ಮಡಿಕೇರಿ, ಏ. ೧೪: ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಆಶ್ವಾಸನೆ ಗಳು ಸುಳ್ಳಾಗಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿಗಳು ಜಾರಿಗೊಂಡಿದ್ದು, ನಮ್ಮ ಮಾತು ಸತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಸತ್ಯ ಹಾಗೂ ಸುಳ್ಳಿನ ನಡುವಿನ ಹೋರಾಟ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ನಗರದ ಗಾಂಧಿಮೈದಾನದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕುಮಾರಸ್ವಾಮಿ ವಿರುದ್ಧ ಕಿಡಿ
ಮಹಿಳೆಯರ ಅಭಿವೃದ್ಧಿಗಾಗಿ ಅವರಿಗೆ ಆರ್ಥಿಕ ಶಕ್ತಿ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗೃಹಲಕ್ಷಿö್ಮ ಶಕ್ತಿಯಂತಹ ಯೋಜನೆಗಳನ್ನು ಜಾರಿ ಮಾಡಿದೆ. ಈ ಯೋಜನೆಗಳಿಂದ ಮಹಿಳೆಯರು ಸದೃಢರಾಗುತ್ತಿದ್ದಾರೆ. ಹೀಗಿರುವಾಗ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಹೆಣ್ಣುಮಕ್ಕಳು ದಾರಿತಪ್ಪುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಇದು ಹೆಣ್ಣು ಕುಲಕ್ಕೆ ಕುಮಾರಸ್ವಾಮಿಯವರು ಮಾಡಿದ ಅವಮಾನ ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದರು. ಭಾರತ ಮಾತೆ ಹೆಣ್ಣು, ತಾಯಿ ಚಾಮುಂಡಿ ಹೆಣ್ಣು, ಕಾವೇರಿ ಹೆಣ್ಣು ಇವರುಗಳಿರುವ ಈ ಪವಿತ್ರ ನೆಲದಲ್ಲಿ ಹೆಣ್ಣುಮಕ್ಕಳ ಬಗ್ಗೆ ಅವಮಾನಕರವಾಗಿ ಮಾತನಾಡಿದ ಕುಮಾರಸ್ವಾಮಿಯವರೇ ನಿಮ್ಮ ಪಾಪ - ಪುಣ್ಯದ ಕಾರ್ಯಗಳ ಲೆಕ್ಕ ಇದ್ದೇ ಇರುತ್ತೆ ಎಂಬುದು ನಿಮ್ಮ ಗಮನದಲ್ಲಿರಲಿ ಎಂದು ಶಿವಕುಮಾರ್ ಛೇಡಿಸಿದರು. ಮಹಿಳೆಯರ ಬಗ್ಗೆ ಈ ರೀತಿ ಮಾತನಾಡುವವರನ್ನು ಪ್ರಧಾನಿಗಳು ತಮ್ಮ ಎನ್ಡಿಎನಲ್ಲಿ ಇರಿಸಿಕೊಳ್ಳುತ್ತಾರೆಯೇ? ನಿರ್ಮಲ ಸೀತಾರಾಮನ್, ಸ್ಮೃತಿ ಇರಾನಿ ಇವರುಗಳು ಈ ಬಗ್ಗೆ ಏನು ಹೇಳುತ್ತಾರೆ ಎಂದು ಡಿಕೆಶಿ ಪ್ರಶ್ನಿಸಿದರು.
ಗೌಡ ಸಮುದಾಯಕ್ಕೆ ನೋವಿದೆ
ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬ ಕಾರಣಕ್ಕಾಗಿ ಪ್ರತಾಪ್ಸಿಂಹ, ಸದಾನಂದಗೌಡ ಮತ್ತಿತರರಿಗೆ ಟಿಕೆಟ್ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಗೌಡ ಸಮುದಾಯದವರಿಗೆ ಬೇಸರವಾಗಿದ್ದು, ಕಾಂಗ್ರೆಸ್ಗೆ ಬೆಂಬಲಿಸುವುದಾಗಿ ತನ್ನ ಬಳಿ ಹೇಳಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ನುಡಿದರು. ಮತದಾರರು ಜಾತ್ಯತೀತ ಹಾಗೂ ಸರಳತೆಯ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವAತೆ ಶಿವಕುಮಾರ್ ಮನವಿ ಮಾಡಿದರು.
ಮುತ್ತು - ರತ್ನಗಳನ್ನು ಕೊಟ್ಟಿದ್ದೀರಿ
ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ೧೩೬ ಕಾಂಗ್ರೆಸ್ ಅಭ್ಯರ್ಥಿಗಳನ್ನು ರಾಜ್ಯದ ಜನ ಗೆಲ್ಲಿಸಿದ್ದಾರೆ. ಅವರಲ್ಲಿ ಪೊನ್ನಣ್ಣ ಹಾಗೂ ಮಂತರ್ ಕೂಡ ಸೇರಿದ್ದಾರೆ. ಕೊಡಗಿನಿಂದ ಮುತ್ತು - ರತ್ನಗಳನ್ನು ನಮಗೆ ಕೊಟ್ಟಿದ್ದೀರಿ ನಿಮಗೆ ನನ್ನ ಕೋಟಿ ನಮನಗಳು ಎಂದು ಡಿಕೆಶಿ ನುಡಿದರು. ದೇವರು ವರವನ್ನು ಕೊಡುವುದಿಲ್ಲ; ಶಾಪವನ್ನೂ ಕೊಡುವುದಿಲ್ಲ ಅವಕಾಶವನ್ನು ಮಾತ್ರ ಕೊಡುತ್ತಾನೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಜನತೆ ತಮ್ಮ ಅವಕಾಶವನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆAದು ಉಪಮುಖ್ಯಮಂತ್ರಿ ಮನವಿ ಮಾಡಿದರು.
ಜನರ ನೋವಿಗೆ ಸ್ಪಂದಿಸುತ್ತಿಲ್ಲ - ತನ್ವಿರ್ಸೇಠ್
ಕೇಂದ್ರ ಸರ್ಕಾರ ಜನರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವಿರ್ಸೇಠ್ ಆರೋಪಿಸಿದರು. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಎದುರು ಬೇಡುವಂತಹ ಪರಿಸ್ಥಿತಿ ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಕೊಡಗಿನ ಇಬ್ಬರು ಶಾಸಕರುಗಳು ಕೊಡಗನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮವಹಿಸುತ್ತಿದ್ದಾರೆ. ಕೊಡಗಿನ ಜನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೆAದು ಕೋರಿದರು.
ನಮ್ಮದು ಪ್ರೀತಿಯ ರಾಜಕಾರಣ : ಪೊನ್ನಣ್ಣ
ಕೊಡಗಿನಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದು ಮಾಜಿ ಶಾಸಕರುಗಳು ಹೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಜಾತಿ ಜಾತಿಗಳನ್ನು ಎತ್ತಿಕಟ್ಟಿ ಧರ್ಮಗಳನ್ನು ಒಡೆದು ದ್ವೇಷ ರಾಜಕಾರಣ ಮಾಡಿದವರು ಅವರುಗಳೇ ಹೊರತು ನಾವಲ್ಲ. ನಮ್ಮದೇನಿದ್ದರೂ ಪ್ರೀತಿಯ ರಾಜಕಾರಣ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮನೆ ಮಾತಾಗಿದೆ. ಮೂಲೆ ಮೂಲೆಗೂ ಯೋಜನೆಗಳು ತಲುಪುತ್ತಿವೆ. ಯೋಜನೆಗಳ ಅನುಷ್ಠಾನ ಸಮಿತಿಯನ್ನು ರಚಿಸಿ ನಮ್ಮ ಸರ್ಕಾರದ ಯೋಜನೆಗಳಿಂದ ಯಾರೊಬ್ಬರೂ ವಂಚಿತರಾಗದAತೆ ಕ್ರಮಕೈಗೊಳ್ಳಲಾಗಿದೆ. ಜನತೆ ತಮ್ಮ ಪರವಾಗಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಇದನ್ನು ಜನರ ಮುಂದಿಡಬೇಕೆAದು ಪೊನ್ನಣ್ಣ ಕಾರ್ಯಕರ್ತರಿಗೆ ಕರೆಯಿತ್ತರು.
ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಕಾಂಗ್ರೆಸ್ಗೆ ಬಂದ ಮತಗಳಿಗಿಂತಲೂ ಹೆಚ್ಚಿನ ಮತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬರುವಂತೆ ಮಾಡಲು ನಾವೆಲ್ಲರೂ ಶ್ರಮಿಸೋಣ ಎಂದ ಪೊನ್ನಣ್ಣ ರಾಜ್ಯದಲ್ಲಿ ಕೊಡಗು - ಮೈಸೂರು ಸೇರಿದಂತೆ ೨೨ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿಎಂ ಹಾಗೂ ಡಿಸಿಎಂ ಸರ್ಕಾರದ ಎರಡು ಸ್ಥಂಭಗಳAತೆ ಕೆಲಸ ಮಾಡುತ್ತಿದ್ದು, ಕೊಡಗಿಗೂ ಸರ್ಕಾರದಿಂದ ಉತ್ತಮ ಅನುದಾನ ಬಂದಿದೆ ಎಂದರು.
ಜಿಲ್ಲೆಯಲ್ಲಿ ಮೋದಿ ಹವಾ ಇಲ್ಲ : ಮಂತರ್
ಸಮಾಜ ಬೆಳವಣಿಗೆ ಆಗುತ್ತಿದೆಯೇ ಎಂಬುದನ್ನು ಸಮಾಜದಲ್ಲಿರುವ ಹೆಣ್ಣುಮಕ್ಕಳ ಏಳಿಗೆ ನೋಡಿ ತಿಳಿದುಕೊಳ್ಳಬಹುದು ಎಂಬದು ಅಂಬೇಡ್ಕರ್ ಅವರ ಮಾತು. ಅದರಂತೆ ಇಂದು ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಅಭಿವೃದ್ಧಿ ಆಗುತ್ತಿದೆ. ಜಿಲ್ಲೆಯಲ್ಲಿ ಗ್ಯಾರಂಟಿ ಹವಾ ಇದೆಯೆ ಹೊರತು ಮೋದಿ ಹವಾ ನಡೆಯುತ್ತಿಲ್ಲ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ಗೌಡ ಹೇಳಿದರು. ಕೊಡಗಿನ ಎರಡೂ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚು ಮತಗಳ ಲೀಡ್ ಕೊಡಲಾಗುತ್ತದೆ ಎಂದು ಹೇಳಿದ ಮಂತರ್, ಜಿಲ್ಲೆಯ ಮಾಜಿ ಶಾಸಕರುಗಳು ತಮ್ಮ ಅಧಿಕಾರಾವಧಿಯಲ್ಲಿ ಜಾತಿ ಧರ್ಮಗಳ ನಡುವೆ ದ್ವೇಷ ಬಿತ್ತಿದರೇ ಹೊರತು ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಲ್ಲ ಎಂದು ಆರೋಪಿಸಿದರು.