ಕೂಡಿಗೆ, ಏ. ೧೪: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ದೊಡ್ಡಮ್ಮ ತಾಯಿ ದೇವಾಲಯ ಸಮಿತಿಯ ವತಿಯಿಂದ ರೂ. ೭ ಲಕ್ಷ ವೆಚ್ಚದಲ್ಲಿ ನೂತನ ರಥದ ನಿರ್ಮಾಣ ಕಾರ್ಯವು ನಡೆಯುತ್ತಿದೆ. ಮುಂದಿನ ತಿಂಗಳಲ್ಲಿ ನಡೆಯಲಿರುವ ಕೂಡ್ಲೂರು- ಕೂಡುಮಂಗಳೂರು ಅವಳಿ ಗ್ರಾಮಗಳ ಗ್ರಾಮ ದೇವತೆಯಾದ ದೊಡ್ಡಮ್ಮ ತಾಯಿ ಹಬ್ಬದ ಅಂಗವಾಗಿ ರಥ ತಯಾರಿಯಾಗುತ್ತಿದೆ. ಬೆಟ್ಟದಪುರ ಹತ್ತಿರದ ಗಣಗಲುವಿನ ನಂಜುAಡ ಆಚಾರಿ ಅವರ ತಂಡದವರು ವಿವಿಧ ಕೆತ್ತನೆ ಕಾರ್ಯಗಳÀಲ್ಲಿ ತೊಡಗಿದ್ದಾರೆ.