ಕಳವು - ಮಾರಾಟ
ಸಿದ್ದಾಪುರ, ಏ. ೧೫: ಮೇಯಲು ಬಿಟ್ಟಿದ್ದ ಜಾನುವಾರುಗಳಿಗೆ ಉರುಳು ಹಾಕಿ ಕಳವು ಮಾಡಿ ನಂತರ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸೂರು ಬೆಟ್ಟಗೇರಿಯ ಸಣ್ಣುವಂಡ ಕಿಶೋರ್ ಹಾಗೂ ಕೊಡಂಗೇರಿಯ ಹ್ಯಾರಿಸ್ ಬಂಧಿತ ಆರೋಪಿಗಳು.
ಸಿದ್ದಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಹೊಸೂರು ಬೆಟ್ಟಗೇರಿ ನಿವಾಸಿ ಪಿ.ಟಿ.ಉತ್ತಯ್ಯ ಎಂಬವರಿಗೆ ಸೇರಿದ ಹಸುಗಳನ್ನು ಮೇಯಲು ಬಿಟ್ಟು ತೆರಳಿ ಮತ್ತೆ ಬಂದು ನೋಡಿದಾಗ ನಾಪತ್ತೆಯಾಗಿತ್ತು. ಈ ಸಂಬAಧ ತಾ. ೪ ರಂದು ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದಾಗ ಅದೇ ಗ್ರಾಮದ ಸಣ್ಣುವಂಡ ಕಿಶೋರ್ ಎಂಬವರು ತನ್ನ ತೋಟದಲ್ಲಿ ಉರುಳನ್ನು ಹಾಕಿ ದನಗಳನ್ನು ಹಿಡಿದು ಕೊಂಡಗೇರಿಯ ಹ್ಯಾರಿಸ್ ಎಂಬವರಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ. ನಂತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಯಿತು.