ಸುಂಟಿಕೊಪ್ಪ, ಏ. ೧೩: ಮಳೂರು ಬೆಳ್ಳೇರಿಕಮ್ಮ ದೇವಸ್ಥಾನ ವಾರ್ಷಿಕೋತ್ಸವ ತಾ. ೧೫ ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ. ಉಲುಗುಲಿ, ಹರದೂರು, ಆಂಜನಗೇರಿ ಬೆಟ್ಟಗೇರಿ ಗ್ರಾಮಸ್ಥರು ಸೇರಿ ಆಚರಿಸಿಕೊಂಡು ಬರುತ್ತಿರುವ ಬೆಳ್ಳೇರಿಕಮ್ಮ ವಾರ್ಷಿಕ ಉತ್ಸವವು ಬೆಳಿಗ್ಗೆ ೮.೩೦ ಗಂಟೆಗೆ ಮಂದನ ಮನೆಯಿಂದ ಭಂಡಾರ ಹೊರಡುವುದು, ೯.೩೦ ಗಂಟೆಗೆ ದೇವರ ಸನ್ನಿಧಿಯನ್ನು ಸೇರುವುದು, ೧೦ ಗಂಟೆಗೆ ಶ್ರೀ ದೇವರ ಬೆಳಕು, ೧೦.೩೦ಕ್ಕೆ ಶ್ರೀ ದೇವರ ಚೌಲಿಆಟ(ನೃತ್ಯಸೇವೆ) ೧೧.ಗಂಟೆಗೆ ದೇವರ ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ಹೊರತರುವುದು, ೧೧.೩೦ ಗಂಟೆಗೆ ವಸಂತ ಕಟ್ಟೆಯಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯ ಪೂಜೆ, ೧೧.೪೫ ಗಂಟೆಗೆ ಉತ್ಸವ ಸುಂಟಿಕೊಪ್ಪ, ಏ. ೧೩: ಮಳೂರು ಬೆಳ್ಳೇರಿಕಮ್ಮ ದೇವಸ್ಥಾನ ವಾರ್ಷಿಕೋತ್ಸವ ತಾ. ೧೫ ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ. ಉಲುಗುಲಿ, ಹರದೂರು, ಆಂಜನಗೇರಿ ಬೆಟ್ಟಗೇರಿ ಗ್ರಾಮಸ್ಥರು ಸೇರಿ ಆಚರಿಸಿಕೊಂಡು ಬರುತ್ತಿರುವ ಬೆಳ್ಳೇರಿಕಮ್ಮ ವಾರ್ಷಿಕ ಉತ್ಸವವು ಬೆಳಿಗ್ಗೆ ೮.೩೦ ಗಂಟೆಗೆ ಮಂದನ ಮನೆಯಿಂದ ಭಂಡಾರ ಹೊರಡುವುದು, ೯.೩೦ ಗಂಟೆಗೆ ದೇವರ ಸನ್ನಿಧಿಯನ್ನು ಸೇರುವುದು, ೧೦ ಗಂಟೆಗೆ ಶ್ರೀ ದೇವರ ಬೆಳಕು, ೧೦.೩೦ಕ್ಕೆ ಶ್ರೀ ದೇವರ ಚೌಲಿಆಟ(ನೃತ್ಯಸೇವೆ) ೧೧.ಗಂಟೆಗೆ ದೇವರ ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ಹೊರತರುವುದು, ೧೧.೩೦ ಗಂಟೆಗೆ ವಸಂತ ಕಟ್ಟೆಯಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯ ಪೂಜೆ, ೧೧.೪೫ ಗಂಟೆಗೆ ಉತ್ಸವ ಮೂರ್ತಿಯ ನೃತ್ಯ ಬಲಿ, ದರ್ಶನ ಬಲಿ, ೧೨.೪೫ ಗಂಟೆಗೆ ಶ್ರೀ ದೇವರಿಗೆ ಭಂಡಾರ ಹಾಕುವುದು, ಮಧ್ಯಾಹ್ನ ೧ ಗಂಟೆಗೆ ತೀರ್ಥ ಪ್ರಸಾದ ವಿತರಣೆ ಹಾಗೂ ೧.೩೦ ಗಂಟೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.