ನಾಪೋಕ್ಲು, ಏ. ೧೪: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಕುಂಡ್ಯೋಳAಡ ಕಪ್ನ ೧೬ನೇ ದಿನದ ಪಂದ್ಯಾಟದಲ್ಲಿ ಅಂಜಪರವAಡ, ಕೂತಂಡ, ಕುಲ್ಲೇಟಿರ ತಂಡಗಳು ಭರ್ಜರಿ ಜಯ ಸಾಧಿಸಿವೆ. ಚೌರೀರ (ಹೊದ್ದೂರು), ಬಾಳೆಯಡ, ಮಣವಟ್ಟಿರ, ಮಾಚಿಮಂಡ, ಚೇನಂಡ, ಐಚೆಟ್ಟಿರ, ಚಿಂಡಮಾಡ, ನೆರವಂಡ, ಮೂಕೊಂಡ, ಬೊಳ್ಳಂಡ, ಪುಳ್ಳಂಗಡ, ಪಾಂಡAಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಮೈದಾನ ೧ರಲ್ಲಿ ಮಲ್ಚಿರ ಮತ್ತು ಚೌರೀರ (ಹೊದ್ದೂರು) ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಚೌರೀರ ತಂಡವು ಮಲ್ಚಿರ ತಂಡವನ್ನು ೩-೦ ಗೋಲಿನ ಅಂತರದಿAದ ಪರಾಭವಗೊಳಿಸಿತು. ಚೌರೀರ ತಂಡದ ಪರ ಧನುಶ್ ನಾಣಯ್ಯ ಎರಡು, ಸೂರಜ್ ಒಂದು ಗೋಲು ದಾಖಲಿಸಿದರು. ಕಾಂಡAಡ ಮತ್ತು ಬಾಳೆಯಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಾಳೆಯಡ ತಂಡವು ಕಾಂಡAಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿತು. ಬಾಳೆಯಡ ತಂಡದ ಪರ ವಿನಿಲ್, ಸುತನ್ ತಲಾ ಒಂದು ಗೋಲು ದಾಖಲಿಸಿದರು. ಮಣವಟ್ಟಿರ ಮತ್ತು ಮಾಳೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಣವಟ್ಟಿರ ತಂಡವು ಮಾಳೇಟಿರ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿತು. ಮಣವಟ್ಟಿರ ತಂಡದ ಪರ ಮಧು ಅಯ್ಯಪ್ಪ, ಅಪ್ಪಚ್ಚು ತಲಾ ಒಂದೊAದು ಗೋಲು ದಾಖಲಿಸಿದರು. ಉದಿಯಂಡ ಮತ್ತು ಮಾಜಿ ಚಾಂಪಿಯನ್ ಕುಲ್ಲೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಲ್ಲೇಟಿರ ತಂಡವು ಉದಿಯಂಡ ತಂಡವನ್ನು ೪-೦ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಕುಲ್ಲೇಟಿರ ತಂಡದ ಪರ ತಂಡದ ಅವನೀಶ್ ಮಂದಪ್ಪ ಎರಡು, ಸಂಚಿತ್, ನಿಶ್ಚಲ್ ನಾಚಪ್ಪ ತಲಾ ಒಂದೊAದು ಗೋಲು ದಾಖಲಿಸಿದರು. ಚೆಪ್ಪುಡಿರ ಮತ್ತು ಚೊಟ್ಟೆಯಂಡಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಪ್ಪುಡಿರ ತಂಡವು ೬-೦ ಗೋಲಿನಿಂದ ಚೊಟ್ಟೆಯಂಡಮಾಡ ತಂಡವನ್ನು ಪರಾಭವಗೊಳಿಸಿತು. ಚೆಪ್ಪುಡಿರ ತಂಡದ ಪರ ಚೇತನ್ ಚಿಣ್ಣಪ್ಪ ಮೂರು, ತಿಮ್ಮಯ್ಯ ಎರಡು, ನರೇನ್ ಕಾರ್ಯಪ್ಪ ಒಂದು ಗೋಲು ದಾಖಲಿಸಿದರು. ಮಾಚಿಮಂಡ ಮತ್ತು ಚಿರಿಯಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾಚಿಮಂಡ ತಂಡವು ೩-೧ ಗೋಲುಗಳ ಅಂತರದಿAದ ಚಿರಿಯಪಂಡ ತಂಡವನ್ನು ಪರಾಭವಗೊಳಿಸಿತು. ಮಾಚಿಮಂಡ ತಂಡದ ಪರ ಹರ್ಷಿತ್ ಸೋಮಣ್ಣ, ಆಶಿಕ್ ಉತ್ತಪ್ಪ, ಪ್ರಸಾದ್ ಚಂಗಪ್ಪ ತಲಾ ಒಂದು ಗೋಲು ದಾಖಲಿಸಿದರು. ಚಿರಿಯಪಂಡ ತಂಡದ ಪರ ದೀಪಕ್ ಸುಬ್ಬಯ್ಯ ಒಂದು ಗೋಲು ದಾಖಲಿಸಿದರು. ಕೇಳಪಂಡ ಮತ್ತು ಚೇನಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೇನಂಡ ತಂಡವು ೩-೦ ಗೋಲುಗಳ ಅಂತರದಿAದ ಕೇಳಪಂಡ ತಂಡವನ್ನು ಪರಾಭವಗೊಳಿಸಿತು. ಚೇನಂಡ ತಂಡದ ಪರ ಸಚೀನ್ ಅಯ್ಯಪ್ಪ, ಮೌರ್ಯ ತಿಮ್ಮಯ್ಯ, ಅಯ್ಯಪ್ಪ ತಲಾ ಒಂದು ಗೋಲು ದಾಖಲಿಸಿದರು. ಐಚೆಟ್ಟಿರ ಮತ್ತು ಚಂಗೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಐಚೆಟ್ಟಿರ ತಂಡವು ೨-೦ ಗೋಲುಗಳಿಂದ ಚಂಗೇಟಿರ ತಂಡವನ್ನು ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಐಚೆಟ್ಟಿರ ತನೀಶ್, ವೇದ್ ತಲಾ ಒಂದು ಗೋಲು ಗಳಿಸಿದರು.
ಮೈದಾನ ೨ರಲ್ಲಿ ನಡೆದ ತಿರುಟೆರ ಮತ್ತು ಅಂಜಪರವAಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಅಂಜಪರವAಡ ತಂಡವು ತಿರುಟೆರ ತಂಡವನ್ನು ೫-೧ ಗೋಲುಗಳ ಅಂತರದಿAದ ಸೋಲಿಸಿತು. ಅಂಜಪರವAಡ ತಂಡದ ಹೇಮಂತ್ ಮೂರು, ವಿನಯ್, ಅಭಿನ್ ಚಿಟ್ಟಿಯಪ್ಪ ತಲಾ ಒಂದು ಗೋಲು ದಾಖಲಿಸಿದರು. ಬೇಪಡಿಯಂಡ ಮತ್ತು ಕೂತಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೂತಂಡ ತಂಡವು ಬೇಪಡಿಯಂಡ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿತು. ಕೂತಂಡ ತಂಡದ ಪರ ಸಂತೋಷ್ ಎರಡು, ಗ್ಯಾನ್, ರಿಕ್ಕಿ ಕುಶಾಲಪ್ಪ ತಲಾ ಒಂದೊAದು ಗೋಲು ಗಳಿಸಿದರು. ಮಾಪಣಮಾಡ ಮತ್ತು ಚಿಂಡಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಿಂಡಮಾಡ ತಂಡವು ಮಾಪಣಮಾಡ ತಂಡವನ್ನು ೧-೦ ಗೋಲುಗಳಿಂದ ಮಣಿಸಿತು. ಚಿಂಡಮಾಡ ತಂಡದ ಪರ ತೀರ್ಥನ್ ತಿಮ್ಮಯ್ಯ ಒಂದು ಗೋಲು ದಾಖಲಿಸಿದರು. ವಲ್ಲಂಡ ಮತ್ತು ನೆರವಂಡ ತಂಡಗಳ ನಡುವಿನ ಸೆಣಸಾಟದಲ್ಲಿ ನೆರವಂಡ ತಂಡವು ವಲ್ಲಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿತು. ನೆರವಂಡ ತಂಡದ ಪರ ಕವನ್ ಕಾವೇರಪ್ಪ, ನಾಚಪ್ಪ, ಪ್ರವೀಣ್ ಪೆಮ್ಮಯ್ಯ ತಲಾ ಒಂದು ಗೋಲು ದಾಖಲಿಸಿದರು. ಮೂಕೊಂಡ ಮತ್ತು ಕುಮ್ಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೂಕೊಂಡ ತಂಡವು ಕುಮ್ಮಂಡ ತಂಡವನ್ನು ೪-೨ ಗೋಲುಗಳಿಂದ ಸೋಲಿಸಿತು. ಮೂಕೊಂಡ ತಂಡದ ಪರ ನಿಖಿಲ್ ಎರಡು, ಮಾಚಯ್ಯ, ಮಿತೇಶ್ ತಲಾ ಒಂದು ಗೋಲುಗಳಿಸಿದರೆ, ಕುಮ್ಮಂಡ ತಂಡದ ಪರ ಸೋನು ನಾಣಯ್ಯ, ಕವನ್ ಕಾರ್ಯಪ್ಪ ತಲಾ ಒಂದು ಗೋಲು ದಾಖಲಿಸಿದರು. ಬೊಳ್ಳಂಡ ಮತ್ತು ಕಾಣತಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೊಳ್ಳಂಡ ತಂಡವು ಕಾಣತಂಡ ತಂಡವನ್ನು ೧-೦ ಗೋಲುಗಳ ಅಂತರದಲ್ಲಿ ಸೋಲಿಸಿತು. ಬೊಳ್ಳಂಡ ತಂಡದ ಪರ ಯಶ್ ಮಾಚಯ್ಯ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಪುಳ್ಳಂಗಡ ಮತ್ತು ಇಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪುಳ್ಳಂಗಡ ತಂಡವು ಇಟ್ಟಿರ ತಂಡವನ್ನು ೩-೧ ಗೋಲುಗಳಿಂದ ಸೋಲಿಸಿತು. ಪುಳ್ಳಂಗಡ ತಂಡದ ಪರ ಮುತ್ತಣ್ಣ ಎರಡು, ಮಿರಾಜ್ ಪೊನ್ನಣ್ಣ ಒಂದು ಗೋಲು ದಾಖಲಿಸಿದರು.ಇಟ್ಟಿರ ತಂಡದ ಪರ ಚಿಟ್ಟಿಯಪ್ಪ ಒಂದು ಗೋಲು ದಾಖಲಿಸಿದರು.
ಪಾಂಡAಡ ಮತ್ತು ಚಂಗುಲAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಾಂಡAಡ ತಂಡವು ಚಂಗುಲAಡ ತಂಡವನ್ನು ಟೈಬ್ರೇಕರ್ನಲ್ಲಿ ೪-೩ ಗೋಲುಗಳ ಅಂತರದಿAದ ಪರಾಭಗೊಳಿಸಿತು. -ಪಿ.ವಿ.ಪ್ರಭಾಕರ್