*ಗೋಣಿಕೊಪ್ಪ, ಏ. ೧೪: ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮೈದಾನದಲ್ಲಿ ತಾ ೨೧ ರಿಂದ ಮೇ ೧೯ ರವರೆಗೆ ಆಯೋಜಿಸಿರುವ ಕೊಡವ ಕೌಟುಂಬಿಕ ಅರಮಣಮಾಡ ಕ್ರಿಕೆಟ್ ಕಪ್ಗೆ ಒಟ್ಟು ೩೦೯ ತಂಡಗಳು ಭಾಗವಹಿಸುತ್ತಿವೆ ಎಂದು ಕ್ರಿಕೆಟ್ ನಮ್ಮೆ ಉಪಾಧ್ಯಕ್ಷ ಅರಮಣಮಾಡ ಸುಗುಣ ಗಣಪತಿ ತಿಳಿಸಿದ್ದಾರೆ.
ಪುರುಷರ ೨೬೪ ತಂಡಗಳು, ಮಹಿಳೆಯರ ೪೫ ತಂಡಗಳು ಪಾಲ್ಗೊಳ್ಳುತ್ತಿವೆ. ದಾಖಲೆಯ ತಂಡಗಳು ಪಾಲ್ಗೊಂಡAತಾಗಿದೆ ಎಂದು ಟೈಸ್ ಬಿಡುಗಡೆಗೊಳಿಸಿ ಮಾತನಾಡಿದರು. ಇದೇ ಮೊದಲ ಬಾರಿಗೆ ಮಹಿಳೆಯರು ಕುಟುಂಬದ ಹೆಸರಿನಲ್ಲಿ ಹೋರಾಟ ನಡೆಸುತ್ತಿದೆ. ಇದು ಅರಮಣಮಾಡ ಕ್ರಿಕೆಟ್ ವಿಶೇಷತೆಯಲ್ಲೊಂದಾಗಿದೆ. ಎಲ್ಲಾ ತಂಡಗಳು ಅರಮಣಮಾಡ ಕ್ರಿಕೆಟ್ ನಮ್ಮೆಗೆ ಪೂರಕ ಸಹಕಾರ ನೀಡಬೇಕು. ಉತ್ತಮವಾಗಿ ಪಂದ್ಯಗಳನ್ನು ನಡೆಸಲು ತಂಡಗಳ ಪ್ರೋತ್ಸಾಹ ಅಗತ್ಯ ಎಂದರು.
ಕಾರ್ಯದರ್ಶಿ ಅಜಯ್ ಮಾತನಾಡಿ, ಪುರುಷರ ಕ್ರಿಕೆಟ್ ವಿಜೇತರಿಗೆ ಒಟ್ಟು ೨.೫ ಲಕ್ಷ ನಗದು ಬಹುಮಾನ ನೀಡಲಾಗುವುದು. ಪ್ರಥಮ ತಂಡಕ್ಕೆ ರೂ. ೧ ಲಕ್ಷ, ದ್ವಿತೀಯ ತಂಡಕ್ಕೆ ರೂ. ೭೫ ಸಾವಿರ, ೩ ನೇ ಸ್ಥಾನಕ್ಕೆ ರೂ. ೫೦ ಸಾವಿರ, ೪ ನೇ ಸ್ಥಾನಕ್ಕೆ ರೂ. ೨೫ ಸಾವಿರ ನಗದು ನೀಡಲಾಗುವುದು. ಉತ್ತಮ ಬ್ಯಾಟಿಂಗ್, ಬೌಲರ್, ಕೀಪರ್, ಆಲ್ರೌಂಡರ್, ಅಪ್ ಕಮಿಂಗ್ ಆಟಗಾರ ಪ್ರಶಸ್ತಿ ನೀಡಲಾಗುವುದು ಎಂದರು.
ಮಹಿಳೆಯರಿಗೆ ನಗದು ರಹಿತವಾಗಿ ಪ್ರಶಸ್ತಿ ನೀಡಲಾಗುವುದು. ಒಟ್ಟು ೨.೫ ಲಕ್ಷ ಮೌಲ್ಯದ ಬೆಳ್ಳಿಯ ಆಭರಣ ಪ್ರಶಸ್ತಿಯಾಗಿ ಸ್ವೀಕರಿಸಲಿದ್ದಾರೆ. ವಿಜೇತ ತಂಡಕ್ಕೆ ೮೨ ಸಾವಿರ ಮೌಲ್ಯದ ಬೆಳ್ಳಿಯ ಕೊಕ್ಕೆತಾತಿ, ದ್ವಿತೀಯ ತಂಡಕ್ಕೆ ೪೮ ಸಾವಿರ ಮೌಲ್ಯದ ಕೊಕ್ಕೆತಾತಿ, ೩ ನೇ ತಂಡಕ್ಕೆ ಪೀಚೆಕತ್ತಿಯ ಬ್ರೋಚ್, ೪ ನೇ ತಂಡಕ್ಕೆ ಪೀಚೆಕತ್ತಿ ಬ್ರೋಚ್ ನೀಡಲಾಗುತ್ತದೆ. ಮಹಿಳೆಯರಲ್ಲಿ ಕೂಡ ಉತ್ತಮ ಬ್ಯಾಟಿಂಗ್, ಬೌಲರ್, ಕೀಪರ್, ಆಲ್ರೌಂಡರ್, ಅಪ್ ಕಮಿಂಗ್ ಆಟಗಾರ ಪ್ರಶಸ್ತಿ ನೀಡಲಾಗುವುದು ಎಂದರು.
ತಾ. ೨೧ ರಂದು ಉದ್ಘಾಟನೆ ಸಂದರ್ಭ ಉತ್ತರ ಮತ್ತು ದಕ್ಷಿಣ ಕೊಡಗು ಭಾಗದ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಮಹಿಳೆಯರ ಎರಡು ಅಧಿಕೃತ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದರು. ಈ ಸಂದರ್ಭ ಖಜಾಂಚಿ ಅರಮಣಮಾಡ ದಿನು ಬೆಳ್ಯಪ್ಪ, ಕೊಡವ ಕ್ರಿಕೆಟ್ ಅಕಾಡೆಮಿ ನಿರ್ದೇಶಕ ಮಾಚಂಗಡ ದರ್ಶನ್, ಮಹಿಳಾ ಕ್ರಿಕೆಟ್ ಪ್ರಮುಖರಾದ ಅರಮಣಮಾಡ ಟೀನಾ ಬೆಳ್ಯಪ್ಪ, ದಿವ್ಯ ಗಣಪತಿ ಇದ್ದರು.