ವೀರಾಜಪೇಟೆ, ಏ. ೧೨: ವೀರಾಜಪೇಟೆ ಡಿವೈಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಆನಂದ ಡೊಳ್ಳಿನ (೩೫) ಅವರು ಹೃದಯಾಘಾತದಿಂದ ಶುಕ್ರವಾರ ಮೃತಪಟ್ಟಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಂಗೊಳ್ಳಿ ಗ್ರಾಮದ ಆನಂದ ಡೊಳ್ಳಿನ ಅವರು ಶುಕ್ರವಾರ ಬೆಳಿಗ್ಗೆ ೬.೩೦ ರ ಸುಮಾರಿಗೆ ಕರ್ತವ್ಯಕ್ಕೆಂದು ಬಂದಾಗ ಎದೆನೋವು ಕಾಣಿಸಿಕೊಂಡಿದೆ. ಈ ಸಂದರ್ಭ ಪಕ್ಕದಲ್ಲೇ ಇದ್ದ ಪೊಲೀಸ್ ಸಿಬ್ಬಂದಿಗಳು ಆನಂದ ಡೊಳ್ಳಿಯವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಕ್ಷಣ ವೈದ್ಯರು ಪರೀಕ್ಷೆ ನಡೆಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಆನಂದ ಡೊಳ್ಳಿನ ಅವರ ಸಹೋದರ ವೀರಾಜಪೇಟೆಗೆ ಆಗಮಿಸಿದ ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು
ಕರ್ತವ್ಯನಿರತ ಪೊಲೀಸ್ ಪೇದೆ ಸಾವು
(ಮೊದಲ ಪುಟದಿಂದ) ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಿ, ಬಳಿಕ ಅವರು ವಾಸವಾಗಿದ್ದ ಪೊಲೀಸ್ ವಸತಿಗೃಹಕ್ಕೆ ತಂದು ಮೃತದೇಹಕ್ಕೆ ಪೊಲೀಸ್ ಗೌರವ ಸೂಚಿಸಿ ಅಂತಿಮ ನಮನ ಸಲ್ಲಿಸಲಾಯಿತು. ನಂತರ ಅವರ ಕುಟುಂಬದವರಿಗೆ ಮೃತ ದೇಹವನ್ನು ಒಪ್ಪಿಸಿ ಸ್ವಂತ ಊರು ಗೋಕಾಕದ ಸಂಗೊಳ್ಳಿಗೆ ಸಾಗಿಸಲಾಗಿದೆ. ಆನಂದ ಡೊಳ್ಳಿನ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ರಾಜ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಸ್ಥಳಾಕ್ಕಾಗಮಿಸಿ ಅಂತಿಮ ದರ್ಶನ ಪಡೆದರು.
ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್, ವೃತ್ತ ನಿರೀಕ್ಷಕ ಶಿವರುದ್ರ, ವೀರಾಜಪೇಟೆ ನಗರ ಮತ್ತು ಗ್ರಾಮಾಂತರ ಠಾಣಾಧಿಕಾರಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಅಂತಿಮ ನಮನ ಸಲ್ಲಿಸಿದರು.