ಮಡಿಕೇರಿ, ಏ. ೧೩: ಬೆಂಗಳೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಮಹಿಳಾ ಘಟಕದ ವತಿಯಿಂದ ಲಗ್ಗೆರೆಯ ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಮಹಿಳಾ ದಿನಾಚರಣೆ ಯನ್ನು ಆಚರಿಸಲಾಯಿತು.

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಕಾರ್ಯದರ್ಶಿ ಕುಂಭಗೌಡನ ಸೋಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಘಟಕದ ಅಧ್ಯಕ್ಷೆ ಶಶಿಪ್ರಭಾ ಮಡ್ತಿಲ ಮಹಿಳಾ ದಿನಾಚರಣೆಯ ಮಹತ್ವ ಹಾಗೂ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ರೇಣುಕ ಮುಕ್ಕಾಟಿ ಚೈತನ್ಯ ಚಿಕಿತ್ಸಾ ವಿಧಾನ ಪ್ರಾತ್ಯಕ್ಷಿಕೆ ಮಹಿಳಾ ದಿನಾಚರಣೆಗೆ ಹೆಚ್ಚಿನ ಮೆರುಗನ್ನು ನೀಡಿತು. ಒಗಟುಗಳು ಹಾಗೂ ವಿವಿಧ ಲಕ್ಕಿ ಗೇಮ್ಸ್ನಲ್ಲಿ ಮಹಿಳಾ ಘಟಕದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡರು.

ಜಂಟಿ ಕಾರ್ಯದರ್ಶಿ ಲತಾ ರಾಜೇಶ್ ಕಟ್ರತನ ಹಾಗೂ ಪ್ರಮೋದಿನಿ ನಾಗೇಶ್ ಬಂಟೋಡಿ ಉಳುವಾರು ಉಪಸ್ಥಿತರಿದ್ದರು. ಯುವ ಘಟಕದ ಖಜಾಂಚಿ ನವೀಶ್ ಪೂಣಚ್ಚ ಕುಂಡ್ಯಾನ ಮಾತನಾಡಿದರು.

ಮಂಜುಳಾ ಮಯಾಕ್ ಪ್ರಾರ್ಥಿಸಿ, ವನಿತಾ ರಾಧಕೃಷ್ಣ ಸ್ವಾಗತಿಸಿ, ಲೀಲಾ ಸೋಮಣ್ಣ ನಿರೂಪಿಸಿ, ವಂದಿಸಿದರು.