ಪೊನ್ನಂಪೇಟೆ, ಏ. ೧೫: ಮ್ಯಾರಥಾನ್ ಓಟಗಾರ ಕೊಡಗಿನ ಕುವರ ಅಪ್ಪಚಂಗಡ ಬಿ.ಬೆಳ್ಯಪ್ಪ ಅವರು ತಾ. ೨೧ ರಂದು ಆಸ್ಟಿçಯ ದೇಶದ ವಿಯೆನ್ನದಲ್ಲಿ ನಡೆಯಲಿರುವ ಆಸ್ಟಿçಯ ದೇಶದ ಅತಿದೊಡ್ಡ ‘ರನ್ನಿಂಗ್ ಇವೆಂಟ್’ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಆಸ್ಟಿçಯದಲ್ಲಿ ನಡೆಯಲಿರುವ ೪೨.೧೯ ಕಿಲೋ ಮೀಟರ್ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಭಾರತವನ್ನು ಕೇವಲ ಇಬ್ಬರು ಸ್ಪರ್ಧಿಗಳು ಮಾತ್ರ ಪ್ರತಿನಿಧಿಸುತ್ತಿದ್ದು, ಅದರಲ್ಲಿ ಕರ್ನಾಟಕದಿಂದ ಕೊಡಗಿನ ಬೆಳ್ಯಪ್ಪ ಒಬ್ಬರು. ಮತ್ತೊಬ್ಬರು ಉತ್ತರಾಖಂಡ ರಾಜ್ಯದ ಮಾನ್‌ಸಿಂಗ್ ಎಂಬವರು ಈ ಮ್ಯಾರಥಾನ್‌ನಲ್ಲಿ ಪ್ರಪಂಚದಾದ್ಯAತ ೪೦ ಸಾವಿರ ಓಟಗಾರರು ಭಾಗವಹಿಸುತ್ತಿದ್ದು, ಉತ್ತಮ ಪ್ರದರ್ಶನ ತೋರಿದವರನ್ನು ಪ್ಯಾರಿಸ್ ಒಲಂಪಿಕ್ಸ್ಗೆ ಆಯ್ಕೆ ಮಾಡಲಾಗುತ್ತದೆ.

ಈ ಮ್ಯಾರಥಾನ್‌ನಲ್ಲಿ ಕಳೆದ ೫೦ ವರ್ಷಗಳ ಹಿಂದೆ ಪಂಜಾಬ್‌ನ ಶಿವನಾಥ್ ಸಿಂಗ್ ಎಂಬವರು ೨ ಗಂಟೆ ೧೧ ನಿಮಿಷ ೫೯ ಸೆಕೆಂಡ್‌ಗಳಲ್ಲಿ ೪೨.೧೯ ಕಿಲೋ ಮೀಟರ್ ದೂರವನ್ನು ಕ್ರಮಿಸಿ ದಾಖಲೆ ನಿರ್ಮಿಸಿದ್ದಾರೆ.

(ಮೊದಲ ಪುಟದಿಂದ) ೫೦ ವರ್ಷಗಳ ನಂತರ ಭಾರತದ ಪರವಾಗಿ ನೂತನ ದಾಖಲೆಯನ್ನು ನಿರ್ಮಿಸುವ ಅವಕಾಶ ಸಿಕ್ಕಿದ್ದು, ಈ ನಿಟ್ಟಿನಲ್ಲಿ ಉತ್ತಮ ಪ್ರಯತ್ನ ಮಾಡುವ ಮೂಲಕ ಪ್ಯಾರಿಸ್ ಒಲಂಪಿಕ್ಸ್ಗೆ ಅರ್ಹತೆ ಗಿಟ್ಟಿಸುವ ಗುರಿಯನ್ನು ಹೊಂದಿದ್ದೇನೆ, ಎಂದು ಬೆಳ್ಯಪ್ಪ ‘ಶಕ್ತಿ’ ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊAಡಿದ್ದಾರೆ.

ಬೆಳ್ಯಪ್ಪ ಕಳೆದ ವರ್ಷ ದೆಹಲಿಯಲ್ಲಿ ನಡೆದ ರಾಷ್ಟಿçÃಯ ಮ್ಯಾರಥಾನ್‌ನಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿ ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಭಾರತೀಯ ಸೇನೆಯಲ್ಲಿರುವ ಬೆಳ್ಯಪ್ಪ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸಿ÷್ಟಟ್ಯೂಟ್‌ನಲ್ಲಿದ್ದು, ಊಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಅಪ್ಪಚಂಗಡ ಬೋಪಯ್ಯ ಹಾಗೂ ರೋಜಾ ದಂಪತಿಯ ಪುತ್ರ. -ಚನ್ನನಾಯಕ