ನಾಪೋಕ್ಲು, ಏ. ೧೬: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಂಡ್ಯೋಳAಡ ಕಪ್ನ ೧೮ನೇ ದಿನದ ಪಂದ್ಯಾಟದಲ್ಲಿ ಪಾಡೆಯಂಡ, ಅಪ್ಪನೆರವಂಡ ಮತ್ತು ಕಲಿಯಂಡ ತಂಡಗಳು ಭರ್ಜರಿ ಜಯಗಳಿಸಿದ್ದು ಒಟ್ಟು ೧೧ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಮೈದಾನ ೧ರಲ್ಲಿ ಪಟ್ಟಡ ಮತ್ತು ಚೋಯಮಾಡಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಚೋಯಮಾಡಂಡ ತಂಡವು ಪಟ್ಟಡ ತಂಡವನ್ನು ೧-೦ ಗೋಲಿನ ಅಂತರದಿAದ ಪರಾಭವಗೊಳಿಸಿತು. ಚೋಯಮಾಡಂಡ ತಂಡದ ಪರ ಸನ್ನು ಗಣಪತಿ ಒಂದು ಗೋಲು ದಾಖಲಿಸಿ ಗೆಲುವಿಗೆ ಕಾರಣರಾದರು. ಮಲ್ಲಂಗಡ ಮತ್ತು ಪಾಡೆಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಾಡೆಯಂಡ ತಂಡವು ಮಲ್ಲಂಗಡ ತಂಡವನ್ನು ೫-೧ ಗೋಲುಗಳ ಅಂತರದಿAದ ಸೋಲಿಸಿತು.
ಪಾಡೆಯಂಡ ತಂಡದ ಪರ ಮ್ಯಾಂಡಿ ಮಂದಣ್ಣ ಎರಡು, ಲೇಖನ್, ಮಿಥುನ್ ಮುತ್ತಪ್ಪ, ದರ್ಶನ್ ತಲಾ ಒಂದು ಗೋಲುಗಳಿಸಿದರೆ, ಮಲ್ಲಂಗಡ ತಂಡ ಪರ ಮುತ್ತಣ್ಣ ಒಂದು ಗೋಲು ದಾಖಲಿಸಿದರು. ಕರಿನೆರವಂಡ ತಂಡವು ಮಲ್ಲಮಡ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿತು. ಕರಿನೆರವಂಡ ತಂಡದ ಪರ ಬಿದ್ದಪ್ಪ ಎರಡು, ವಸಂತ್ ಪೊನ್ನಪ್ಪ ಒಂದು ಗೋಲು ದಾಖಲಿಸಿದರು. ಬೊವ್ವೇರಿಯಂಡ ತಂಡವು ಚಿಮ್ಮಣಮಾಡ ತಂಡವನ್ನು ೩-೧ ಗೋಲುಗಳ ಅಂತರದಿAದ ಸೋಲಿಸಿತು. ಬೊವ್ವೇರಿಯಂಡÀ ತಂಡದ ಪರ ಜೀತನ್, ಅಪ್ಪಯ್ಯ, ಗ್ಯಾನ್ ತಲಾ ಒಂದು ಗೋಲು ದಾಖಲಿಸಿದರು.
ಚಿಮ್ಮಣಮಾಡ ತಂಡದ ಪರ ಸಚಿನ್ ಒಂದು ಗೋಲು ಗಳಿಸಿದರು. ಅಪ್ಪನೆರವಂಡ ತಂಡವು ಗಾಂಡAಗಡ ತಂಡವನ್ನು ೪-೧ ಗೋಲಿನಿಂದ ಪರಾಭವಗೊಳಿಸಿತು. ಅಪ್ಪನೆರವಂಡ ತಂಡದ ಪರ ಚುಮ್ಮಿ ದೇವಯ್ಯ ಎರಡು, ಯಶ್ವಿನ್, ತರುಣ್ ಮಾಚಯ್ಯ ತಲಾ ಒಂದು ಗೋಲು ದಾಖಲಿಸಿದರು. ಗಾಂಡAಗಡ ತಂಡದ ಪರ ನವೀನ್ ಒಂದು ದಾಖಲಿಸಿದರು.
ಬಿದ್ದಂಡ ತಂಡವು ಮೇಕೇರಿರ ತಂಡವನ್ನು ೧-೦ ಗೋಲುಗಳ ಅಂತರದಿAದ ಸೋಲಿಸಿತು. ಬಿದ್ದಂಡ ತಂಡದ ಪರ ತಂಡದ ಕೀರ್ತಿ ಬೋಪಣ್ಣ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಕುಲ್ಲಚಂಡ ಮತ್ತು ಪುಟ್ಟಿಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ನಂತರ ನಡೆದ ಟೈಬ್ರೇಕರ್ನಲ್ಲಿ ಕುಲ್ಲಚಂಡ ತಂಡವು ಪುಟ್ಟಿಚಂಡ ತಂಡವನ್ನು ೬-೫ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.
ಕೋಟೆರ (ನೆಲಜಿ) ಮತ್ತು ಮೇಚಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೇಚಿಯಂಡ ತಂಡವು ಕೋಟೆರ ತಂಡವನ್ನು ೨-೧ ಗೋಲುಗಳಿಂದ ಮಣಿಸಿತು. ಮೇಚಿಯಂಡ ತಂಡದ ಪರ ಕೃತನ್ ಉತ್ತಯ್ಯ, ಪೃಥ್ವಿ ಗಣಪತಿ ತಲಾ ಒಂದು ಗೋಲು ದಾಖಲಿಸಿದರು. ಕೋಟೆರ ತಂಡದ ಪರ ದಿಲೀಪ್ ಒಂದು ದಾಖಲಿಸಿದರು. ಬೊಟ್ಟೋಳಂಡ ತಂಡವು ಚೊಟ್ಟೆರ ತಂಡವನ್ನು ೨-೧ ಗೋಲುಗಳ ಅಂತರದಿAದ ಪರಾಭವಗೊಳಿಸಿತು.
ಬೊಟ್ಟೋಳಂಡ ತಂಡದ ಗಗನ್ ಅಪ್ಪಣ್ಣ ಎರಡು ಗೋಲು ದಾಖಲಿಸಿದರೆ, ಚೊಟ್ಟೆರ ತಂಡದ ಪರ ಬಿಪಿನ್ ಭೀಮಯ್ಯ ಒಂದು ಗೋಲು ದಾಖಲಿಸಿದರು. ನೆರವಂಡ ತಂಡವು ಕೊಂಗಾAಡ ತಂಡವನ್ನು ೧-೦ ಗೋಲುಗಳಿಂದ ಸೋಲಿಸಿತು. ನೆರವಂಡ ತಂಡದ ಪರ ಕವನ್ ಕಾರ್ಯಪ್ಪ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಮಾಜಿ ಚಾಂಪಿಯನ್ ಕಲಿಯಂಡ ಮತ್ತು ಮಂಡಿರ (ನೆಲಜಿ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಲಿಯಂಡ ತಂಡವು ಮಂಡಿರ ತಂಡವನ್ನು ೪-೦ ಗೋಲುಗಳ ಅಂತರದಲ್ಲಿ ಸೋಲಿಸಿತು. ಕಲಿಯಂಡ ತಂಡದ ಪರ ಬಿದ್ದಪ್ಪ, ದಿವಿನ್ ದೇವಯ್ಯ, ಕಿರಣ್, ಚಿಣ್ಣಪ್ಪ ತಲಾ ಒಂದು ಗೋಲು ದಾಖಲಿಸಿದರು. - ಪಿ.ವಿ ಪ್ರಭಾಕರ್