ಮಡಿಕೇರಿ, ಏ. ೧೩: ನಿಯಂತ್ರಣ ತಪ್ಪಿದ ಕಾರು ಹೊಟೇಲ್ ಒಳ ಭಾಗಕ್ಕೆ ನುಗ್ಗಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಪೆರಾಜೆಯಲ್ಲಿ ನಡೆದಿದೆ.
ಮಡಿಕೇರಿ ರಸ್ತೆಯಿಂದ ಬಂದ ರಿಟ್ಜ್ ಕಾರೊಂದು ನಿಯಂತ್ರಣ ಕಳೆದುಕೊಂಡು ಪೆರಾಜೆಯ ಹೊಟೇಲ್ಗೆ ನುಗ್ಗಿದೆ. ಇದರಿಂದ ಹೊಟೇಲ್ ಒಳಗಿದ್ದ ಪೆರಾಜೆಯ ಲಿಖಿತ್, ಸುಮನ್ ಹಾಗೂ ಹೋಟೆಲ್ ಮಾಲೀಕ ನೌಫಲ್ ಗಾಯಗೊಂಡಿದ್ದಾರೆ. ಅರಂತೋಡು ಕಡೆಗೆ ಹೋಗಿದ್ದ ಲಿಕಿತ್ ಮತ್ತು ಸುಮನ್ ಟೀ ಕುಡಿಯಲೆಂದು ಹೊಟೇಲಿಗೆ ಬಂದಿದ್ದರು. ಈ ವೇಳೆ ಘಟನೆ ಸಂಭವಿಸಿದ್ದು, ಗಂಭೀರ ಗಾಯಗೊಂಡಿರುವ ಲಿಖಿತ್ನನ್ನು ಮಂಗಳೂರಿಗೆ, ಉಳಿದ ಇಬ್ಬರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಹೊಟೇಲ್ಗೆ ಹಾನಿಯಾಗಿದ್ದು, ಕಾರು ನಜ್ಜುಗುಜ್ಜಾಗಿದೆ.