ವೀರಾಜಪೇಟೆ, ಏ. ೧೫: ಈ ಬಾರಿ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವೀರಾಜಪೇಟೆಯ ಗೃಹಿಣಿಯಾದ ಶ್ರೀಜಾ ಆರ್. ಉತ್ತಮ ಅಂಕಗಳಿಸಿ ಸಾಧನೆ ಮಾಡಿದ್ದಾರೆ. ೨೦೦೬ರಲ್ಲಿ ತನ್ನ ಎಸ್.ಎಸ್.ಎಲ್.ಸಿ ಶಿಕ್ಷಣದಲ್ಲಿ ಉತ್ತೀರ್ಣರಾದ ಶ್ರೀಜಾ ಸುದೀರ್ಘ ೧೭ ವರ್ಷಗಳ ಬಳಿಕ ದ್ವಿತೀಯ ಪಿಯು ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ೬೦೦ ಅಂಕಗಳಿಗೆ ೫೬೦ ಅಂಕಗಳನ್ನು ಪಡೆದು ಶೇಕಡ ೯೩.೩೩ ಅಂಕ ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ ೯೮, ಇಂಗ್ಲಿಷ್‌ನಲ್ಲಿ ೮೮, ಅರ್ಥಶಾಸ್ತçದಲ್ಲಿ ೯೦, ಭೂಗೋಳಶಾಸ್ತçದಲ್ಲಿ ೯೮, ವ್ಯವಹಾರ ಶಾಸ್ತçದಲ್ಲಿ ೯೪ ಮತ್ತು ಲೆಕ್ಕಶಾಸ್ತçದಲ್ಲಿ ೯೨ ಅಂಕಗಳನ್ನು ಪಡೆದು ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಮೂಲತಃ ವೀರಾಜಪೇಟೆಯ ಗೌರಿಕೆರೆ ಸಮೀಪದ ನಿವಾಸಿ ಉನ್ನಿಕೃಷ್ಣನ್ ರವರ ಪತ್ನಿಯಾಗಿರುವ ಶ್ರೀಜಾ ನಿರಂತರ ಓದುಗಾರಿಕೆ, ಮನೆಯಲ್ಲಿ ಮತ್ತು ಗುರುಗಳ ಪ್ರೋತ್ಸಾಹದಿಂದ ಈ ಸಾಧನೆ ಮಾಡಲಾಯಿತು. ದೃಢ ಸಂಕಲ್ಪ ಮತ್ತು ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.