಮಿ, ಅರ್ಚಕ ರಾಘವೇಂದ್ರ ಆಚಾರ್, ಉದಯಪ್ರಕಾಶ್ ಒಳಗೊಂಡAತೆ ದೇವಾಲಯ ಸಮಿತಿ ಪದಾಧಿಕಾರಿಗಳಿದ್ದರು.

-ಕೆ.ಎಸ್. ಮೂರ್ತಿ

ಪಟ್ಟಣದ ಶ್ರೀರಾಮ ಮಂದಿರದಲ್ಲಿ ಸೇವಾ ಸಮಿತಿ ವತಿಯಿಂದ ಶ್ರೀ ರಾಮ ನವಮಿ ಉತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.

ಮಂದಿರದಲ್ಲಿ ಬೆಳಿಗ್ಗೆ ಶ್ರೀಗಣಪತಿ ಪೂಜೆ, ಪುಣ್ಯಾಹ, ಋತ್ವಿಕ್ ವರ್ಣ, ಕಲಶಾರಾಧನೆ, ಶ್ರೀಗಣಪತಿ ಹೋಮ, ನವಗ್ರಹ ಹೋಮ, ಶತಶ್ಲೋಕಾರಾಮಾಯಣದ ಹೋಮ, ರಾಮತಾರಾಕ ಹೋಮ, ಮಹಾಮಂಗಳಾರತಿಯಾಗಿ, ತೀರ್ಥಪ್ರಸಾದ ವಿನಿಯೋಗವಾಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ನೂರಾರು ಭಕ್ತರು ಪಾಲ್ಗೊಂಡಿದ್ದರು.

ಸAಜೆ ಉತ್ಸವ ಮೂರ್ತಿಯನ್ನು ಅಲಂಕರಿಸಿ ಅಡ್ಡಪಲ್ಲಕ್ಕಿಯಲ್ಲಿ ವಾದ್ಯಗೋಷ್ಠಿಯೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಪ್ರತಿ ಮನೆಗಳ ಮುಂದೆ ಭಕ್ತರು ಉತ್ಸವ ಮೂರ್ತಿಗಳಿಗೆ ಆರತಿ ಬೆಳಗಿ, ಹಣ್ಣುಕಾಯಿ ಸಮರ್ಪಿಸಿದರು.

ರಾತ್ರಿ ಉತ್ಸವಮೂರ್ತಿಗಳಿಗೆ ಹಾಗೂ ಮೂಲ ವಿಗ್ರಹಗಳಿಗೆ ಪೂಜೆ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ನೆರವೇರಿತು. ನಂತರ ಅನ್ನ ಸಂತರ್ಪಣೆ ನಡೆಯಿತು.

ಪುರೋಹಿತ ಪ್ರಸನ್ನ ಭಟ್ ನೇತೃತ್ವದಲ್ಲಿ ಅರ್ಚಕರಾದ ಶಿವಶಂಕರ್, ಪ್ರಭಾಕರ್, ರವಿಕುಮಾರ್, ಸುದರ್ಶನ ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ರಾಮ ಸೇವಾ ಸಮಿತಿ ಆಡಳಿತ ಮಂಡಳಿಯ ಅಧ್ಯಕ್ಷ ಅರವಿಂದ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ಇಲ್ಲಿನ ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಪಟ್ಟಣದಲ್ಲಿ ಅದ್ದೂರಿ ಶ್ರೀ ರಾಮನವಮಿ ಉತ್ಸವ ಹಾಗೂ ಭವ್ಯ ಶೋಭಾಯಾತ್ರೆ ನಡೆಯಿತು.

ವೇದಿಕೆಯ ರಾಮನವಮಿ ಉತ್ಸವ ಸಮಿತಿಯ ಮೂಲಕ ಪಟ್ಟಣದಲ್ಲಿ ಆಯೋಜನೆಗೊಂಡಿದ್ದ ಶೋಭಾಯಾತ್ರೆಯಲ್ಲಿ ೧೦ ಸ್ತಬ್ಧಚಿತ್ರಗಳು, ಸಾವಿರಾರು ಮಂದಿ ಸಾರ್ವಜನಿಕರು, ಶ್ರೀರಾಮ ಭಕ್ತರು ಭಾಗವಹಿಸಿದ್ದರು.

ಇಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ರಾಮನವಮಿ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಸಂಜೆ ದೇವಾಲಯ ಸಮಿತಿಯ ವತಿಯಿಂದ ಶ್ರೀರಾಮನ ಉತ್ಸವ ಮೂರ್ತಿಯ ಮೆರವಣಿಗೆ ಜರುಗಿತು.

ದೇವಾಲಯ ಸಮಿತಿಯೊಂದಿಗೆ ಹಿಂದೂ ಜಾಗರಣಾ ವೇದಿಕೆ ವತಿಯಿಂದಲೂ ವಿಶೇಷ ಪೂಜೆಗಳು ನಡೆದವು. ಮಧ್ಯಾಹ್ನ ಹಾಗೂ ಸಂಜೆ ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನದಾನ ನಡೆಯಿತು.

ಸಂಜೆ ವೇಳೆಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗಗಳಿಂದ ೧೦ ಸ್ತಬ್ಧಚಿತ್ರಗಳು ಕಕ್ಕೆಹೊಳೆ ಜಂಕ್ಷನ್‌ಗೆ ಆಗಮಿಸಿದವು. ಅಲ್ಲಿಂದ ಆರಂಭಗೊAಡ ಶೋಭಾಯಾತ್ರೆ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.

ಶೋಭಾಯಾತ್ರೆಯಲ್ಲಿ ಕಲ್ಲಡ್ಕದ ಗೊಂಬೆ ಕುಣಿತ, ಕೇರಳದ ಚೆಂಡೆ ವಾದ್ಯ, ನಾಸಿಕ್ ಬ್ಯಾಂಡ್, ಮೈಸೂರಿನ ಹುಲಿವೇಷ ನೃತ್ಯ ತಂಡ ಸೇರಿದಂತೆ ಇನ್ನಿತರ ತಂಡಗಳು ಆಕರ್ಷಣೆಯಾಗಿದ್ದವು. ರಾಮನ ಕುರಿತಾದ ಗೀತೆಗಳಿಗೆ ಸಾರ್ವಜನಿಕರು, ಯುವ ಸಮುದಾಯದವರು ಕುಣಿದು ಕುಪ್ಪಳಿಸಿದರು. ಮಕ್ಕಳು, ವಯಸ್ಕರು, ವಯೋವೃದ್ಧರಾದಿಯಾಗಿ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ರಾಮನ ವಿಗ್ರಹದ ಮೆರವಣಿಗೆ, ಕಲಾತಂಡಗಳ ಪ್ರದರ್ಶನ, ಪಟಾಕಿ ಸಿಡಿಮದ್ದಿನ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ರಾಮನವಮಿ ಅಂಗವಾಗಿ ಪಟ್ಟಣವನ್ನು ಕೇಸರಿ ಬಂಟಿAಗ್ಸ್ಗಳಿAದ ಅಲಂಕರಿಸಲಾಗಿತ್ತು. ಪಟ್ಟಣದ ಕಕ್ಕೆಹೊಳೆ ಜಂಕ್ಷನ್, ಖಾಸಗಿ ಬಸ್ ನಿಲ್ದಾಣ, ವಿವೇಕಾನಂದ ವೃತ್ತ ಸೇರಿದಂತೆ ಪ್ರಮುಖ ಜಂಕ್ಷನ್‌ಗಳನ್ನು ಕೇಸರಿಮಯವಾಗಿದ್ದವು. ಇದರೊಂದಿಗೆ ಮೆರವಣಿಗೆ ತೆರಳಿದ ರಸ್ತೆಯ ಇಕ್ಕೆಲಗಳಲ್ಲಿ ಬಾಳೆ, ಮಾವಿನ ತೋರಣಗಳಿಂದ ಸ್ವಾಗತ ಕೋರಲಾಗಿತ್ತು. ಸ್ತಬ್ಧಚಿತ್ರಗಳು ಮನೆ-ಅಂಗಡಿಗಳ ಮುಂಭಾಗ ಆಗಮಿಸಿದ ಸಂದರ್ಭ ಸಾರ್ವಜನಿಕರು ಪೂಜೆ ಸಲ್ಲಿಸಿದರು.

ಶೋಭಾಯಾತ್ರೆಯಲ್ಲಿ ಪಟ್ಟಣದ ಸುತ್ತಮುತ್ತಲ ಗ್ರಾಮಗಳಿಂದ ಒಟ್ಟು ೧೦ ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ರಾಮ ಮಂದಿರ ಲೋಕಾರ್ಪಣೆಯಾದ ನಂತರ ಪ್ರಥಮ ಬಾರಿಗೆ ಆಯೋಜನೆಗೊಂಡಿದ್ದ ರಾಮನವಮಿ ಶೋಭಾಯಾತ್ರೆಯಲ್ಲಿ ರಾಮನ ಭಕ್ತರು ಸಂಭ್ರಮಿಸಿದರು.

ಶಾAತಳ್ಳಿ, ಹಾನಗಲ್ಲು ಶೆಟ್ಟಳ್ಳಿ, ಕಾನ್ವೆಂಟ್ ಬಾಣೆ, ಹಾನಗಲ್ಲು, ಸೋಮವಾರಪೇಟೆ ಪಟ್ಟಣ, ಚೌಡ್ಲು ಗ್ರಾಮದ ಚೌಡ್ಲಯ್ಯ ಮೂಡ್ಲಯ್ಯ ದೇವಾಲಯ ಸಮೀಪದಿಂದ, ಗೌಡ ಸಮಾಜ ರಸ್ತೆ, ಬಜೆಗುಂಡಿ, ಹೊಸಬೀಡು-ಕಲ್ಕಂದೂರು, ಆಂಜನೇಯ ಸ್ವಾಮಿ ದೇವಾಲಯದಿಂದ ಹೊರಟ ಸ್ತಬ್ಧಚಿತ್ರಗಳು, ಪಟ್ಟಣದಲ್ಲಿ ಸಂಚರಿಸಿ ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಿದ್ದವು.

ಉತ್ಸವ ಸಮಿತಿ ಅಧ್ಯಕ್ಷ ಸುಭಾಷ್ ತಿಮ್ಮಯ್ಯ, ಉಪಾಧ್ಯಕ್ಷ ಎಂ.ಬಿ. ಉಮೇಶ್, ದರ್ಶನ್ ಜೋಯಪ್ಪ, ಮಹೇಶ್ ತಿಮ್ಮಯ್ಯ, ಸಿ.ಸಿ. ನಂದಕುಮಾರ್, ಬೋಜೇಗೌಡ, ಕಾಗಡಿಕಟ್ಟೆ ದೀಪು, ದೇವಾಲಯ ಸಮಿತಿಯ ಪದಾಧಿಕಾರಿಗಳಾದ ಬನ್ನಳ್ಳಿ ಗೋಪಾಲ್, ಸೀತಾರಾಂ, ಎಂ.ಆರ್. ನಂದಕುಮಾರ್, ಎಂ.ಸಿ. ರಾಘವ, ಲೋಕೇಶ್, ಬಿ.ಎನ್. ಗಣೇಶ್ ಸೇರಿದಂತೆ ಇತರರು ಉತ್ಸವದ ಉಸ್ತುವಾರಿ ವಹಿಸಿದ್ದರು.

ಪೊಲೀಸ್ ಬಂದೋಬಸ್ತ್: ರಾಮನವಮಿ ಉತ್ಸವ ಸಂದರ್ಭ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒಳಗೊಂಡAತೆ ೨೦೦ ಮಂದಿ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು. ಅಡಿಷನಲ್ ಎಸ್.ಪಿ. ಸುಂದರ್‌ರಾಜ್, ಡಿವೈಎಸ್‌ಪಿ ಗಂಗಾಧರಪ್ಪ, ಪೊಲೀಸ್ ಇನ್ಸ್ಪೆಕ್ಟರ್ ವಸಂತ್ ಅವರುಗಳ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. ಆಯಕಟ್ಟಿನ ಸ್ಥಳದಲ್ಲಿ ಪೊಲೀಸರನ್ನು ಜಮಾವಣೆಗೊಳಿಸಲಾಗಿತ್ತು. ಸೋಮವಾರಪೇಟೆಯ ಪೊಲೀಸರೊಂದಿಗೆ ಕುಶಾಲನಗರದ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್, ರಾಜೇಶ್, ಮಡಿಕೇರಿಯ ಅರುಣ್, ೧೨ ಮಂದಿ ಸಬ್‌ಇನ್ಸ್ಪೆಕ್ಟರ್, ೧೫ ಮಂದಿ ಎಎಸ್‌ಐಗಳು, ೧ ಡಿ.ಎ.ಆರ್. ತುಕಡಿ, ೨ ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಒಟ್ಟು ೨೦೦ ಮಂದಿ ಬಂದೋಬಸ್ತ್ ಕರ್ತವ್ಯದಲ್ಲಿದ್ದರು.ರಾಮೋತ್ಸವ ಅಂಗವಾಗಿ ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಮತ್ತು ಶ್ರೀ ರಾಮ ಸೇವಾ ಸಮಿತಿ ಆಶ್ರಯದಲ್ಲಿ ಕುಶಾಲನಗರ ರಥ ಬೀದಿಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡದಲ್ಲಿ ೧೦ ದಿನಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಶ್ರೀ ರಾಮನ ವಿಗ್ರಹವನ್ನು ಆಂಜನೇಯ ದೇವಾಲಯದಿಂದ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಸಂಘದ ಆವರಣಕ್ಕೆ ತರಲಾಯಿತು.

ಪುರೋಹಿತರಾದ ಕೆ.ಕೆ. ಸುಬ್ಬರಾಮ್ ಮತ್ತು ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್. ರಾಜಶೇಖರ್, ಮತ್ತಿತರರು ಇದ್ದರು.

ರಾಮೋತ್ಸವ ಅಂಗವಾಗಿ ಕುಶಾಲನಗರ ರಥ ಬೀದಿಯ ಶ್ರೀ ಆಂಜನೇಯ ದೇವಾಲಯದಲ್ಲಿ ಬೆಳಿಗ್ಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸಂಜೆ ವಿಪ್ರ ಮಹಿಳೆಯರಿಂದ ವಿವಿಧ ವಿನೋದಾವಳಿ ಕಾರ್ಯಕ್ರಮಗಳು ಜರುಗಿದವು.

ದೇವಾಲಯ ಸಮಿತಿ ಆಡಳಿತ ಮಂಡಳಿಯಿAದ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ ವಿತರಣೆ ನಡೆಯಿತು.

ರಾಮ ನವಮಿ ವಿಶೇಷ ಪ್ರಾರ್ಥನೆ

ಕರಿಕೆ: ಶ್ರೀ ರಾಮ ನವಮಿ ಪ್ರಯುಕ್ತ ಇಲ್ಲಿನ ಶ್ರೀ ವನಶಾಸ್ತಾವು ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅಯೋಧ್ಯಾ ರಾಮ ಮಂದಿರ ನಿರ್ಮಾಣದ ಘಟನಾವಳಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಸಂಘ ಪರಿವಾರದ ಪ್ರಮುಖರಾದ ಸುಧೀರ್ ಹೊದ್ದೆಟ್ಟಿ, ಗಣೇಶ್ ಬಿ.ಎ., ಗಣೇಶ್ ಕುದುಪಜೆ,ಮುತ್ತಣ್ಣ ಕಟ್ಟಕೋಡಿ, ಜಯಾನಂದ ಕೆ.ವಿ. ಸೇರಿದಂತೆ ಇತರ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.