ಮಡಿಕೇರಿ, ಏ. ೧೪: ನಗರದ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದ ವತಿಯಿಂದ ಶ್ರೀ ರಾಮಮಂದಿರ ಟ್ರಸ್ಟ್, ಶ್ರೀರಾಮ ಸೇವಾ ಸಮಿತಿ, ಜ್ಯೋತಿ ಯುವಕ ಸಂಘ, ಕೋದಂಡ ರಾಮ ಭಜನಾ ಮಂಡಳಿ ಸಹಯೋಗದೊಂದಿಗೆ ತಾ. ೧೭ ರಂದು ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ರಾಮನವಮಿ ಉತ್ಸವ ನಡೆಯಲಿದೆ.
ಅಂದು ಬೆಳಿಗ್ಗೆ ೭.೩೦ಕ್ಕೆ ತತ್ವ ಕಲಶ ಹೋಮ, ನವಗ್ರಹ ಹೋಮ, ತತ್ವ ಕಲಶಾಭಿಷೇಕ, ಮಹಾಮಂಗಳಾರತಿ, ೯ ಗಂಟೆಗೆ ದೇವಾಲಯದ ಆವರಣದಿಂದ ಉತ್ಸವ ಮೂರ್ತಿ ಹೊತ್ತ ಹೂವಿನ ಅಲಂಕೃತ ಮಂಟಪದೊAದಿಗೆ ನಗರದ ಮುಖ್ಯಬೀದಿಗಳಲ್ಲಿ ಮೆರವಣಿಗೆ, ೧೨.೩೦ಕ್ಕೆ ದೇವಾಲಯದಲ್ಲಿ ಮಹಾಮಂಗಳಾರತಿ ಬಳಿಕ ಕೋಸಂಬರಿ ಪಾನಕ ವಿತರಣೆ ನಡೆದು ಭಕ್ತಾದಿಗಳಿಗೆ ಅನ್ನಸಂರ್ಪಣೆ ಜರುಗಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.