ಮಡಿಕೇರಿ, ಏ. ೧೪: ಭಾರತದ ಸಂವಿಧಾನ ಉಳಿಯಬೇಕಾದರೆ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಆಶೀರ್ವಾದ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಗಾಂಧಿ ಮೈದಾನದಲ್ಲಿ ಲೋಕಸಭಾ ಚುನಾವಣೆ ಸಂಬAಧ ಆಯೋಜಿಸಲಾಗಿದ್ದ ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಸಂವಿಧಾನದ ಬಗ್ಗೆ ಬಿಜೆಪಿಗಾಗಲಿ, ಆರ್ಎಸ್ಎಸ್ಗಾಗಲಿ ನಂಬಿಕೆ ಇಲ್ಲ. ಆಗಿಂದಾಗ್ಗೆ ಬಿಜೆಪಿ ನಾಯಕರು ಸಂವಿಧಾನವನ್ನು ಬದಲಿಸುತ್ತೇವೆ ಎಂದು ಹೇಳುತ್ತಾರೆ.
ಕೇಂದ್ರದಲ್ಲಿ ಸಚಿವರಾಗಿದ್ದ ಅನಂತ್ ಕುಮಾರ್ ಹೆಗಡೆಯವರು ನಾವು ಅಧಿಕಾರಕ್ಕೆ ಬಂದಿದ್ದೆ ಸಂವಿಧಾನವನ್ನು ಬದಲಾವಣೆ ಮಾಡೋಕೆ ಎಂದು ಹೇಳಿಕೆ ನೀಡಿದ್ದರು. ಅವರ ಮೇಲೆ ಬಿಜೆಪಿ ಏನಾದರೂ ಕ್ರಮ ತೆಗೆದುಕೊಂಡಿತೇ ಎಂದು ಪ್ರಶ್ನಿಸಿದ ಸಿಎಂ, ಸಂವಿಧಾನವನ್ನು ಬದಲಾಯಿಸಬೇಕೆಂಬುದೇ ಬಿಜೆಪಿಯ ‘ಹಿಡನ್ ಅಜೆಂಡಾ’ ಎಂದು ಆರೋಪಿಸಿದರು. ದೇಶದಲ್ಲಿ ಸಂವಿಧಾನ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯ. ಸರ್ವಾಧಿಕಾರದಲ್ಲಿ ನಂಬಿಕೆ ಇಟ್ಟಿರುವ ಬಿಜೆಪಿಯಿಂದ ಸಂವಿಧಾನ ಹಾಗೂ ಪ್ರಜಾತಂತ್ರ ವ್ಯವಸ್ಥೆ ಅಪಾಯದಲ್ಲಿದ್ದು ಅವುಗಳ ರಕ್ಷಣೆ ಆಗಬೇಕಾದರೆ ಮತದಾರರು ಕಾಂಗ್ರೆಸ್ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಬೇಕೆAದು ಸಿದ್ದರಾಮಯ್ಯ ಮನವಿ ಮಾಡಿದರು. ಪ್ರಧಾನಿ ಮೋದಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಪ್ರಜಾಪ್ರಭುತ್ವ ನೀತಿಯಲ್ಲಿ ಕೆಲಸ ಮಾಡುವ ಬದಲು ಆರ್ಎಸ್ಎಸ್ ಸಿದ್ದಾಂತಕ್ಕೆ ಅನುಗುಣವಾಗಿ ಆಡಳಿತ ನಡೆಸಿದ್ದಾರೆ ಎಂದು ದೂರಿದ ಸಿಎಂ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಗಳ ಎದುರು ಬಂದು ಮಾತನಾಡುವ ಧೈರ್ಯವನ್ನು ಕೂಡ ಮೋದಿಯವರು ಪ್ರದರ್ಶಿಸಲಿಲ್ಲ. ಅಲ್ಲದೆ ‘ಮನ್ ಕಿ ಬಾತ್’ನಲ್ಲಿ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲವೆಂದು ಟೀಕಿಸಿದರು.
ಸುಳ್ಳನ್ನೇ ಹೇಳುವ ಮೋದಿ
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ೧೦ ವರ್ಷ ಗಳನ್ನು ಪೂರೈ ಸಿದೆ. ಆದರೆ ಇದುವರೆಗೂ ಮೋದಿಯವರು ನೀಡಿದ ಯಾವುದೇ ಆಶ್ವಾಸನೆಗಳು ಈಡೇರಿಲ್ಲ. ವಿದೇಶದಲ್ಲಿರುವ ಕಪ್ಪು ಹಣ ತರುತ್ತೇವೆ, ಬಡವರ ಖಾತೆಗೆ ರೂ. ೧೫ ಲಕ್ಷ ಹಣ ಹಾಕುತ್ತೇವೆ, ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂಬಿತ್ಯಾದಿ ಭರವಸೆಗಳೆಲ್ಲವೂ ಭರವಸೆಯಾಗಿ ಉಳಿದಿದ್ದು, ಮೋದಿ ಅವರು ಸುಳ್ಳನ್ನೇ ಹೇಳುತ್ತಾ ಬಂದಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು. ‘ಅಚ್ಚೇದಿನ್’ ಎನ್ನುವ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನತೆ ತತ್ತರಿಸಿಹೋಗಿದ್ದಾರೆ ಎಂದು ಅವರು ಹೇಳಿದರು.
ಸ್ವಾತಂತ್ರö್ಯ ಕೊಟ್ಟಿದ್ದು ಕಾಂಗ್ರೆಸ್
ಮಾತೆತ್ತಿದರೆ ಬಿಜೆಪಿಯವರು ದೇಶ ಭಕ್ತರು ನಾವು ಎಂದು ಹೇಳಿಕೊಳ್ಳುತ್ತಾರೆ. ಯಾರಾದರೂ ಒಬ್ಬ ಬಿಜೆಪಿ ಅಥವಾ ಆರ್ಎಸ್ಎಸ್ ವ್ಯಕ್ತಿ ಸ್ವಾತಂತ್ರö್ಯ ಹೋರಾಟದಲ್ಲಿ ಭಾಗಿಯಾಗಿ ಹುತಾತ್ಮರಾಗಿದ್ದರೆ ತೋರಿಸಿ ಎಂದು ಸವಾಲೆಸೆದ ಸಿದ್ದರಾಮಯ್ಯ, ಈ ದೇಶಕ್ಕೆ ಸ್ವಾತಂತ್ರö್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಎಂದು ನುಡಿದರು.
ಕೊಡಗಿಗೆ ಏನು ಬೇಕಾದರೂ ಮಾಡುವೆ
ಕಳೆದ ೨೫ ವರ್ಷ ಕೊಡಗಿನಲ್ಲಿ ಬಿಜೆಪಿ ಶಾಸಕರುಗಳಿದ್ದರೂ ಕೊಡಗಿಗೆ ಏನೂ ಕೊಡುಗೆ ಕೊಟ್ಟಿಲ್ಲ. ಕೊಡಗಿನ ಜನ ಪ್ರಬುದ್ಧರಾಗಿದ್ದು, ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಶಾಸಕರುಗಳಾದ ಪೊನ್ನಣ್ಣ, ಮಂತರ್ಗೌಡ ಕೊಡಗಿಗಾಗಿ ಏನೇ ಕೇಳಿದರೂ ಅದನ್ನು ನಾನು ಮಾಡಿಕೊಡುತ್ತೇನೆ ಎಂದು ಭರವಸೆಯಿತ್ತ ಸಿಎಂ, ಕೊಡಗಿನ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಸೋಲಿನ ಭಯದಿಂದ ಬದಲಾವಣೆ
ಕೊಡಗು ಮೈಸೂರು ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಅವರನ್ನು ಸೋಲುವ ಭಯದಿಂದ ಬಿಜೆಪಿ ಬದಲಾವಣೆ ಮಾಡಿದೆ ಎಂದು ಕುಹಕವಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಜನಪರ ಕಾಳಜಿ ಉಳ್ಳವರಾಗಿದ್ದು, ಅವರನ್ನು ಬೆಂಬಲಿಸುವAತೆ ಕೈಜೋಡಿಸಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಅನುದಾನದ ಬಗ್ಗೆ ಬಾಯಿ ಬಿಟ್ಟಿಲ್ಲ
ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಿರುವ ಅನುದಾನದ ಬಗ್ಗೆ ಬಿಜೆಪಿ ಶಾಸಕರಾಗಲಿ ಸಂಸದರಾಗಲಿ ಬಾಯಿಬಿಟ್ಟಿದ್ದಾರಾ ಎಂದು ಸಿಎಂ ಪ್ರಶ್ನಿಸಿದರು. ಅನುದಾನದ ಬಗ್ಗೆ ಕೇಳಿದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹಣ ಕೇಳುತ್ತಿದೆ ಎನ್ನುತ್ತಾರೆ ಎಂದು ತಿಳಿಸಿದ ಸಿದ್ದರಾಮಯ್ಯ, ಅಮ್ಮಾ ತಾಯಿ ಗ್ಯಾರಂಟಿಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬಜೆಟ್ನಲ್ಲಿ ಹಣ ಮೀಸಲಿಟ್ಟಿದೆ ಅದಕ್ಕೆ ಕೇಂದ್ರ ಸರ್ಕಾರದ ಹಣ ಬೇಕಿಲ್ಲ. ನಾವು ಕೇಳುತ್ತಿರುವುದು ಕೇಂದ್ರದಿAದ ರಾಜ್ಯ ಸರ್ಕಾರಕ್ಕೆ ನ್ಯಾಯಯುತವಾಗಿ ಬರಬೇಕಾದ ಅನುದಾನವನ್ನು ಎಂದು ನುಡಿದರು. ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಪ್ರಯುಕ್ತ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ವಿವಿಧ ಪಕ್ಷಗಳ ಕಾರ್ಯಕರ್ತರು, ಪ್ರಮುಖರು ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ವೇದಿಕೆಯಲ್ಲಿ ಸಚಿವರುಗಳಾದ ಮಹದೇವಪ್ಪ, ವೆಂಕಟೇಶ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ಕುಮಾರ್ ಸೊರಕೆ, ವಿಧಾನಪರಿಷತ್ ಮಾಜಿ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ, ಮಾಜಿ ಸಚಿವರುಗಳಾದ ಯಂ.ಸಿ. ನಾಣಯ್ಯ, ಸುಮಾವಸಂತ್, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ. ಚಂದ್ರಕಲಾ, ಚಂದ್ರಮೌಳಿ, ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹರೋಜ್ ಖಾನ್, ಪಕ್ಷದ ಪ್ರಮುಖರಾದ ಟಿ.ಎನ್. ಶಾಹಿದ್, ಡಾ. ಶ್ರುಶುತ ಗೌಡ, ವಿನೋದ್ ಶಿವಪ್ಪ, ಚಿತ್ರನಟ ಸಾಧುಕೋಕಿಲ ಕಾಂಗ್ರೆಸ್ ಮಾಧ್ಯಮ ಸಂವಹನ ವಕ್ತಾರ ಟಿ.ಪಿ. ರಮೇಶ್ ಮತ್ತು ಇತರರು ಉಪಸ್ಥಿತರಿದ್ದರು.
ಸಾಧುಕೋಕಿಲ ತಂಡ ಹಾಗೂ ಸೇವಾದಳದವರು ವಂದೇ ಮಾತರಂ ಗೀತೆ ಹಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್ ನಿರೂಪಿಸಿದರು.