ನಾಪೋಕ್ಲು, ಏ. ೧೩: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಕುಂಡ್ಯೋಳAಡ ಕಪ್‌ನ ೧೫ನೇ ದಿನದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್ ಮಂಡೇಪAಡ ಸೇರಿದಂತೆ ಕಲ್ಯಾಟಂಡ, ಕೊಕ್ಕಂಡ, ಮುಕ್ಕಾಟಿರ (ಹರಿಹರ), ನಾಗಂಡ, ಐನಂಡ, ಮುರುವಂಡ, ಕರ್ತಮಾಡ, ಅರೆಯಡ, ಕರೋಟಿರ, ಪೆಮ್ಮಂಡ, ಅಪ್ಪಚೆಟ್ಟೋಳಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಮೈದಾನ ೧ರಲ್ಲಿ ನಡೆದ ಕಲ್ಯಾಟಂಡ ಮತ್ತು ಮಾದಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಕಲ್ಯಾಟಂಡ ತಂಡವು ಮಾದಂಡ ತಂಡವನ್ನು ೧-೦ ಗೋಲಿನ ಅಂತರದಿAದ ಪರಾಭವಗೊಳಿಸಿತು. ಕಲ್ಯಾಟಂಡ ತಂಡದ ಪರ ಸವೀನ್ ಬೋಪಯ್ಯ ಒಂದು ಗೋಲು ದಾಖಲಿಸಿದರು. ಮಾಜಿ ಚಾಂಪಿಯನ್ ಮಂಡೇಪAಡ ಮತ್ತು ಅಪ್ಪಂಡೇರAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಂಡೇಪAಡ ತಂಡವು ಅಪ್ಪಂಡೇರAಡ ತಂಡವನ್ನು ೪-೧ ಗೋಲುಗಳ ಅಂತರದಿAದ ಸೋಲಿಸಿತು. ಮಂಡೇಪAಡ ತಂಡದ ಪರ ಚಂಗಪ್ಪ ಎರಡು ಗೋಲುಗಳಿಸಿದರೆ, ಸಜನ್, ಕೃಪನ್ ತಲಾ ಒಂದು ಗೋಲು ದಾಖಲಿಸಿದರು.

ಅಪ್ಪಂಡೇರAಡ ತಂಡದ ಸುಮನ್ ಒಂದು ಗೋಲು ದಾಖಲಿಸಿದರು. ಕಾಡ್ಯಮಾಡ ಮತ್ತು ಕೊಕ್ಕಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಡ್ಯಮಾಡ ತಂಡವು ಕೊಕ್ಕಂಡ ತಂಡವನ್ನು ಟೈಬ್ರೇಕರ್‌ನಲ್ಲಿ ೬-೫ ಗೋಲುಗಳಿಂದ ಸೋಲಿಸಿತು. ಬಾದುಮಂಡ ಮತ್ತು ಮುಕ್ಕಾಟಿರ(ಹರಿಹರ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಬಾದುಮಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿತು. ಮುಕ್ಕಾಟಿರ ತಂಡದ ಪರ ಭುವನ್ ಭೀಮಯ್ಯ, ಮೋನಿಶ್ ಮಂದಣ್ಣ, ಲಕ್ಷನ್ ಚಂಗಪ್ಪ ತಲಾ ಒಂದೊAದು ಗೋಲು ದಾಖಲಿಸಿದರು.

ಅಜ್ಜಮಾಡ ಮತ್ತು ನಾಗಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಗಂಡ ತಂಡವು ಅಜ್ಜಮಾಡ ತಂಡವನ್ನು ಟೈಬ್ರೇಕರ್‌ನಲ್ಲಿ ೩-೨ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಐನಂಡ ಮತ್ತು ಕಂಬೆಯAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಐನಂಡ ತಂಡವು ಕಂಬೆಯAಡ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ಐನಂಡ ತಂಡದ ಪರ ನಿರಂಜನ್ ಕುಶಾಲಪ್ಪ ಮತ್ತು ನಾಚಪ್ಪ ತಲಾ ಒಂದೊAದು ಗೋಲು ದಾಖಲಿಸಿದರು. ಮಂದನೆರವAಡ ಮತ್ತು ಮುರುವಂಡ ತಂಡಗಳ ನಡುವಿನ ಪಂದ್ಯದಲ್ಲಿ ಮುರುವಂಡ ತಂಡವು ೫-೦ ಗೋಲಿನಿಂದ ಮಂದನೆರವAಡ ತಂಡವನ್ನು ಪರಾಭವಗೊಳಿಸಿತು. ಮುರುವಂಡ ತಂಡದ ಪರ ವರುಣ್ ಗಣಪತಿ ಮೂರು ಮತ್ತು ಕಾರ್ಯಪ್ಪ, ವಿವಿಧ್ ಉತ್ತಪ್ಪ ಒಂದೊAದು ಗೋಲು ದಾಖಲಿಸಿದರು.

ಮೈದಾನ ೨ರಲ್ಲಿ ನಡೆದ ಕರ್ತಮಾಡ ಮತ್ತು ಮೊಣ್ಣಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಕರ್ತಮಾಡ ತಂಡವು ಮೊಣ್ಣಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿತು. ಕರ್ತಮಾಡ ತಂಡದ ಪರ ಲಿತೇಶ್ ಮುತ್ತಪ್ಪ ಎರಡು, ರಾಯ್ ಪೊನ್ನಪ್ಪ ಒಂದು ಗೋಲು ದಾಖಲಿಸಿದರು. ಬೊಳ್ಳೇಪಂಡ ಮತ್ತು ಕರೋಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರೋಟಿರ ತಂಡವು ಬೊಳ್ಳೇಪಂಡ ತಂಡವನ್ನು ಟೈಬ್ರೇಕರ್‌ನಲ್ಲಿ ೪-೩ ಗೋಲುಗಳ ಅಂತರದಿAದ ಸೋಲಿಸಿತು.

ಅರೆಯಡ ಮತ್ತು ಅಮ್ಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅರೆಯಡ ತಂಡವು ಪೆಮ್ಮಂಡ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ಅರೆಯಡ ತಂಡದ ಪರ ಸನು ಚಿಣ್ಣಪ್ಪ, ಅಪನ್ ತಮ್ಮಯ್ಯ ತಲಾ ಒಂದು ಗೋಲು ದಾಖಲಿಸಿದರು. ಪೆಮ್ಮಂಡ ಮತ್ತು ಮೂಕಳೇರ ತಂಡಗಳ ನಡುವಿನ ಸೆಣೆಸಾಟದಲ್ಲಿ ಪೆಮ್ಮಂಡ ತಂಡವು ಮೂಕಳೇರ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿತು.

ಪೆಮ್ಮಂಡ ತಂಡದ ಸುಗಮ್ ಮಂದಣ್ಣ, ಸೋಮಣ್ಣ ತಲಾ ಒಂದು ಗೋಲು ದಾಖಲಿಸಿದರು. ಅಪ್ಪಚೆಟ್ಟೋಳಂಡ ಮತ್ತು ಮಚ್ಚಾರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಪ್ಪಚೆಟ್ಟೋಳಂಡ ತಂಡವು ಮಚ್ಚಾರಂಡ ತಂಡವನ್ನು ಟೈಬ್ರೇಕರ್‌ನಲ್ಲಿ ೫-೪ ಗೋಲುಗಳಿಂದ ಸೋಲಿಸಿತು. ನೆಲ್ಲಮಕ್ಕಡ ಮತ್ತು ದಾಸಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡವು ದಾಸಂಡ ತಂಡವನ್ನು ೪-೦ ಗೋಲುಗಳ ಅಂತರದಲ್ಲಿ ಸೋಲಿಸಿತು. ನೆಲ್ಲಮಕ್ಕಡ ತಂಡದ ಪರ ಪ್ರತೀಕ್ ಪೂವಣ್ಣ ಎರಡು, ಆಶಿಕ್ ಅಪ್ಪಣ್ಣ, ಅಯ್ಯಪ್ಪ ತಲಾ ಒಂದೊAದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. -ಪಿ.ವಿ. ಪ್ರಭಾಕರ್