ಸೋಮವಾರಪೇಟೆ : ಸಮೀಪದ ಕೋವರ್ ಕೊಲ್ಲಿ ಟಾಟಾ ಕಾಫಿ ಸಂಸ್ಥೆಯ ಶ್ರೀ ವನದುರ್ಗಾ ದೇವಿ ದೇವಾಲಯದ ೫೦ನೇ ವಾರ್ಷಿಕೋತ್ಸವ ಮತ್ತು ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.

ವಾರ್ಷಿಕೋತ್ಸವ ಅಂಗವಾಗಿ ದೇವಾಲಯ ದಲ್ಲಿ ಶ್ರೀ ಗಣಪತಿ ಹೋಮ, ವನದುರ್ಗಾದೇವಿಗೆ ಪಂಚಾಮೃತ ಅಭಿಷೇಕ, ಚಂಡಿಕಾ ಹೋಮ ಮತ್ತು ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಸಂಜೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.

ಪೂಜಾ ಕಾರ್ಯವನ್ನು ದೇವಾಲಯದ ಅರ್ಚಕ ಬಾಲುಭಟ್, ರಾಘವೇಂದ್ರ ಭಟ್ ಮತ್ತಿತರರು ನೆರವೇರಿಸಿದರು.ಚೆಟ್ಟಳ್ಳಿ: ಚೆಟ್ಟಳ್ಳಿಯ ಶ್ರೀಮಂಗಲ (ಪೊವ್ವೊದಿ) ಭಗವತಿ ದೇವಿಯ ವಾರ್ಷಿಕ ಉತ್ಸವವು ಏಪ್ರಿಲ್ ೧೪ ರಂದು ಪಟ್ಟಣಿ ಹಬ್ಬ, ಏ.೧೫ರಂದು ದೊಡ್ಡಹಬ್ಬ ಹಾಗೂ ೧೬ರಂದು ತಕ್ಕರ ಮನೆಗೆ ಭಂಡಾರ ಒಪ್ಪಿಸುವ ಮೂಲಕ ಶ್ರದ್ಧಾಭಕ್ತಿಯಿಂದ ನೆರವೇರಿತು.

ತಾ.೧೧ರಂದು ರಾತ್ರಿ ತಕ್ಕಮುಖ್ಯಸ್ಥರು ಹಾಗೂ ಊರಿನವರೆಲ್ಲ ದೇವಾಲಯದಲ್ಲಿ ಸೇರಿ ಶುದ್ಧಕಳಶ, ಪೂಜೆ ಸಲ್ಲಿಸಿದ ನಂತರ ದೇವರ ದೀಪವನ್ನು ದೀಪಸ್ಥಂಬದಲ್ಲಿ ಇಡಲಾಯಿತು. ದುಡಿಕೊಟ್ಟ್ ಹಾಡಿಗೆ ದೇವಾಲಯದ ಸುತ್ತಲೂ ಚೌರಿಆಟ್ ನೆರವೇರಿಸಲಾಯಿತು. ತಾ.೧೪ರ ಪಟ್ಟಣಿ ಹಬ್ಬದಂದು ಬೆಳಿಗ್ಗೆ ಪುತ್ತರಿರ ಕುಟುಂಬದ ಜಾಗದಲ್ಲಿರುವ ಭಗವತಿದೇವರ ಮೂಲ ನೆಲೆಗೆ ಅರ್ಚಕರು ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ೨ಗಂಟೆಗೆ ಮುಳ್ಳಂಡ ಐನ್‌ಮನೆಯಿಂದ ದೇವತಕ್ಕರಾದ ದೇವಭಂಡಾರವನ್ನು ತರುವಾಗ ಎತ್ತ್ ಪೋರಾಟ ವಾದ್ಯ ಹಾಗೂ ದುಡಿಕೊಟ್ಟ್ ಹಾಡಿನೊಂದಿಗೆ ದೇವಾಲಯಕ್ಕೆ ಕರೆತರಲಾಯಿತು. ದೇವರ ಭಂಡಾರವು ದೇವಾಲಯದ ಮುಂಬಾಗಿಲಿಗೆ ತಲುಪುತ್ತಿದ್ದಂತೆ ವಿಶೇಷವಾಗಿ ಅಲಂಕರಿಸಿದ ಪೊವ್ವೊದಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಅರ್ಚಕರು ದೇವರ ಭಂಡಾರ ಹಾಗೂ ಊರಿನವರಿಗೆಲ್ಲ ಪುಣ್ಯತ್‌ನೀರನ್ನು ಹಾಕಿ ದೇವರ ಆರತಿಯನ್ನು ಬೆಳಗಿ ದೇವರ ಭಂಡಾರವನ್ನು ಹಾಗೂ ಎತ್ತ್ ಪೋರಾಟವನ್ನು ದೇವಾಲಯದ ಮೂರು ಸುತ್ತು ತಂದು ದೇವರಗುಡಿಯ ಮುಂದೆ ಅರ್ಪಿಸಿದರು. ದೇವರ ಹೂಮಾಲೆಯನ್ನು ಪಡೆದು ಬಿಳಿಯ ಹಾಗೂ ಕಪ್ಪು ಸಾಂಪ್ರದಾಯಿಕ ಕುಪ್ಪಸ ಧರಿಸಿದ ಊರಿನವರು ಚೌರಿ (ಕೃಷ್ಣಮುಗದ ಕೂದಲಿನಲ್ಲಿ ವಿಶೇಷವಾಗಿ ತಯಾರಿಸಿದ ಚಾಮರ) ಯನ್ನು ಹಿಡಿದು ಕುಪ್ಪಸದಟ್ಟಿಯನ್ನು ಧರಿಸಿ ದುಡಿಕೊಟ್ಟಿಗೆ ದೇವಾಲಯದ ಹಾಗೂ ದೇವರ ಬೊಳಕ್ ಮರದ ಸುತ್ತಲು ಚೌರಿ ಆಟ್ ನೆರವೇರಿಸಲಾಯಿತು. ತಾ.೧೫ರ ದೊಡ್ಡಹಬ್ಬದಂದು ಮಧ್ಯಾಹ್ನ ದೇವರಭಂಡಾರ ತಂದು ಸಂಪ್ರದಾಯದAತೆ ಚೌರಿಆಟ್, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ತೆಂಗೆಪೋರ್ ಎಂಬ ಸಂಪ್ರದಾಯದAತೆ ಸಣ್ಣಮಕ್ಕಳಿಂದ ಹಿಡಿದು ದೊಡ್ಡವರಿಗೆ ತೆಂಗಿನಕಾಯಿ ಕೀಳುವ ಸ್ಪರ್ಧೆ ನಡೆಯಿತು. ನಂತರ ಊರಿನವರು, ಭಕ್ತರು ಹಾಗೂ ಹರಕೆ ಹೊತ್ತವರು ದೇವರಿಗೆ ಭಂಡಾರವನ್ನು ಅರ್ಪಿಸಿ ದೇವರ ದೀಪವನ್ನು ಬೊಳಕ್ ಮರದಿಂದ ತೆಗೆದು ದೇವಾಲಯದ ೩ ಸುತ್ತು ಬಂದು ದೇವಾಲಯದ ಗರ್ಭಗುಡಿಯೊಳಗೆ ಇಡಲಾಯಿತು. ಪ್ರಸಾದ ವಿತರಣೆ ಹಾಗೂ ಅನ್ನದಾನ ನೆರವೇರಿತು. ತಾ.೧೬ರಂದು ಬೆಳಿಗ್ಗೆ ದೇವರಿಗೆ ಶುದ್ಧ ಕಳಶ ಪೂಜೆಯ ನಂತರ ದುಡಿಕೊಟ್ಟ್ ಹಾಡಿನೊಂದಿಗೆ ದೇವರ ಭಂಡಾರ ವನ್ನು ದೇವತ ಕ್ಕಾಮೆಯನ್ನು ಹೊಂದಿರುವ ಮುಳ್ಳಂಡ ಐನ್‌ಮನೆಗೆ ತಂದುತಕ್ಕರ ಮರ್ಯಾದಿ ಯಂತೆ ತಂದು ಒಪ್ಪಿಸಿದ ನಂತರ ಊರಿನವರಿಗೆ ಉಪಹಾರದ ವ್ಯವಸ್ಥೆ ಮಾಡಿ ಹಬ್ಬದ ಕಟ್ಟನ್ನು ಮುರಿಯುವ ಮೂಲಕ ಉತ್ಸವಕ್ಕೆ ತೆರೆ ಬಿದ್ದಿತು.

-ಪುತ್ತರಿರ ಕರುಣ್ ಕಾಳಯ್ಯ

ವೀರಾಜಪೇಟೆ: ವೀರಾಜಪೇಟೆ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮೇರಿ ಗ್ರಾಮ ಬೆಪ್ಪುನಾಡ್ ಶ್ರೀ ಪನ್ನಂಗಾಲತಮ್ಮೆ ದೇವಿಯ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ತಾ.೧೨ರಿಂದ ಆರಂಭವಾಗಿ ತಾ.೧೩ ರಂದು ಕೊನೆಗೊಂಡಿತ್ತು. ತಾ.೧೨ ರಂದು ಪ್ರಾಥ:ಕಾಲ ಮೂಕೇರಿರ ಕುಟುಂಬದ ಸದಸ್ಯರಿಂದ ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ಶುದ್ಧಗೊಳಿಸಿ ಪೂಜೆ ಸಲ್ಲಿಸಲಾಯಿತು. ಮುಂಜಾನೆ ಬಾಚೀರ ಮನೆಯಿಂದ ಭಂಡಾರ ತರಲಾಯಿತು. ಬೆಳಿಗ್ಗೆ ೧೦ ಗಂಟೆಯಿAದ ವಿಶೇಷ ದೇವರ ದರ್ಶನ ನಡೆಯಿತು. ಬಳಿಕ ವಿಶೇಷ ಪೊಜೆಗಳು ಸಲ್ಲಿಕೆಯಾದವು, ಮರು ದಿನ ದೇವರ ದರ್ಶನ ನಡೆಯಿತು. ಪನ್ನಂಗಾಲತಮ್ಮೆ ಉತ್ಸವದಲ್ಲಿ ಪ್ರಮುಖ ಆಕರ್ಷಣೆಯಾದ ದೇವಿ ನೆಲೆನಿಂತ ಕೊಡೆ ತರುವುದು. ಚೆರಿಯಕಂಡ ಕುಟುಂಬದ ಸ್ಥಳದಿಂದ ವಿವಿಧ ಗದ್ದೆಗಳ ಮಾರ್ಗದಿಂದ ಜನಾಂಗ ಬಾಂಧವರು ಕೊಡೆಯನ್ನು ಹೊತ್ತು ದೇಗುಲ ಪ್ರವೇಶ ಮಾಡಿದರು. ಕೊಡೆ ದೇಗುಲ ಪ್ರವೇಶ ಮಾಡಿದಂತೆ ವಿವಿಧ ದೇವರುಗಳ ದೈವ ನರ್ತಕರು ಕೊಡೆಯನ್ನು ಬರಮಾಡಿಕೊಂಡರು. ದೇಗುಲಕ್ಕೆ ಪ್ರದಕ್ಷಿಣೆ ಸಲ್ಲಿಸಿ ಕೊಡೆಯನ್ನು ಉತ್ಸವ ಮೂರ್ತಿ ಬಳಿ ಇಡಲಾಯಿತು. ಎತ್ತು ಪೋರಾಟ್, ದೇವಿಯನ್ನು ಸ್ತುತಿಸಿ ದುಡಿಕೊಟ್ಟ್ ನುಡಿಸಿ ಭಕ್ತಿಯನ್ನು ಸಮರ್ಪಿಸಿದರು, ದಾನಿಗಳ ನೆರವು ಮತ್ತು ಆಡಳಿತ ಮಂಡಳಿ ವಿಶೇಷ ಅನ್ನಸಂತರ್ಪಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ದೇಗುಲಕ್ಕೆ ಆಗಮಿಸಿ ದೇವಿಯ ಆರ್ಶಿವಾದ ಪಡೆದರು. ಕುಂಞ ತೊಟ್ಟ್ ಹರಿಕೆ, ಬಾರಣಿ ಸಲ್ಲಿಸಲಾಯಿತು. ಸಂಜೆ ನಾಲ್ಕರ ಸಮಯದಲ್ಲಿ ಕುರುಂದ ಕಳಿ ದರ್ಶನ ನಡೆಯಿತು. ಭಕ್ತರು ತಾವು ತಂದ ಹುರಿಯನ್ನು ದೇವರಿಗೆ ಸಲ್ಲಿಸಿದರು. ದರ್ಶನ ನರ್ತಕರ ನಿರ್ದೇಶನದಂತೆ ದೇಗುಲ ಆವರಣದಲ್ಲಿರುವ ಮರದ ಉತ್ತರದಲ್ಲಿ ತೆಂಗಿನಕಾಯಿ ಕಟ್ಟಿ ಕೊವಿಯಿಂದ ಗುಂಡು ಹೊಡೆಯಲಾಯಿತು. ಐದು ಗಂಟೆಗೆ ಶ್ರೀ ಪನ್ನಂಗಾಲತಮ್ಮೆ ದೇವಿಯ ಉತ್ಸವ ಮೂರ್ತಿ ದೇಗುಲ ಪ್ರದಕ್ಷಿಣೆಯೊಂದಿಗೆ ಉತ್ಸವಕ್ಕೆ ತೆರೆಕಂಡಿತು.

ತಕ್ಕ ಮುಖ್ಯಸ್ಥರು, ಊರುತಕ್ಕರು, ಶ್ರೀ ಪನ್ನಂಗಾಲತಮ್ಮೆ ದೇಗುಲದ ಆಡಳಿತ ಮಂಡಳಿಯ ಪದಾಧಿಕಾರಿಗಳು ಸದಸ್ಯರು, ಜನಾಂಗ ಬಾಂಧವರು, ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.ಸುಂಟಿಕೊಪ್ಪ : ಸುಂಟಿಕೊಪ್ಪ ಪನ್ಯ ಗ್ರಾಮದಲ್ಲಿ ನೆಲೆನಿಂತಿರುವ ಗ್ರಾಮ ದೇವತೆಯಾದ ಶ್ರೀ ಮಳೂರು ಬೆಳ್ಳಾರಿಕಮ್ಮ ದೇವರ ವಾರ್ಷಿಕೋತ್ಸವದ ಅಂಗವಾಗಿ ಎತ್ತು ಪೋರಾಟ್, ಚೌರಿಕುಣಿತ, ಶ್ರೀ ದೇವರ ಉತ್ಸವ ಮೂರ್ತಿಯ ನೃತ್ಯ ಬಲಿ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಭಕ್ತಾದಿಗಳ ಸಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಸಂಪ್ನಗೊAಡಿತು.

ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಬೆಳ್ಳಾರಿಕಮ್ಮ ಉತ್ಸವದ ಅಂಗವಾಗಿ ಕಳೆದ ೭ ದಿನಗಳ ಕಾಲ ಸುಂಟಿಕೊಪ್ಪ, ಉಲುಗುಲಿ, ಆಂಜನಗೇರಿ ಬೆಟ್ಟಗೇರಿ, ಹರದೂರು ಗ್ರಾಮದ ಗ್ರಾಮಸ್ಥರು ವಾಡಿಕೆಯಂತೆ ವ್ರತದಲ್ಲಿದ್ದು ವಾರದ ನಂತರ ದೇವಾಲಯದಲ್ಲಿ ವ್ರತಾಚರಣೆಯ ಅಂಗವಾಗಿ ವಿಶೇಷ ಆಚರಣೆಯಲ್ಲಿ ತೊಡಗಿಸಿಕೊಳ್ಳುವ ಗ್ರಾಮಗಳ ಪುರುಷರು ದೇವಾಲಯದ ಆವರಣದಲ್ಲಿ ರಾತ್ರಿಯ ವೇಳೆ ತಂಗುವ ಮೂಲಕ ದೇವಾಲಯದಲ್ಲಿ ಚೌರಿಕುಣಿತ ನಡೆಸುತ್ತ ದೇವಿಗೆ ಪೂಜೆಯನ್ನು ಅರ್ಪಿಸುತ್ತಿದ್ದು, ಕೊನೆಯ ದಿನವಾದ ಸೋಮವಾರ ಕೊಡವ ಮತ್ತು ಗೌಡ ಮನೆ ತನದ ಪುರುಷರು ಮತ್ತು ಯುವಕರು ಸಾಂಪ್ರದಾಯಿಕ ಉಡುಪಿನೊಂದಿಗೆ ದೇವಾಲ ಯದ ಭಂಡಾರವನ್ನು ಗ್ರಾಮದ ಮಂದನ ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸುವ ಮೂಲಕ ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತಂದರು. ದೇವಾಲಯದಲ್ಲಿ ಭಂಡಾರವನ್ನು ಸಮರ್ಪಿಸಿ, ನಂತರ ಗ್ರಾಮದ ಜನತೆಯಿಂದ ಈಡು ಗಾಯಿ ಎತ್ತು ಪೋರಾಟ್, ಚೌರಿಕುಣಿತದಲ್ಲಿ ಪುರುಷರು ಯುವಕರು ಪಾಲ್ಗೊಂಡು ನಂತರ ಬೆಳ್ಳಾರಿಕಮ್ಮ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಪ್ರದಕ್ಷಿಣೆ ನಡೆಸಿ ದೇವಿಗೆ ಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆಯನ್ನು ನಡೆಸಲಾಯಿತು.

ದಿನದ ಪೂಜಾ ಕೈಂಕರ್ಯವನ್ನು ಅರ್ಚಕರಾದ ಗಣೇಶ್ ಶರ್ಮ, ಮಂಜುನಾಥ ಉಡುಪ, ಮಂಜುನಾಥ ಶರ್ಮ ನೆರವೇರಿಸಿದರು.

ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಸಂಖ್ಯೆಯ ಜನತೆಯು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.ಸುAಟಿಕೊಪ್ಪ: ನಾರ್ಗಾಣೆ ಗ್ರಾಮದ ಶ್ರೀದೇವಿಯ ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಧರ್ಮ ದೈವದ ನೇಮೋತ್ಸವವು ತಾ.೧೪ ಮತ್ತು ೧೫ ರಂದು ವಿವಿಧ ಪೂಜಾ ಕೈಂಕರ್ಯದೊAದಿಗೆ ಸಂಪನ್ನಗೊAಡಿತು.

ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ಧರ್ಮ ದೈವದ ನೇಮೋತ್ಸವದ ಅಂಗವಾಗಿ ದೇವಾಲಯದ ಆವರಣದ ವ್ಯಾಪ್ತಿಯಲ್ಲಿ ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಸುತ್ತ ಮುತ್ತಲ ಗ್ರಾಮ ಹಾಗೂ ಊರುಗಳಾದ ವೀರಾಜಪೇಟೆ, ಸಿದ್ದಾಪುರ ಕುಶಾಲನಗರ ಹಾಗೂ ನೆರೆಯ ಜಿಲ್ಲೆಯ ಸುಳ್ಯ, ಪುತ್ತೂರು ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು.

ತಾ.೧೪ರಂದು ರಾತ್ರಿ ೮ ಗಂಟೆಗೆ ಭಂಡಾರ ಮೆರವಣಿಗೆ, ೮.೩೦ಕ್ಕೆ ಎಣ್ಣೆ ಅರ್ಪಣೆ, ೧೦ ಗಂಟೆಯ ನಂತರ ಕಲ್ಲುರ್ಟಿ ದೈವದ ನೇಮೋತ್ಸವವು ನಡೆದು ಸುಂಟಿಕೊಪ್ಪ: ನಾರ್ಗಾಣೆ ಗ್ರಾಮದ ಶ್ರೀದೇವಿಯ ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಧರ್ಮ ದೈವದ ನೇಮೋತ್ಸವವು ತಾ.೧೪ ಮತ್ತು ೧೫ ರಂದು ವಿವಿಧ ಪೂಜಾ ಕೈಂಕರ್ಯದೊAದಿಗೆ ಸಂಪನ್ನಗೊAಡಿತು.

ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ಧರ್ಮ ದೈವದ ನೇಮೋತ್ಸವದ ಅಂಗವಾಗಿ ದೇವಾಲಯದ ಆವರಣದ ವ್ಯಾಪ್ತಿಯಲ್ಲಿ ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಸುತ್ತ ಮುತ್ತಲ ಗ್ರಾಮ ಹಾಗೂ ಊರುಗಳಾದ ವೀರಾಜಪೇಟೆ, ಸಿದ್ದಾಪುರ ಕುಶಾಲನಗರ ಹಾಗೂ ನೆರೆಯ ಜಿಲ್ಲೆಯ ಸುಳ್ಯ, ಪುತ್ತೂರು ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು.

ತಾ.೧೪ರಂದು ರಾತ್ರಿ ೮ ಗಂಟೆಗೆ ಭಂಡಾರ ಮೆರವಣಿಗೆ, ೮.೩೦ಕ್ಕೆ ಎಣ್ಣೆ ಅರ್ಪಣೆ, ೧೦ ಗಂಟೆಯ ನಂತರ ಕಲ್ಲುರ್ಟಿ ದೈವದ ನೇಮೋತ್ಸವವು ನಡೆದು ಭಕ್ತಾಧಿಗಳಿಗೆ ದರ್ಶನ ನೀಡಿತು. ನಂತರ ಭಕ್ತಾದಿಗಳಿಗೆ ಗಂಧ ಪ್ರಸಾದ ವಿತರಿಸಲಾಯಿತು. ರಾತ್ರಿ ೧ ಗಂಟೆಗೆ ಧರ್ಮ ದೈವವಾದ ಅಣ್ಣಪ್ಪ, ಪಂಜುರ್ಲಿ ದೈವದ ನೇಮವು ನೇರವೇರಿತು. ರಾತ್ರಿ ೩.೩೦ಗಂಟೆಯ ನಂತರ ಗುಳಿಗ ಹಾಗೂ ಚಾಮುಂಡೇಶ್ವರಿ ಧರ್ಮ ದೈವದ ಜೋಡಿ ಕೋಲವು ಬೆಳಿಗ್ಗೆ ೮ ಗಂಟೆಯವರೆಗೆ ನಡೆಯಿತು. ಧರ್ಮ ದೈವಕ್ಕೆ ಅರ್ಪಣೆಯನ್ನು ನೀಡಲಾಯಿತು.

ತಾ.೧೫ರಂದು ಬೆಳಿಗ್ಗೆ ೮ ಗಂಟೆಗೆ ಧರ್ಮ ದೈವದ ಹರಕೆ, ಬೇಡಿಕೆಗಳನ್ನು ಭಕ್ತಾದಿಗಳು ಅರ್ಪಿಸಿದರು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರೆವೇ ರಿತು. ಮಧ್ಯಾಹ್ನ ೧೨ ಗಂಟೆಗೆ ಅನ್ನಸಂತರ್ಪಣೆ ಯನ್ನು ನೆರೆದಿದ್ದ ಭಕ್ತಾದಿಗಳಿಗೆ ನೀಡಲಾಯಿತು.

ಈ ನಾರ್ಗಾಣೆ ಗ್ರಾಮದ ಶ್ರೀ ದೇವಿಯ ಅಣ್ಣಪ್ಪಸ್ವಾಮಿ ದೇವಾಲಯ ಪ್ರಮುಖರಾದ ಬಿ.ಡಿ.ರಾಜು ರೈ ಹಾಗೂ ಕುಟುಂಬಸ್ಥರು ಇದ್ದರು.೨೨ ರಂದು ಹುದುಗೂರು ಉಮಾಮಹೇಶ್ವರ ವಾರ್ಷಿಕೋತ್ಸವ

ಕೂಡಿಗೆ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಸ್ವಾಮಿಯ ವಾರ್ಷಿಕ ವಿಶೇಷ ಪೂಜೋತ್ಸವ ಕಾರ್ಯಕ್ರಮವು ತಾ.೨೨ ರಂದು ನಡೆಯಲಿದೆ.

ಇದರ ಅಂಗವಾಗಿ ಬೆಳಿಗ್ಗೆ ೯ ಗಂಟೆಗೆ ಶ್ರೀ ಗಣಪತಿ ಹೋಮ, ಶ್ರೀ ಮೃತ್ಯುಂಜಯ ಹೋಮ, ಪ್ರಧಾನ ದೇವರಿಗೆ ಹಾಗೂ ಇತರೆ ಉಪದೇವತೆಗಳಗೆ ವಿಶೇಷ ಅಭಿಷೇಕ, ಅರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು, ಮಹಾಮಂಗಳಾತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಲಿವೆ. ಸಂಜೆ ೭ ಗಂಟೆಗೆ ದೇವಾಲಯ ಆವರಣದಲ್ಲಿ ದೀಪಾಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ ಅವರು ತಿಳಿಸಿದ್ದಾರೆ.ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಸುಣ್ಣದಕೆರೆ ಗ್ರಾಮದ ಗ್ರಾಮ ದೇವತೆ ಶ್ರೀ ಚಾಮುಂಡೇಶ್ವರಿ ಮತ್ತು ಗುಳಿಗ ದೇವರ ವಾರ್ಷಿಕ ಮಹಾಪೂಜೆ ಅದ್ದೂರಿಯಾಗಿ ನಡೆಯಿತು. ಈ ಪೂಜಾಕಾರ್ಯದಲ್ಲಿ ಸರ್ವ ಗ್ರಾಮಸ್ಥರು ಅಲ್ಲದೆ ದೇವಸ್ಥಾನ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. ಅರ್ಚಕ ಬಾಬು ಅವರು ಪೂಜಾಕಾರ್ಯ ನಡೆಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಈ ಸಂದರ್ಭ ಮಳೆಗಾಗಿ ಸರ್ವರು ಪ್ರಾರ್ಥಿಸಿದರು.ವೀರಾಜಪೇಟೆ: ವೀರಾಜಪೇಟೆಯ ಶಿವಕೇರಿಯಲ್ಲಿರುವ ಶ್ರೀ ದುರ್ಗಿ ವಿಷ್ಣುಮೂರ್ತಿ ಹಾಗೂ ನಾಗ ದೇವಸ್ಥಾನದ ವಾರ್ಷಿಕೋತ್ಸವ ಮತ್ತು ದೇವರ ಪ್ರತಿಷ್ಠಾ ವರ್ಧಂತಿ ದೇವತಾ ಕಾರ್ಯಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಯುಗಾದಿ ಹಬ್ಬದ ಪ್ರಯುಕ್ತ ದೇವಾಲಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು, ಇದಕ್ಕೂ ಮೊದಲು ಬೆಳಿಗ್ಗೆ ಶ್ರೀ ದುರ್ಗಿ ವಿಷ್ಣುಮೂರ್ತಿ ಹಾಗೂ ನಾಗದೇವರಿಗೆ ಪ್ರಥಮ ಗಣ ಹೋಮ, ವಿಷ್ಣು ಸಹಸ್ರನಾಮ, ತುಳಸಿ ಅರ್ಚನೆ, ಕಳಶ ಅಭಿಷೇಕ ಹಾಗೂ ವಿಶೇಷ ಪೂಜೆಗಳು ನಡೆದು ಬಳಿಕ ದೇವಸ್ಥಾನದ ಆವರಣದಲ್ಲಿ ಶ್ರೀ ದುರ್ಗಿ ವಿಷ್ಣು ದೇವರ ಉತ್ಸವ ಮೂರ್ತಿಯ ನೃತ್ಯ ನಡೆಯಿತು. ಬಳಿಕ ಮಹಾಪೂಜೆ ನಂತರ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಪೂಜಾ ಕಾರ್ಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಜರಿದ್ದರು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು.