ಐಗೂರು, ಏ. ೧೪: ಐಗೂರಿನ ಕಾಜೂರು ಶಾಲೆಯಲ್ಲಿ ಐದು ದಿನಗಳ ಕಾಲ ಬೆಂಗಳೂರಿನ ಎಕ್ಸ್ ಡೈಮಂಡ್ ಸಂಸ್ಥೆಯಿAದ ಹಮ್ಮಿಕೊಂಡಿದ್ದ ಸ್ಪೋಕನ್ ಇಂಗ್ಲಿಷಿನ ಬೇಸಿಗೆ ಶಿಬಿರದ ಮುಕ್ತಾಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅಡುಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಫ್ರೂಟ್ ಸಲಾಡ್, ಚುರ್ಮುರಿ, ಪುನರ್ಪುಳಿ ಜ್ಯೂಸ್, ಪಂಚಾಮೃತ, ಚಾಕ್ಲೇಟ್ ತಯಾರಿಕೆ ಮಾಡಿದರು. ಎಕ್ಸ್ ಡೈಮಂಡ್ ಸಂಸ್ಥೆಯ ಅಭಿರಾಮ್ ಮಾತನಾಡಿ, ಕಳೆದ ಸಾಲಿಗಿಂತ ಈ ಬಾರಿ ವಿದ್ಯಾರ್ಥಿಗಳು ಇಂಗ್ಲಿಷ್ ಕಲಿಕೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ ಎಂದರು. ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಾದ ಯಶೀಕ, ನೇತ್ರ ಮತ್ತು ಗಾನವಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭ ಶಿಕ್ಷಕಿ ವೇದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಎಕ್ಸ್ ಡೈಮಂಡ್ನ ಅಭಿರಾಮ್, ಸುಧಾ ಅಭಿರಾಮ್, ಕೃತಿಕಾ, ಕುಮಾರ ನೀಲ್, ಮುಖ್ಯ ಶಿಕ್ಷಕಿ ಸರಳ ಕುಮಾರಿ, ಶಿಕ್ಷಕ ಅಜಿತ್ ಕುಮಾರ್, ಶಿಕ್ಷಕಿಯರಾದ ಅನಸೂಯ, ಇಂದಿರಾ, ವೇದ ಮತ್ತು ಮಕ್ಕಳು ಭಾಗವಹಿಸಿದ್ದರು.