ಸೋಮವಾರಪೇಟೆ,ಏ.೧೪: ಲಯನ್ಸ್ ಕ್ಲಬ್ ವತಿಯಿಂದ ಇಲ್ಲಿನ ಶ್ರೀಗಂಧ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಪ್ರಗತಿಪರ ಕೃಷಿಕರು ಹಾಗೂ ಹಾರಂಗಿ ನೀರಾವರಿ ನಿರ್ವಹಣಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿ ರುವ ಎ.ಪಿ. ಸುಬ್ಬಯ್ಯ, ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಜಲಜಾ ಶೇಖರ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎ.ಎಸ್. ಮಹೇಶ್, ಜಿಲ್ಲಾ ಉಪಾಧ್ಯಕ್ಷ ಜೆ.ಸಿ. ಶೇಖರ್, ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಎ.ಎಂ. ಆನಂದ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಲಯನ್ಸ್ ವಲಯಾಧ್ಯಕ್ಷ ಚೆಟ್ಟಿಮಾಡ ರೋಹಿತ್, ಕಾರ್ಯದರ್ಶಿ ಚಾವಡಿ ಶಿವ ಕುಮಾರ್ ಹಾಗೂ ಖಜಾಂಚಿ ಕೆ.ಡಿ. ವಿರಪ್ಪ ಉಪಸ್ಥಿತರಿದ್ದರು.