ಸೋಮವಾರಪೇಟೆ, ಏ. ೧೪: ಮನೆ ಸಮೀಪದ ತೋಟದಲ್ಲಿ ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ.
ಸಮೀಪದ ದೊಡ್ಡಮಳ್ತೆ ಗ್ರಾಮದ ಬಸವರಾಜು ಅವರ ಪುತ್ರ, ಪಟ್ಟಣದ ವರ್ಕ್ ಶಾಪ್ ಒಂದರಲ್ಲಿ ಮೆಕ್ಯಾನಿಕ್ ಆಗಿದ್ದ ಸುಮಂತ್ (೨೮ ) ಎಂಬಾತನೇ ಆತ್ಮಹತ್ಯೆಗೆ ಶರಣಾದವನು.
ನಿನ್ನೆ ರಾತ್ರಿ ೯ ಗಂಟೆಗೆ ಪಟ್ಟಣದಿಂದ ತೆರಳಿರುವ ಸುಮಂತ್, ಮನೆಗೆ ತೆರಳದೆ ತೋಟಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂದು ಮಧ್ಯಾಹ್ನದ ವೇಳೆಗೆ ಮನೆ ಸಮೀಪದ ತೋಟದ ಬದಿಯಲ್ಲಿ ಸುಮಂತ್ನ ಬೈಕ್ ಕಂಡುಬAದಿದ್ದು, ಒಳಭಾಗಕ್ಕೆ ತೆರಳಿ ನೋಡಿದ ಸಂದರ್ಭ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕೆÀ್ಕ ಸೋಮವಾರಪೇಟೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ಸುಮಂತ್ ತಂದೆ ತಾಯಿಯೊಂದಿಗೆ ಸಹೋದರನನ್ನು ಅಗಲಿದ್ದಾನೆ.