ಗೋಣಿಕೊಪ್ಪಲು, ಏ. ೧೩: ಕ್ಷೇತ್ರದ ಉದ್ದಾಗಲಕ್ಕೂ ಮುಂಜಾನೆಯಿAದ ಸಂಜೆಯವರೆಗೂ ಬಿರುಸಿನ ಲೋಕಸಭಾ ಚುನಾವಣೆ ಕೆಲಸದಲ್ಲಿ ಪಾಲ್ಗೊಂಡಿದ್ದ ಶಾಸಕ ಪೊನ್ನಣ್ಣ, ಗೋಣಿಕೊಪ್ಪ - ವೀರಾಜಪೇಟೆ ಮುಖ್ಯ ರಸ್ತೆಯ ವೀರಾಜಪೇಟೆ ಬಳಿಯ ಕಾವೇರಿ ಕಾಲೇಜು ಸಮೀಪದಿಂದ ನಿರ್ಮಾಣವಾಗುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು.

ನಂತರ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ೨ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದ ಕಾಮಗಾರಿಯನ್ನು ಪರಿಶೀಲಿಸಿದ ಪೊನ್ನಣ್ಣ ಕಾಮಗಾರಿಗೆ ಮತ್ತಷ್ಟು ಚುರುಕು ನೀಡಲು ಸಂಬAಧಿಸಿದ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು. ಬಸ್ ನಿಲ್ದಾಣದ ಆವರಣದಲ್ಲಿ ಬೃಹತ್ ಗುಂಡಿಗಳನ್ನು ತೆಗೆದಿರುವ ಬಗ್ಗೆ ಸಾರ್ವಜನಿಕರಿಗೆ ತೀವ್ರ ಅಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಸಾರ್ವಜನಿಕರು ಈ ಹಿಂದೆ ಶಾಸಕರ ಬಳಿ ಮನವಿ ಸಲ್ಲಿಸಿದ್ದರು. ಮನವಿಯ ಹಿನ್ನೆಲೆಯಲ್ಲಿ ಖುದ್ದಾಗಿ ಆಗಮಿಸಿದ ಶಾಸಕ ಪೊನ್ನಣ್ಣ ವಸ್ತು ಸ್ಥಿತಿಯನ್ನು ಪರಿಶೀಲಿಸಿ, ಕಾಮಗಾರಿಗೆ ಸಂಬAಧಿಸಿದವರಿಗೆ ಹಲವು ನಿರ್ದೇಶನ ನೀಡಿದರು. ಈ ವೇಳೆ ಸ್ಥಳೀಯರಾದ ಪಿ.ಕೆ. ಪ್ರವೀಣ್ ಉಪಸ್ಥಿತರಿದ್ದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ಹಿಲ್ಸ್ ಬಡಾವಣೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಈ ಹಿನ್ನೆಲೆಯಲ್ಲಿ ಶಾಸಕ ಪೊನ್ನಣ್ಣ ಭೇಟಿ ಪರಿಶೀಲನೆ ನಡೆಸಿದರು. ನೀರಿನ ಸಮಸ್ಯೆ ಇರುವುದರಿಂದ ಕೊಳವೆ ಬಾವಿಯ ಆಳವನ್ನು ಹೆಚ್ಚು ಮಾಡಲು ನಿರ್ದೇಶನ ನೀಡಿದರು. ಭೇಟಿಯ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಬಡಾವಣೆಯ ನಿವಾಸಿಗಳಾದ ರಫಿಕ್, ಧನಲಕ್ಷಿö್ಮ, ಸೇರಿದಂತೆ ಬಡಾವಣೆ ನಿವಾಸಿಗಳು ಹಾಜರಿದ್ದರು.